


ಶಿವಮೊಗ್ಗ, ಸೆ. 20:
ಈಗಷ್ಟೆ ಲಭಿಸಿದ ಮಾಹಿತಿ. ಶಿವಮೊಗ್ಗ ಹೊನ್ನಾಳಿ ಮಾರ್ಗದ ಬುಳ್ಳಾಪುರ ಬಳಿ ಈಗಷ್ಟೇ ಬೈಕ್ ಸವಾರ ಬಸ್ ಗೆ ಬಲಿಯಾದ ಘಟನೆ ವರದಿಯಾಗಿದೆ.
ಶಿವಮೊಗ್ಗದಿಂದ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮುಂದೆ ಇದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿದ್ದಾನೆ ಎಂದು ತಿಳಿದುಬಂದಿದೆ.

ಮೃತನನ್ನು ಹೊಳೆಹಟ್ಟಿ ಮೂಲದ ಮೋಹನ್ ಕುಮಾರ್ ಎಂದು ಗುರುತಿಸಲಾಗಿದೆ ಎಂಬುದಾಗಿ ತುಂಗಾತರಂಗ ಸುದ್ದಿ ಮೂಲವಾದ ಜಗದೀಶ್ ಅವರ ಮೂಲಗಳು ತಿಳಿಸಿವೆ.
ಕೆಎಸ್ಆರ್ಟಿಸಿ ಬಸ್ ಶಿವಮೊಗ್ಗ ಹರಿಹರ ಮಾರ್ಗದ್ದು ಎಂದು ಗೊತ್ತಾಗಿದ್ದು, ಇಲ್ಲಿ ಬೈಕ್ ಸಂಪೂರ್ಣ ಜಖಂಗೊಂಡಿದೆ.
ಅಪಘಾತದ ಪ್ರಮಾಣ ಹಾಗೂ ವೇಗ ಗಮನಿಸಿದಾಗ ನಿಜಕ್ಕೂ ಭಯವಾಗುವ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಈಗ ಬರ್ತಿದ್ದಾರೆ.

