ಶಿವಮೊಗ್ಗ : ಪ್ರತಿಯೊಬ್ಬರೂ ವಿಶ್ವೇಶ್ವರಯ್ಯ ಅವರಂತೆ ಬುದ್ಧಿವಂತಿಕೆ ಶ್ರದ್ಧೆಯನ್ನು ಅಳವಡಿಸಿಕೊಳ್ಳಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡುವುದರ ಮೂಲಕ ಯಶಸ್ಸು ಕಾಣಬೇಕು ಎಂದು ಕರೆ ನೀಡಿದವರು ಹಿರಿಯ ಸಾಹಿತಿಗಳಾದ ಭದ್ರಾವತಿಯ ಜಿ. ವಿ. ಸಂಗಮೇಶ್ವರ ಅವರು.

ಅವರು ಸೆಪ್ಟೆಂಬರ್ ೧೮ ರಂದು ಬೆಳಿಗ್ಗೆ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ರಾಮಣ್ಣ ಶ್ರೇಷ್ಠಿ ಪಾರ್ಕ್ ಹತ್ತಿರದ ಎಸ್. ಪಿ. ಎಂ. ರಸ್ತೆಯ  ಟಿ.ಎಂ.ಎ.ಇ. ಕೈಗಾರಿಕಾ ಸಂಸ್ಥೆ ಸಭಾಂಗಣದಲ್ಲಿ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಅಂಗವಾಗಿ ತಾಂತ್ರಿಕತೆಯ ಮಾಂತ್ರಿಕ ವಿಚಾರವಾಗಿ ಮಾತನಾಡಿದರು.

ಬ್ರಿಟಿಷ್ ಕಾಲದಲ್ಲಿ ಭಾರತದ ಕಸಬುದಾರರನ್ನು ನಾಶ ಮಾಡಿದ್ದರ ಕಾರಣ ಕಬ್ಬಿಣ ಮಾಡುವ ತಂತ್ರವನ್ನು ಅಳವಡಿಸಿಕೊಂಡರು. ಅವರು ಸಿವಿಲ್‌ ತಂತ್ರಜ್ಞಾನ ಪಡೆದಿದ್ದರು ಅವರ ಕಲಿಕೆಯ ಆಸಕ್ತಿ ಎಲ್ಲವನ್ನೂ ಯಶಸ್ಸು ಮಾಡಿಕೊಂಡರು. ತಮಗೆ ವಹಿಸಿದ ಕೆಲಸಕ್ಕೆ ಬೆನ್ಬು ತೋರಿಸದೆ ಸಾದಿಸಿದರು. ನೆಪಹೇಳುವ ಇವತ್ತಿನ ಯುವಕರಿಗೆ ಅವರು ಆದರ್ಶವಾಗಿದ್ದಾರೆ ಎಂದು ವಿವರಿಸಿದರು.

ದೀಪಬೆಳಗಿಸಿ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಅಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿ  ಸರ್. ಎಂ. ವಿ. ಇವತ್ತಿನ ತಾಂತ್ರಿಕ ವ್ಯವಸ್ಥೆಗೆ, ಯುವಜನರ ಬದುಕಿಗೆ ಮಾದರಿಯಾಗಿದ್ದಾರೆ. ಅವರ ನೆನಪು ಮತ್ತೆ ಮತ್ತೆ ಮಾಡಿಕೊಳ್ಳವ ಅಗತ್ಯವಿದೆ ಎಂದರು.

ಕಾಲೇಜು ಪ್ರಿನ್ಸಿಪಾಲರಾದ  ಪ್ರಸನ್ನಕುಮಾರ್ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶ್ರೇಷ್ಠ ವ್ಯಕ್ತಿಯ ವ್ಯಕ್ತಿತ್ವದ ಅವಲೋಕನ ಅಗತ್ಯವಾಗಿದೆ. ಶ್ರದ್ಧೆ, ಭಕ್ತಿ ಅಂದರೇನು ಎಂಬುದನ್ನು ಅರಿಯಲು ಈ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದರು.

ಉಪನ್ಯಾಸಕರ ಎಂ. ಎ. ಪ್ರಧಾನ ಪ್ರಾರ್ಥನೆ ಹಾಡಿದರು. ಅಜ್ಜಪ್ಪಾಚಾರಿ ಸ್ವಾಗತಿಸಿದರು. ಕಾರ್ಯದರ್ಶಿ ಡಿ. ಗಣೇಶ್, ಕವಿಗಳಾದ ಇಂದಿರಾ ಪ್ರಕಾಶ್ ಉಪಸ್ಥಿತರಿದ್ದರು. ಮನೋಜ್ ವಂದಿಸಿದರು.

By admin

ನಿಮ್ಮದೊಂದು ಉತ್ತರ

You missed

error: Content is protected !!