ಶಿವಮೊಗ್ಗ,sಸೆ.೧೬:
ಕಳೆದ ೧೨ ವರ್ಷಕ್ಕೂ ಹೆಚ್ಚು ಕಾಲದಿಂದ ಪಿಯು ವಿಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿವಮೊ ಗ್ಗದ ಪ್ರಗತಿ ಆಪಲ್ ಎಜ್ಯುಕೇಷನ್ ವತಿಯಿಂದ ಸೆ.೧೯ ಮತ್ತು ೨೦ ರಂದು ಅಂಬೇಡ್ಕರ್ ಭವನದಲ್ಲಿ ವಿದ್ಯಾರ್ಥಿ ಗಳಿಗೆ ಆಯೋಜಿಸಿರುವ ಉಪನ್ಯಾಸ ಕಾರ್ಯಕ್ರಮ &ಚಿmಠಿ; ವಿವಿಧ ನೂತನ ಸ್ಕಾಲರ್ಶಿಪ್ ಯೋಜ ನೆಗಳಿಗೆ ಚಾಲನೆ ಮತ್ತು ಪ್ರಗತಿ ಸ್ಕಾಲರ್ಶಿಪ್ ಸಹಕಾರ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾ ಗಿದೆ ಎಂದು ಪ್ರಗತಿ ಆಪಲ್ ಎಜ್ಯುಕೇಷನ್ ಸಂಸ್ಥಾಪಕ ಹಾಗೂ ಅಧ್ಯಕ್ಷ ವಿಜಯಕುಮಾರ್ ಬಳಿಗಾರ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೆ.೧೯ರಂದು ಬೆಳಿಗ್ಗೆ ೧೦ಗಂಟೆಗೆ ಹೈಸ್ಕೂಲ್ &ಚಿmಠಿ; ಪಿಯು ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಓದುವ ಖುಷಿ, ಪರೀಕ್ಷಾ ಸಂಭ್ರಮ ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯ್ತಿ ಸಿಇಒ ಹೇಮಂತ ಎನ್. ಉದ್ಘಾಟಿಸಲಿದ್ದಾರೆ, ಮುಖ್ಯ ಉಪನ್ಯಾಸಕರಾಗಿ ಪದ್ಮಶ್ರೀ ಪುರಸ್ಕೃತ ಡಾ. ಸಿ.ಆರ್. ಚಂದ್ರಶೇಖರ್ ಆಗಮಿಸಲಿದ್ದು, ಶಿಕ್ಷಣ ಕ್ಷೇತ್ರದ ಅನೇಕರು ಭಾಗವಹಿಸಲಿದ್ದಾರೆ ಎಂದರು

.
ಡಾ.ಸಿ.ಆರ್.ಚಂದ್ರಶೇಖರ್ ಅವರು ಬರೆದಿರುವ ಓದುವ ಖುಷಿ,ಪರೀಕ್ಷಾ ಸಂಭ್ರಮ ಪುಸ್ತಕದ ೧೧ನೇ ಆವೃತ್ತಿಯನ್ನು ರಾಮಕೃಷ್ಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶೋಭಾ ವೆಂಕಟರಾಮಣ ಬಿಡುಗಡೆ ಮಾಡುವರು. ಈ ಪುಸ್ತಕವನ್ನು ಮಕ್ಕಳಿಗೆ ಉಚಿತವಾಗಿ ವಿತರಣೆ ಮಾಡಲಾಗುವುದು. ನಂತರ ೧೦ನೇ ತರಗತಿ ವಿದ್ಯಾರ್ಥಿಗಳಿಗಾಗಿ ಮೊದಲಗೋಷ್ಠಿ, ಮಧ್ಯಾಹ್ನ ೨.೩೦ರಿಂದ ಪಿಯು ವಿಜ್ಞಾನ ಕಾಲೇಜುಗಳ ವಿದ್ಯಾರ್ಥಿಗಳಿಗೆ ೨ನೇ ಗೋಷ್ಠಿ ನಡೆಯಲಿದೆ. ಸಂಜೆ ೫ಗಂಟೆಗೆ ಪರೀಕ್ಷೆ ಮತ್ತು ಪೋಷಕರ ಜವಾಬ್ದಾರಿ ಕುರಿತು ಡಾ.ಸಿ.ಆರ್.ಚಂದ್ರಶೇಖರ್, ಪರೀಕ್ಷೆ ಮತ್ತು ಆಹಾರ ಕುರಿತು ಮಕ್ಕಳ ತಜ್ಞ ಡಾ.ಸಿ.ಜಿ.ರಾಘವೇಂದ್ರ ವೈಲಾಯ ಉಪನ್ಯಾಸ ನೀಡಲಿದ್ದಾರೆ ಎಂದರು.

ಸೆ.೨೦ರಂದು ಬೆಳಿಗ್ಗೆ ೧೦ಗಂಟೆಗೆ ಈ ವರ್ಷ ಮೆಡಿಕಲ್ ಸೀಟು ಪಡೆದುಕೊಂಡ ೧೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸನ್ಮಾನ, ವೈದ್ಯಕೀಯ ವಿದ್ಯಾರ್ಥಿಯ ಸವಾಲುಗಳು &ಚಿmಠಿ; ಜನಸ್ನೇಹಿ ವೈದ್ಯನಾಗು ವುದು ಹೇಗೆ ಎಂಬ ವಿಷಯದ ಕುರಿತು ಸಂವಾದ &ಚಿmಠಿ; ಪ್ರಗತಿ ಸ್ಕಾಲರ್ ಶಿಪ್ ಸಹಕಾರ ಪುರಸ್ಕಾರ ವಿಶೇಷ ವಾಗಿ ಆರು ನೂತನ ಸ್ಕಾಲರ್ ಶಿಪ್ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದರು.
ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ಡಾ. ಸಿ.ಆರ್.ಚಂದ್ರಶೇಖರ್ ಉದ್ಘಾಟನೆ ಮಾಡಲಿದ್ದು, ಕರ್ನಾಟಕ ರೈತನ ಮಕ್ಕಳ ಸ್ಕಾಲರ್ಶಿಪ್ ಯೋಜನೆಗೆ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾ ಜಪ್ಪ,

ಕರ್ನಾಟಕ ಪತ್ರಕರ್ತರ ಮಕ್ಕಳ ಸ್ಕಾಲರ್ ಶಿಪ್ ಯೋಜನೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ಪೊಲೀಸ್ ಮಕ್ಕಳ ಸ್ಕಾಲರ್ ಶಿಪ್ ಯೋಜನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ಕುಮಾರ್, ಕರ್ನಾಟಕ ಡಾಕ್ಟರ್ ಸ್ಕಾಲರ್ಶಿಪ್ ಯೋಜನೆಗೆ ಡಾ. ಸಿ.ಆರ್.ಚಂದ್ರಶೇಖರ್, ಕರ್ನಾಟಕ ಶಿಕ್ಷಕರ ಮಕ್ಕಳ ಸ್ಕಾಲರ್ಶಿಪ್ ಯೋಜನೆಗೆ ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಚಾಲನೆ ನೀಡಲಿದ್ದಾರೆ ಎಂದರು

.
ಮುಖ್ಯ ಅತಿಥಿಯಾಗಿ ಡಾ.ಜಸ್ಟೀಸ್ ಡಿಸೋಜಾ, ಎಸ್.ವಿ.ಗುರುರಾಜ್, ಕೆ.ಈ.ಕಾಂತೇಶ್, ಕೆ.ಎಂ.ಮಂಜಪ್ಪ, ಆರ್.ಜಗನ್ ಮೋಹನ್ ರಾವ್, ಡಾ.ಪ್ರಸಾದ್ ಬಂಗೇರ ಆಗಮಿಸಲಿದ್ದಾರೆ. ಸಂಜೆ ೪ಗಂಟೆಗೆ ವೈದ್ಯಕೀಯ ಸವಾಲುಗಳು ಮತ್ತು ಜನಸ್ನೇಹಿ ವೈದ್ಯನಾಗುವುದು ಹೇಗೆ? ಕುರಿತು ಸಂವಾದ ನಡೆಯಲಿದೆ. ಸಂವಾದಲ್ಲಿ ಡಾ.ವಿರೂಪಾಕ್ಷಪ್ಪ, ಡಾ.ಕೆ.ಎಸ್.ಪವಿತ್ರಾ, ಡಾ.ನಮ್ರತಾ ಉಡುಪ ಭಾಗವಹಿಸಲಿದ್ದು, ಡಾ.ಸಿ.ಆರ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
೨ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಆಪಲ್ ಎಜುಕೇಶನ್ನ ಸಂಸ್ಥಾಪಕ ಸದಸ್ಯ ಹರ್ಷವರ್ಧನ ಶೀಲವಂತ ವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಕ್ಷತಾ ವಿಜಯ್ಕುಮಾರ್, ಪ್ರವೀಣ್, ಮಂಜುನಾಥ್, ಭರತ್ನಾಗ್, ಸುಮತಿ ಉಪಸ್ಥಿತರಿದ್ದರು.