ಶಿವಮೊಗ್ಗ,ಸೆ.18: ವಿದ್ಯಾನಗರದ ಆಶಾಕಿರಣ ಬುದ್ಧಿಮಾಂದ್ಯ ವಸತಿಶಾಲೆಯ ಮಕ್ಕಳಿಗೆ ಹೊದಿಕೆ ಹಾಗೂ ಅಕ್ಕಿ ನೀಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು 2ನೇ ದಿನವೂ ಕೂಡ ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹುಟ್ಟುಹಬ್ಬ ನೆಪ ಮಾತ್ರ, ನೊಂದವರಿಗೆ ಸಹಾಯ ಮಾಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರೆ ಜೀವನ ಸಾರ್ಥಕತೆ ಪಡೆಯುತ್ತದೆ. ಇಲ್ಲಿಯ ಮಕ್ಕಳನ್ನು ನೋಡಿದರೆ ಶಿಕ್ಷಕರ ಕಷ್ಟ ಎಷ್ಟೆಂದೂ ಅರ್ಥವಾಗುತ್ತದೆ. ಎಲ್ಲಾ ಮಕ್ಕಳಿಗು ಒಳ್ಳೆಯದಾಗಲಿ ಎಂದರು.

ವಸತಿ ಶಾಲೆಯ ಪ್ರಾಂಶುಪಾಲ ಎಂ.ಚAದ್ರಯ್ಯ ಮಾತನಾಡಿ, ಎಚ್.ಎಸ್.ಸುಂದರೇಶ್ ಅವರು ರಾಜಕಾರಣ ಯಾಗಿದ್ದರೂ ಕೂಡ ಸಮಾಜ ಸೇವೆ ಮಾಡುತ್ತಿದ್ದಾರೆ. ಈ ಶಾಲೆಗೆ ಕಳೆದ ಹಲವು ವರ್ಷಗಳಿಂದ ನೆರವು ನೀಡುತ್ತಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.

ನAತರ ಗೋಪಾಳದ ವೃದ್ಧಾಶ್ರಮ, ಸಾಗರದ ತಾಯಿಮನೆ, ಗುಡ್‌ಲಕ್ ಆರೈಕೆ ಕೇಂದ್ರ ಮುಂತಾದ ಸ್ಥಳಗಳಿಗು ಭೇಟಿ ನೀಡಿ ತಮ್ಮ ಹುಟ್ಟುಹಬ್ಬವನ್ನು ಕೊಡುಗೆ ನೀಡುವುದರ ಮೂಲಕ ಆಚರಿಸಿಕೊಂಡರು.

ನಾಳೆ ಬೆಳಿಗ್ಗೆ 10.30ಕ್ಕೆ ಮೆಗ್ಗಾನ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಕೂಡ ನಡೆಯಲಿದೆ.

ಈ ಸಂದರ್ಭದಲ್ಲಿ ವಸತಿ ಶಾಲೆಯ ಹೆಚ್.ಮಂಜಣ್ಣ, ಸುನೀತಾ, ಜಯಶ್ರೀ, ಪುಷ್ಪಾ ಹಾಗೂ ಸುಂದರೇಶ್ ಅಭಿಮಾನಿ ಬಳಗದ ಪ್ರಮುಖರಾದ ಎನ್.ಡಿ. ಪ್ರವೀಣ್‌ಕುಮಾರ್, ಜ್ಞಾನಪ್ರಕಾಶ್, ಆಕಾಶ್, ಅನ್ನು, ಮಧು, ನವೀನ್, ಜಗ್ಗಣ್ಣ, ಶಿವಕುಮಾರ್, ಮುಜಾಯಿದ್ ಪಾಶಾ ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!