ಶಿವಮೊಗ್ಗ,ಆ.30: ನಗರದ ಯುನೈಟೆಡ್ ಸ್ಪೋಟ್ಸ್ ಅಂಡ್ ಕಲ್ಚರಲ್ ಕ್ಲಬ್ ವತಿಯಿಂದ ಸೆ.1 ಮತ್ತು 2 ರಂದು ನೆಹರೂ ಕ್ರೀಡಾಂಗಣದಲ್ಲಿ ಯುನೈಟೆಡ್ ಕಫ್ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಕ್ಲಬ್‍ನ ಅಧ್ಯಕ್ಷ ಕೆ.ಎಸ್.ಶಶಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 3ನೇ ವರ್ಷದ ಈ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪದವಿಪೂರ್ವ ಕಾಲೇಜುಗಳ ಬಾಲಕ-ಬಾಲಕಿಯರಿಗೆ ಹೊನಲು ಬೆಳಕಿನ ಪಂದ್ಯಾವಳಿ ನಡೆಯಲಿದ್ದು ಕಳೆದ 2 ವರ್ಷ ಬಾಲಕರಿಗಾಗಿ ಮಾತ್ರ ನಡೆದಿದ್ದು, ಈ ಬಾರಿ ಬಾಲಕಿಯರನ್ನು ಸಹ ಅವಕಾಶ ನೀಡಲಾಗಿದೆ ಎಂದರು.
ಮಕ್ಕಳಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಅನೇಕ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದೇವೆ. ಇದರಂತೆ ಜಿಲ್ಲೆಯ ವಾಲಿಬಾಲ್ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಕ್ಲಬ್ ಕ್ರೀಡಾಪಟು ಸರದಾರ ಜಾಫರ್ ಸ್ಮರಣಾರ್ಥವಾಗಿ ಈ ಪಂದ್ಯಾವಳಿ ಆಯೋಜಿಸಲಾಗಿದೆ.ಕ್ರೀಡಾಕೂಟದ ದಿವ್ಯಾ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ವಹಿಸುವರು ಎಂದರು.
ಕ್ಲಬ್‍ನ ಕಾರ್ಯದರ್ಶಿ ಎಸ್.ಹೆಚ್. ಪ್ರಸನ್ನ ಮಾತನಾಡಿ, ಈ ಪಂದ್ಯಾವಳಿಯು 4 ಅಂಕಣಗಳಲ್ಲಿ ನಡೆಯಲಿದೆ. ಸುಮಾರು 40 ಬಾಲಕರ ತಂಡ ಹಾಗೂ 20 ಬಾಲಕಿಯರ ತಂಡ ಭಾಗವಹಿಸುತ್ತವೆ. ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ಬಾಲಕ-ಬಾಲಕಿಯರಿಗೆ ಬೆಸ್ಟ್ ಅಟ್ಯಾಕರ್, ಬೆಸ್ಟ್ ಬೂಸ್ಟರ್, ಬೆಸ್ಟ್ ಆಲ್ ರೌಂಡರ್, ಬೆಸ್ಟ್ ಲೀಬ್ರೋ, ಬೆಸ್ಟ್ ಬ್ಲಾಕರ್ ಪ್ರಶಸ್ತಿಗಳನ್ನು ನೀಡಲಾಗುವುದು ಎಂದರು.
ಸಹ ಕಾರ್ಯದರ್ಶಿ ಎಸ್.ವಿಜಯ್‍ಕುಮಾರ್ ಮಾತನಾಡಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 7777 ರೂ. ದ್ವಿತೀಯ 5555ರೂ., ತೃತೀಯ 3333 ರೂ., ಚತುರ್ಥ ಸ್ಥಾನ ಪಡೆದವರಿಗೆ 2222 ರೂ. ನಗದು ಬಹುಮಾನದೊಂದಿಗೆ ಟ್ರೋಫಿಯನ್ನು ನೀಡಲಾಗುವುದು ಎಂದರು
ಪತ್ರಿಕಾಗೋಷ್ಠಿಯಲ್ಲಿ ಎ.ಅಭಿಜಿತ್, ಸಚಿನ್ ಪೂಜಾರಿ, ಹೇಮಂತ್ ಉಪಸ್ಥಿತರಿದ್ದರು.