ಶಿವಮೊಗ್ಗ, ಸೆ.18:
ಶಿವಮೊಗ್ಗ ತಾಲೂಕು ಶಿಕಾರಿಪುರ ಪಟ್ಟಣದ ಪುರಸಭೆ ನಡೆಸಿದ ವಾಣಿಜ್ಯ ಮಳಿಗೆಗಳ ಹರಾಜಿನ ಪ್ರಕ್ರಿಯೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು ಇದನ್ನು ಎಸ್ ಐ ಟಿ ತನಿಕೆಗೆ ಒಳಪಡಿಸಬೇಕು
ಎಂದು ಒತ್ತಾಯಿಸಿ ಸೆ 19ರ ನಾಳೆ ಬೆಳಿಗ್ಗೆ ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಿವಮೊಗ್ಗ ಗೆಳೆಯರ ಬಳಗ ರಾಜ್ಯಾಧ್ಯಕ್ಷ ಕುಂಚಿ ಅನಿಲ್ ನೇತೃತ್ವದಲ್ಲಿ ಬಾರೀ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಈ ಸಂಬಂಧ ಇಲ್ಲಿನ ಸಮಗ್ರ ಹರಾಜಿನ ವಿಷಯದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿ
ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸೇರಿದಂತೆ ರಾಜ್ಯದ ಹತ್ತು ಹಲವು ಇಲಾಖೆಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.