ಚಿತ್ರ ಕೃಪೆ ಪ್ರಜಾವಾಣಿ
ಎಸ್. ಕೆ. ಗಜೇಂದ್ರ ಸ್ವಾಮಿ
ಸಾಲವೆಂಬ ಶೂಲದೊಳಗೆ ಬಂಧಿಯಾಗದಿರಲು ಬಹಳಷ್ಟು ಜನ ಹಿತವಚನದ ಮಾತು ಹೇಳುತ್ತಾರೆ. ಆದರೆ ಬದುಕಿನ ಅನಿವಾರ್ಯಕ್ಕೆ ಆಯಾ ಕ್ಷಣದ ಬದುಕಿಗಾಗಿ ಸಾಲ ಎಂಬುದು ನಮ್ಮ ನಡುವಿನ ಕೊಡುವ ಕೈಯ ಒಂದು ವ್ಯವಹಾರ ಎಂದರೆ ತಪ್ಪಾಗಲಿಕ್ಕಿಲ್ಲ.
ಆದರೆ ಕೆಲವೇ ಕೆಲವು ವಿಕೃತ ಮನಸ್ಸಿನವರು ತಮ್ಮ ತಮ್ಮ ಬೇಕಿಲ್ಲದ ವಿಕೃತತೆಗೆ ನಾನಾ ಬಗೆಯ ನಾಟಕವಾಡಿ ಹೇಗೋ ಒಂದಿಷ್ಟು ಸಾಲ ಪಡೆಯುತ್ತಾರೆ. ಅಲ್ಲಿಯವರೆಗೆ ಮಾತ್ರ ಸಾಲ ಕೊಟ್ಟವನು ಅವರಿಗೆ ಅಣ್ಣ, ಅಪ್ಪ, ದೇವರು ಎಲ್ಲದೂ ಆಗಿರುತ್ತಾನೆ. ನಂತರ ಮೆಲ್ಲಗೆ ಹೊಸ ಬಗೆಯ ಆಟ ತೆಗೆಯುತ್ತಾರೆ.
ಕೊಟ್ಟ ಸಾಲವನ್ನು ವಾಪಸ್ ಪಡೆಯುವಾಗ ಪಾಪ ಅಮಾಯಕನಂತೆ ಅಯ್ಯೋ ಪಾಪ ಎಂದು ಸಾಲ ಕೊಟ್ಟವನು ಹುಚ್ಚನಂತಾಗುವುದು ಇಂತಹ ಕೆಲ ವಿಕೃತ ಮನಸ್ಸುಗಳಿಂದ ಎಂದರೇ ತಪ್ಪಾಗಲಿಕ್ಕಿಲ್ಲ.
ಸಾಲವನ್ನು ವಾಪಸ್ ಕೊಡುವುದು ಮಾಮೂಲಿ ವೇದಿಕೆಯಾಗಿ ಕಂಡುಬರುತ್ತದೆ. ಆದರೆ ಕೆಲವರು ಇನ್ನರ್ಧ ಗಂಟೆ, ಇನ್ನೊಂದು ಗಂಟೆಯಲ್ಲಿ ನಿನಗೆ ಬರುತ್ತದೆ. ನಿನ್ನ ಬ್ಯಾಂಕ್ ಗೆ ಹಣ ಹಾಕುತ್ತೇನೆ ನಾಳೆ ಖಂಡಿತ ತಪ್ಪಿಸುವುದಿಲ್ಲ, ಇನ್ನೆರಡು ದಿನದಲ್ಲಿ ಕೊಡುತ್ತೇನೆ, ಮುಂದಿನ ವಾರ ನಾನು ಕೊಡದಿದ್ದರೆ ಚಪ್ಪಲಿಯಲ್ಲಿ ಹೊಡೆಯುವಂತೆ ಎಂದು ಏನೇನೋ ಹೇಳುತ್ತಾನೆ. ಅಷ್ಟೂ ಬಡಿಸಹಿತ ಕೊಡುತ್ತೇನೆ ಎಂದು ಅಯ್ಯೋ ಪಾಪ ಎಂದವನ ಮನಸನ್ನೆ ಬದಲಿಸ್ತಾರೆ.
ನಂತರ ಮತ್ತದೇ ಮಂಗನಾಟ ಆಡಿ ಈಗ ಬಂತು ನೋಡ್ರಿ ಎಂದು ಸಮಯವನ್ನು ತಳ್ಳುತ್ತಾರೆ .ಸಿಟ್ಟು ಬಂದು ಸಾಲ ಕೊಟ್ಟವನು ಬೈದರೆ ಏನು ಸೀಮೆಗಿಲ್ಲದ ಹಣ ಕೊಟ್ಟಿದ್ದೀಯ ಮಾರಾಯ ಎಂದು ದೊಡ್ಡ ಸಮಾಜ ಉದ್ಧಾರಕನಂತೆ ಮಾತನಾಡುತ್ತಾನೆ. ಕೆಲವೊಮ್ಮೆ ಏನಕ್ಕಾದರೂ ಅವತ್ತು ಹಣ ಕೊಟ್ಟೆನೋ ಎಂದು ಪರಿತಪಿಸುವ ಪರಿಸ್ಥಿತಿ ಬಂದಿರುವುದು ಇಂತಹ ಸಮಾಜಘಾತಕ ವಂಚಕ, ವಿಕೃತ ಮನಸುಗಳಿಂದ ಎಂದರೆ, ತಪ್ಪಾಗಲಿಕ್ಕಿಲ್ಲ ಅಲ್ಲವೇ?