ವಾರದ ಅಂಕಣ- 14
ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
ಈ ಜಗತ್ತಿನಲ್ಲಿ ನಡೆಯುವ ಎಲ್ಲಾ ಘಟನೆಗಳ ನಡುವೆ ಕಾಣಿಸುವ ಮನಸ್ತಾಪಗಳು ಕೊನೆಯ ಹಂತದಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಯುತ್ತವೆ. ಮತ್ತೆ ಅದೇ ರಗಳೆ ಶುರುವಾಗುತ್ತದೆ ಎಂಬುದನ್ನು ನಾವು ನಿರಂತರವಾಗಿ ಕಣ್ಣಾರೆ ಕಂಡಿದ್ದೇವೆ ಅಲ್ಲವೇ?
ಈ ಸಂದಾನ ಮಾತುಕತೆ, ರಾಜಿ ಪಂಚಾಯಿತಿ ಕೆಲ ನೆಪ ಮಾತ್ರದ ಉದ್ದೇಶಗಳಿಗೆ ಎಂದರೆ ಸರಿಯಾಗುವುದಿಲ್ಲ ಅಲ್ಲವೇ ಎಲ್ಲೆಡೆ ಮನಸು, ಮನಸ್ತಾಪ ಒಂದಿಷ್ಟು ಕಿರಿಕಿರಿ ಬೇಸರಗಳು ಸಹಜವಾಗಿದ್ದು ಅವುಗಳನ್ನು ಮೀರಿ ಒಂದಿಷ್ಟು ಬಾಂಧವ್ಯ ಬೆಸೆಯುವ ಈ ರಾಜಿ ಪಂಚಾಯ್ತಿಗಳು ಪರಸ್ಪರ ಮನಸ್ಸುಗಳನ್ನು ಆ ಕ್ಷಣದಲ್ಲಿ ಜೊತೆಗೂಡಿಸಿರುತ್ತವೆ ಎಂಬುದು ವಾಸ್ತವದ ಸತ್ಯವಲ್ಲವೇ? ಆದರೆ ಅಲ್ಲಿ ಒಂದಾದ ಮನಸುಗಳು ತೋರುವಿಕೆಗೆ ಬಹಳಷ್ಟು ಕಡೆ ಕಂಡು ಬರುತ್ತದೆ.
ಮನಸುಗಳನ್ನು ಬೆಸೆಯಬಹುದಾದ ಸಂಬಂಧಗಳು ಕೆಲ ವರ್ತನೆಗಳಿಂದ, ಕೆಲ ವಂಚನೆಗಳಿಂದ, ಪರಸ್ಪರ ಅಸೂಯೆ, ದ್ವೇಷ, ಮನೋಭಾವಕ್ಕೆ ತಿರುಗುವುದು ಸಹಜ.
ಇಂತಹ ಹೊತ್ತಿನಲ್ಲಿ ಮುಕ್ತ ಮಾತುಕತೆ ನಡೆದ ತಪ್ಪಿಗೊಂದು ಪ್ರೀತಿಯ ಸಾರಿ ಅಪ್ಪುಗೆ ಹೇಳುವುದು ಬಹಳಷ್ಟು ಕಡೆ ಸಾಮಾನ್ಯ ಪ್ರಕ್ರಿಯೆಯಾಗಿದೆ. ಇಲ್ಲಿ ಮನಸುಗಳು ಸರಿಯಾಗದಿದ್ದರೂ ಕಾಲ್ಪನಿಕ ಬಾಂಧವ್ಯ, ತೋರುವಿಕೆಯ ಪ್ರೀತಿ ಹೆಚ್ಚಾಗಿ ಕಾಣುತ್ತಿದೆಯಲ್ಲವೇ?
ಇಲ್ಲೊಂದು ಗಂಭೀರ ವಿಷಯವೇನೆಂದರೆ, ದೊಡ್ಡ ದೊಡ್ಡವರ ನಡುವಿನ ರಾಜಿ ಪಂಚಾಯ್ತಿಗಳು ಕೇವಲ ಆಯಾ ಕ್ಷಣದಲ್ಲಿ, ಆಯಾ ಬದುಕಿಗೆ ಅನುಗುಣವಾಗಿ ಹೊಂದಿಕೊಂಡಿರುತ್ತದೆ. ವಿಶೇಷವಾಗಿ ರಾಜಕಾರಣದಲ್ಲೂ ಇದು ಗಂಭೀರತೆಯನ್ನು ಕಳೆದುಕೊಂಡಿದೆ. ಪರಸ್ಪರ ಪ್ರೀತಿ ವಿಶ್ವಾಸ ನೆಪಮಾತ್ರದ ಮನೋಭೂಮಿಕೆಯಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ ನಾವು ಕರುನಾಡೆ ಕಾಣುತ್ತಿರುವ ಅದೆಷ್ಟೋ ರಾಜಕೀಯ ವ್ಯಕ್ತಿಗಳ ದ್ವೇಷ ಅಸೂಯೆ ಪ್ರೀತಿ ಬಾಂಧವ್ಯ ಎಲ್ಲವೂ ಆಯಾ ಕ್ಷಣದ ವರ್ತನೆ ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಇಂದು ಜೊತೆಗೆ ಇದ್ದವನು ನಾಳೆ ಮತ್ತೆಲ್ಲೋ ಕಿರುಚುತ್ತಾನೆ. ಅಂದು ಕಿರುಚಿದವನು ನಾಳೆ ಮತ್ತೆ ಇಲ್ಲಿ ಬಾಲಮುದುರಿಕೊಂಡು ಬೆಚ್ಚಗಾಗುತ್ತಾನೆ. ಇಂತಹ ನಿದರ್ಶನಗಳು ರಾಜಕಾರಣದಲ್ಲಿ ಸಾಕಷ್ಟು ನಡೆಯುತ್ತಿದೆ ಅಲ್ಲವೇ?
ಇಲ್ಲಿ ತಮ್ಮ ತಮ್ಮ ಜೇಬುಗಳ ಬರ್ತಿ, ಆಸ್ತಿಗಳ ಹಂಚಿಕೆ, ಒತ್ತುವರಿ ನಡುವೆ ತನ್ನ ಬದುಕು ಕಟ್ಟಿಕೊಳ್ಳುವ ಹಂಬಲ ಇವುಗಳನ್ನು ಆಯಾ ರಾಜಕಾರಣಿ ತನ್ನ ಮನೋಸ್ಥಿತಿಯಲ್ಲಿ ಬಚ್ಚಿಟ್ಟುಕೊಂಡಿರುತ್ತಾನೆ. ಅವರನ್ನು ಬೆಂಬಲಿಸುವವರು, ಅವರನ್ನು ಗುರುಗಳು ಎಂದುಕೊಂಡವರು, ಅವರ ಆಟಗಳನ್ನು ನೋಡುತ್ತಾ ತಮ್ಮಷ್ಟಕ್ಕೆ ತಾವು ಮೈಮರೆಯುತ್ತಾರೆ. ಎತ್ತ ಏನು ಮಾಡಿದರೂ ಅದನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಹಿಂಬಾಲಕ ಎಂಬ ನೋವಿನ ವ್ಯಕ್ತಿಗಳಿಗೆ ಮಾಮೂಲಿಯಾಗಿದೆ ಅಲ್ಲವೇ?
ಇತ್ತೀಚಿನ ದಿನಮಾನಗಳಲ್ಲಿ ಪರಸ್ಪರ ಪ್ರೀತಿ ಎಂಬುದು ಸಂಬಂಧದಲ್ಲಿ ಮಾತ್ರ ಅಲ್ಲ ಗೆಳೆತನದಲ್ಲೂ ನೆಪ ಮಾತ್ರದ ತೋರಿಕೆ ವಸ್ತುವಾಗುತ್ತಿರುವುದು ದುರಂತದ ಸಂಗತಿ. ತಾನು ತನ್ನದು ತನ್ನವರು ಎನ್ನುವ ಮನೋಭಾವದ ನಡುವೆ ಎಲ್ಲವೂ ನೆಪ ಮಾತ್ರದ ಬದುಕಿನ ರಾಸಲೀಲೆ ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಇಂದು ಇಂದಿಗೆ ನಾಳೆ ನಾಳೆಗೆ, ಮುಂದೆ ನಮ್ಮಲ್ಲಿ ಏನಾಗುತ್ತೋ ಏಕಾಗುತ್ತೋ ಗೊತ್ತಿಲ್ಲದ ಪರಿಸ್ಥಿತಿ ನಮ್ಮ ನಡುವೆ ಕಾಣಲು ಕಾರಣ ಈಗಿನ ಸಂಧಾನ ಪ್ರಕ್ರಿಯೆ ಎಂದರೆ ತಪ್ಪಾಗಲಿಕ್ಕಿಲ್ಲ.
ಕೆಲ ಸಂಘಟನೆಗಳು ಒಂದು ವಿಚಾರದ ವಿಚಾರದ ಕುರಿತು ಮಾತನಾಡುತ್ತಾ, ಹೋರಾಟ ಮಾಡುತ್ತಾ ಅಂತಿಮವಾಗಿ ಸಂಧಾನದ ಮೂಲಕ ಬಗೆಹರಿಸಿಕೊಂಡು ತಮ್ಮ ತಮ್ಮ ಜೇಬುಗಳನ್ನು ಭರ್ತಿ ಮಾಡಿಕೊಳ್ಳುವುದು ಸಹಜವಾಗಿ ಅಪರೋಕ್ಷವಾಗಿ ಕಾಣುತ್ತವೆ.
ಒಟ್ಟಾರೆ ಸಂಧಾನ ರಾಜಿ ಪಂಚಾಯ್ತಿಗಳು ಕೇವಲ ಆಯಾ ಪರಿಸ್ಥಿತಿಗೆ ಅನುಗುಣವಾಗಿ ತನ್ನನ್ನು ತಾನು ರೂಡಿಗತಗೊಳಿಸಿಕೊಂಡಿರುತ್ತದೆ. ಇಲ್ಲಿ ಅದು ಸಮಾಜದ ಅತಿ ಹೆಚ್ಚು ಕಾನೂನು ಬಾಹಿರ ಗಳನ್ನು ಹತ್ತಿಕ್ಕುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ?
ಮುಂದುವರೆಯುತ್ತದೆ.