ಶಿವಮೊಗ್ಗ,ಸೆ.೧೮: ಲಕ್ಷಾಂತರ ಜನರು ಭಾಗವಹಿಸುವ ಮೂಲಕ ೮೦ನೇ ವರ್ಷದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆಯೂ ಅತ್ಯಂತ ವಿಜೃಂಭಣೆಯಿಂದ ನಡೆದು ಮುಂಜಾನೆ ೪.೧೬ರ ಹೊತ್ತಿಗೆ ಭೀಮನ ಮಡುವಿನಲ್ಲಿ ವಿಸರ್ಜಿಸಲಾಯಿತು.


ಮೆರವಣಿಗೆಯೂ ಅತ್ಯಂತ ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಡೆಯಿತು. ಈ ಬಾರಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಸೇರಿದ್ದು, ವಿಶೇಷವಾಗಿತ್ತು. ಅದರಲ್ಲೂ ಯುವಕ ಯುವತಿಯರು ಕುಣಿದು ಕುಪ್ಪಳಿಸಿದರು. ನಗರದೆಲ್ಲೆಡೆ ಮೆರವಣಿಗೆಯಲ್ಲಿ ಪ್ರಸಾದ, ನೀರು, ಮಜ್ಜಿಗೆ, ಪಾನಕದ ವ್ಯವಸ್ಥೆಯನ್ನು ವಿವಿಧ ಸಂಘಟನೆಗಳು, ವಿವಿಧ ಸಮಾಜದ ಮುಖಂಡರು ತಮ್ಮ ತಮ್ಮ ಸ್ಥಳಗಳಲ್ಲಿ ಮತ್ತು ಗಣಪತಿ ಸಾಗುವ ಮಾರ್ಗದಲ್ಲಿ ವಿತರಿಸಿದರು.


ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಎಲ್ಲಿಯೂ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮ ವಹಿಸಿದ್ದರು. ಪೊಲೀಸರು ಮುಖ್ಯವಾಗಿ ಮಫ್ತಿಯಲ್ಲಿದ್ದು, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.


ನಿನ್ನೆ ಬೆಳಿಗ್ಗೆ ೧೦.೩೦ಕ್ಕೆ ಕೋಟೆ ಭೀಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯ ನಂತರ ಬೆಕ್ಕಿನ ಕಲ್ಮಠಶ್ರೀಗಳು ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಪ್ರಾರಂಭವಾದ ಮೆರವಣಿಗೆಗೆ ಗಾಂಧಿಬಜಾರಿನ ಮೂಲಕ ಸಾಗಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು

ಭಾಗವಹಿಸಿದ್ದವು. ನೂರಾರು ಹೂಮಾಲೆಗಳನ್ನು ಮೆರವಣಿಗೆಯ ದಾರಿ ಮಧ್ಯೆ ಗಣಪತಿಗೆ ಅರ್ಪಿಸಲಾಯಿತು. ಇಡೀ ನಗರ ಕೇಸರಿಮಯದಿಂದ ಕೂಡಿತ್ತು. ಬೆಳಿಗ್ಗೆ೧೦.೩೦ಕ್ಕೆ ಆರಂಭವಾದ ಮೆರವಣಿಗೆ ಮುಂಜಾನೆ ೪.೧೬ಕ್ಕೆ ಗಣಪತಿಯ ವಿಸರ್ಜನೆ ಮೂಲಕ ತೆರೆಕಂಡಿತು.

By admin

ನಿಮ್ಮದೊಂದು ಉತ್ತರ

You missed

error: Content is protected !!