ಈಗ ಐದು ಸಾವಿರಕ್ಕೂ ಬಾಲ ಕೃಷ್ಣ ರಾಧೆಯರ ಪೋಟೋ ಮಾಹಿತಿ
ಇದು ನಿಜಕ್ಕೂ ಅತ್ಯಂತ ಸಂತೋಷದ ವಿಷಯ. ನಿರಂತರವಾಗಿ ಏಳೆಂಟು ವರ್ಷಗಳಿಂದ ನಿಮ್ಮ ತುಂಗಾತರಂಗ ದಿನಪತ್ರಿಕೆ ಮುದ್ದಣದ ಜೊತೆ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಪ್ರಮಾಣದ ಓದುಗರನ್ನು ಹೊಂದಿದ್ದು, ಇಂದು ಬೆಳಿಗ್ಗೆ ತುಂಗಾತರಂಗ ಪತ್ರಿಕೆ ಮಕ್ಕಳ ರಾಧಾ ಕೃಷ್ಣನ ಫೋಟೋ ಕಳುಹಿಸಲು ಹೇಳಿದ ಕೇವಲ ಮೂರು ಗಂಟೆಯಲ್ಲಿ 1000ಕ್ಕೂ ಹೆಚ್ಚು ಫೋಟೋಗಳು ನಮ್ಮ ಪತ್ರಿಕೆಯ ಮೊಬೈಲ್ ಗಳಲ್ಲಿ ಕಾಣಿಸಿಕೊಂಡಿದ್ದ ನಿಜಕ್ಕೂ ಅಚ್ಚರಿಯಾಯಿತು,ಆನಂದ ನೀಡಿತು.
ನಮ್ಮ ಕೋರಿಗೆ ಸ್ಪಂದಿಸಿದ ಎಲ್ಲಾ ಓದುಗರಿಗೆ, ಪೂಜ್ಯ ತಂದೆ-ತಾಯಿಯವರಿಗೆ, ಪುಟಾಣಿ ಮಕ್ಕಳಿಗೆ ತುಂಗಾತರಂಗ ದಿನಪತ್ರಿಕೆ ಆತ್ಮೀಯವಾಗಿ ಅಭಿನಂದಿಸುತ್ತದೆ.
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇಂದು ಮಕ್ಕಳ ಕೃಷ್ಣರಾಧೆಯ ವೇಷದ ಭಾವಚಿತ್ರಗಳನ್ನು ವಾಟ್ಸಪ್ ಮೂಲಕ ಕಳುಹಿಸಲು ಕೋರಿ ಇಂದು ಬೆಳಿಗ್ಗೆ ಕಳಿಹಿಸುವ ನಿರಂತರ ಹಾಡಿನ ಜೊತೆಗೆ ಪತ್ರಿಕೆ ತನ್ನ 36 ಗುಂಪುಗಳು ಹಾಗೂ ಇತರ ಆತ್ಮೀಯರ ಗುಂಪುಗಳಿಗೆ ಮಾಹಿತಿ ನೀಡಿತ್ತು.
ಈ ಸಂದರ್ಭದಲ್ಲಿ ಅಂದಿನಿಂದಲೂ ಬರುವ ಫೋಟೋಗಳ ಸಂಖ್ಯೆ ಈಗಲೂ ಮುಂದುವರೆದಿದೆ. ಬೆಳಿಗ್ಗೆ 11ರ ಹೊತ್ತಿಗೆ ಒಂದು ಸಾವಿರಕ್ಕೂ ಹೆಚ್ಚು ಫೋಟೋಗಳು, ಅವರ ತಂದೆ ತಾಯಿ ಹೆಸರುಗಳು ನಮ್ಮ ಮೊಬೈಲ್ ಗಳಲ್ಲಿ ತುಂಬಿಕೊಂಡಿದ್ದವು.
ಇಷ್ಟೊಂದು ಫೋಟೋ ಹಾಕಲು ಸಾಧ್ಯವೇ ಎಂಬ ಗಂಭೀರ ಚಿಂತನೆ ನಮ್ಮದು. ಅದಕ್ಕಾಗಿ ಅಂತಹ ಚಿತ್ರಗಳನ್ನು ಒಂದಿಬ್ಬರಿಗೆ ನೀಡಿ ಅವುಗಳಲ್ಲಿ ಸೂಕ್ತವಾದ ಸಮಂಜಸವೆನಿಸುವ ಒಂದಿಷ್ಟು ಚಿತ್ರಗಳನ್ನು ಆಯ್ಕೆ ಮಾಡಿಕೊಡಲು ಪತ್ರಿಕೆ ತನ್ನ ಬಳಗವನ್ನು ಹೊರತುಪಡಿಸಿ ನೀಡಿತ್ತು.
ಈ ಸಂದರ್ಭದಲ್ಲಿ ಆಯ್ಕೆಯಾದ ಚಿತ್ರಗಳನ್ನು ಪ್ರಕಟಿಸಲಾಗಿದೆ. ಸಾಕಷ್ಟು ಚಿತ್ರಗಳು ಅತ್ಯಂತ ಅದ್ಭುತವಾಗಿದೆ. ಮಕ್ಕಳ ಮುದ್ದು ನೋಟ ಕೃಷ್ಣ ಅಲಂಕಾರ ನಿಜಕ್ಕೂ ಮನೋಹರವಾಗಿದೆ. ಇಂತಹ ಸ್ಪಂದನೆಗೆ ನಮಗೆ ಅತಿ ದೊಡ್ಡ ಜವಾಬ್ದಾರಿ ಸೃಷ್ಟಿಯಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಮಧ್ಯಾಹ್ನ ಒಂದರ ಅವಧಿಯ ತನಕ ಸಮಯ ನೀಡಿದ್ದರೂ ಸಹ ಆ ಚಿತ್ರಗಳನ್ನು ನೋಡುವುದೇ ಅತಿ ದೊಡ್ಡ ಕಾಯಕವಾಗಿದ್ದು, ಇಂದಿನ ವಿಶೇಷವೇ ಹೌದು.
ಇಷ್ಟೊಂದು ದೊಡ್ಡ ಪ್ರಮಾಣದ ಓದುಗರ ಸ್ಪಂದನೆ, ಪತ್ರಿಕೆ ಬಗ್ಗೆ ಅವರಿಟ್ಟುಕೊಂಡಿರುವ ಗೌರವಕ್ಕೆ ನಮ್ಮ ಪ್ರಣಾಮಗಳು.
ಅಂತೆಯೇ ಮುಂದಿನ ಅವಧಿಯಲ್ಲಿ ಎಲ್ಲಾ ಚಿತ್ರಗಳಿಗೂ ಅವಕಾಶ ಕಲ್ಪಿಸಿ ಕೊಡುವಂತಹ ಯೋಗ ಪತ್ರಿಕಾ ಬಳಗಕ್ಕೂ ಲಭಿಸಲಿ ಎಂಬ ಕೋರಿಕೆ ನಮ್ಮದು. ನಿಮ್ಮ ಸ್ಪಂದನೆಗೆ ನಾವು ಸದಾ ಚಿರೃಣಿಯಾಗಿರುತ್ತೇವೆ. ಅಂತೇಯೇ ಪ್ರಕಟವಾದ ಮಕ್ಕಳ ಚಿತ್ರಗಳಿಗೆ ಅಭಿನಂದನೆ ಹೇಳುವ ಜೊತೆಗೆ ಪ್ರಕಟಿಸಲಾಗದ ಚಿತ್ರಗಳನ್ನು ಕೆಟ್ಟಚಿತ್ರ ಎಂದು ಪರಿಗಣಿಸಿಲ್ಲ ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ತಿಳಿಸುತ್ತೇವೆ. ಏಕೆಂದರೆ ಇಲ್ಲಿ ಬಂದಿರುವ ಯಾವ ಚಿತ್ರವು ಕಳಪೆಯಾಗಿಲ್ಲ. ಆದರೆ ಪತ್ರಿಕೆಯ ಚೌಕಟ್ಟಿನೊಳಗೆ ಮಾತ್ರ ಪ್ರಕಟಿಸುವ ಅವಕಾಶವಿರುವುದರಿಂದ ಸೂಕ್ತ ಎನಿಸುವ ಚಿತ್ರಗಳನ್ನು ಅಷ್ಟೇ ಅತ್ಯಂತ ಕಷ್ಟಪಟ್ಟು ಆಯ್ಕೆ ಮಾಡಿ ನೀಡಲಾಗಿದೆ. ಸದಾ ನಿಮ್ಮ ಸ್ಪಂದನೆ ನಮ್ಮ ಜೊತೆಗಿರಲಿ. ನಾವು ಸದಾ ನಿಮ್ಮ ಜೊತೆ ಇರುತ್ತೇವೆ.
ತುಂಗಾತರಂಗ ದಿನಪತ್ರಿಕೆ ಕೇವಲ ರಾಜಕಾರಣ ಅಪರಾಧ ಚಟುವಟಿಕೆ ಒಂದಿಷ್ಟು ಮೋಸ ವಂಚನೆಗಳ ಬಗ್ಗೆ ಬರೆಯುವುದನ್ನು ಸೀಮಿತಗೊಳಿಸಿಕೊಂಡಿಲ್ಲ. ಸಾಹಿತ್ಯ ಸಂಸ್ಕೃತಿ ಧರ್ಮ ಆರಾಧನೆ ಬಗ್ಗೆ ಒಲವು ಇರಿಸಿಕೊಂಡಿದ್ದು, ಅದರ ಜೊತೆ ನಮ್ಮ ನಡುವಿನ ಸಾಂಸ್ಕೃತಿಕ ಜಗತ್ತನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆಯನ್ನು ಸಹ ಹೊತ್ತಿದೆ. ನಿಮ್ಮ ಸಹಕಾರ ನಿರಂತರವಾಗಿರಲಿ.
ವಿಶೇಷವೆಂದರೆ ತುಂಗಾತಂಗ ಕೇವಲ ಶಿವಮೊಗ್ಗ ಜಿಲ್ಲೆಯ ಸ್ಥಳ ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳ ಅಪಾರ ಓದುಗರನ್ನು ಹೊಂದಿದ್ದು ಶಿವಮೊಗ್ಗ ಜಿಲ್ಲೆಗೆ ಒಂದಿಷ್ಟು ಆದ್ಯತೆಯನ್ನು ನೀಡಲಾಗಿದೆ ಅದನ್ನು ಹೊರತುಪಡಿಸಿದರೆ ಎಲ್ಲಾ ಉತ್ತಮ ಚಿತ್ರಗಳಿಗೆ ಅವಕಾಶ ಕಲ್ಪಿಸುವ ಉದ್ದೇಶ ನಮ್ಮದಾಗಿದೆ
ಅಂತೆಯೇ ಓದುಗರು ನೀಡಿದ ಸ್ಪಂದನೆ ನಿಜಕ್ಕೂ ಅಪಾರವಾದದು. ಅಭಿನಂದನೆಗಳು.
ವಿಶೇಷ ಸೂಚನೆ ಪತ್ರಿಕೆಯಲ್ಲಿ ಪ್ರಕಟಗೊಂಡ ಚಿತ್ರಗಳಲ್ಲಿನ ಮಕ್ಕಳ ಹೆಸರು ತಂದೆ ತಾಯಿ ವಿಳಾಸ ವಿಷಯದಲ್ಲಿ ಅತ್ಯಂತ ಕಾಳಜಿ ವಹಿಸಿ ಮುದ್ರಿಸಲಾಗಿದೆ. ಕಣ್ಣು ತಪ್ಪಿನಿಂದ ಹಾಗೂ ಅತಿ ಹೆಚ್ಚು ಚಿತ್ರ ಬಂದ ಹಿನ್ನೆಲೆಯಲ್ಲಿ ಯಾವುದಾದರೂ ಗೊಂದಲಗಳಾಗಿದ್ದರೆ ಅದನ್ನು ಅನ್ಯತಾ ತಪ್ಪು ಭಾವಿಸದೆ ನಮಗೆ ಮಾಹಿತಿ ನೀಡಿದರೆ ಮರುದಿನ ಆ ಚಿತ್ರವನ್ನು ಪ್ರಕಟಿಸಲಾಗುತ್ತದೆ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇವೆ.
-ಎಸ್ ಕೆ ಗಜೇಂದ್ರ ಸ್ವಾಮಿ, ಸಂಪಾದಕರು ಹಾಗೂ ತುಂಗಾತರಂಗ ಪತ್ರಿಕಾ ಬಳಗ, ಶಿವಮೊಗ್ಗ
ಹೆಸರು…. ಶ್ರೀಯ.
ತಂದೆ…. ಸೂರಜ್
ತಾಯಿ… ಶುಭ ದೇಶ ….ಕೆನಡಾ.
ಊರು…. ಟೋರಂಟೊ