ಶಿವಮೊಗ್ಗ: ನಗರದ ಕೋಟೆ ಶ್ರೀ ಭೀಮೇಶ್ವರ ದೇವಾಲಯದಲ್ಲಿ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾಪೂರ್ವ ಮೆರವಣಿಗೆಗೆ ಇಂದು ವೈಭವದ ಚಾಲನೆ ದೊರೆಯಿತು.
ಶಿವಮೊಗ್ಗ : ಜನಸಾಗರದ ನಡುವೆ, ಹಿಂದೂಮಹಾಸಭಾ ಗಣಪನ ಮೆರವಣಿಗೆ ರಾಜ ಗಾಂಭೀರ್ಯದಿಂದ ಸಾಗುತ್ತಿದೆ.

ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಮತ್ತು ಕಿಡಿಗೇಡಿ ಕೃತ್ಯ ತಡೆಗೆ ಪೊಲೀಸರು ಯುವಕರು, ಯುವತಿಯರ ಜೊತೆಗೆ ಡಾನ್ಸ್ ಮಾಡುತ್ತಲೆ ಸಾಗುತ್ತಿದ್ದಾರೆ.

ಜೈ ಶ್ರೀರಾಮ್, ರಕ್ತದ ಕಣ ಕಣದಲ್ಲೂ ಹಿಂದೂ ಹಿಂದೂ ಎನ್ನುತ್ತಿದ್ದ ಆ ಘೋಷಣೆಗಳಿಗೆ ಎಂತಹವನ್ನೆ ಆಗಲೀ ಆ ಜಾಗವನ್ನು ಬಿಟ್ಟು ಎಲ್ಲಿಯೂ ಹೋಗದಂತೆ ಮಾಡಿತ್ತು
ಗಣಪನನ್ನು ನೋಡಲು ಜಿಲ್ಲೆ ಸೇರಿದಂತೆ ಹಲವು ಭಾಗಗಳಿಂದ ಆಗಮಿಸಿದ್ದ ಭಕ್ತಾಧಿಗಳಿಗೆ ಹಲವು ಸಂಘ ಸಂಸ್ಥೆಗಳಿಂದ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.
