ಶಿವಮೊಗ್ಗ,ಆ.೨೭: ಬಿಜೆಪಿ ಸಂಘಟನೆ ಶಿಸ್ತಿಗೆ ಹೆಸರಾಗಿದ್ದು, ಪ್ರಜಾಪ್ರಭುತ್ವ ಆಧರಿತ ವಿಶಿಷ್ಟ ಪರಂಪರೆಯ ಪಕ್ಷವಾಗಿದೆ. ಸರ್ವ ವ್ಯಾಪಿ, ಸರ್ವ ಸ್ಪರ್ಶಿಯಾಗಲು ಈ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ ಎಂದು ದ.ಕ.ಸಂಸದ ಕ್ಯಾಪ್ಟನ್ ಬ್ರ್ರಜೇಶ್ ಚೌಟ ಹೇಳಿದ್ದಾರೆ.
ಅವರು ಇಂದು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಅಭಿಯಾನದ ಮಹತ್ವ ಪಕ್ಷವನ್ನು ಹೇಗೆ ಬೆಳೆಸಬಹುದು ಎಂಬುವುದಾಗಿದೆ. ವಿಚಾರಕ್ಕೆ ಬದ್ಧವಾಗಿರುವ ಪಾರ್ಟಿ ನಮ್ಮದಾಗಿದ್ದು, ಬಿಜೆಪಿ ಹುಟ್ಟಿರುವುದೇ ವಿಶಿಷ್ಟ ಸಂದರ್ಭದಲ್ಲಿ, ಈ ದೇಶದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಗಟ್ಟಿಗೊಳಿಸಿ ಪುನುರುತ್ಥಾನಕ್ಕಾಗಿ ವಿಶ್ವಶಾಂತಿಗಾಗಿ ಈ ಪಕ್ಷ ಹುಟ್ಟಿದ್ದು, ಕಾರ್ಯಕರ್ತರೇ ಪ್ರೇರಕ ಶಕ್ತಿ ಎಂದರು.
ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಇದಕ್ಕಾಗಿ ಸಾಮಾನ್ಯ ಸದಸ್ಯತ್ವ ಮತ್ತು ಸಕ್ರಿಯ ಸದಸ್ಯತ್ವ ಎಂದು ೨ ಹಂತದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಸುಮಾರು ೨೦ ಕೋಟಿ ಸದಸ್ಯರಿರುವ ವಿಶ್ವದ ಅತಿದೊಡ್ಡ ಪಕ್ಷ ಬಿಜೆಪಿಯಾಗಿದ್ದು, ಮಹಿಳೆಯರು ಮತ್ತು ೧೮ರಂದ ೨೫ ವರ್ಷ ಒಳಗಿನ ಯುವ ಮನಸ್ಸುಗಳಿಗೆ ಹತ್ತಿರವಾಗುವ ಪ್ರಯತ್ನವನ್ನು ಪಕ್ಷ ಮಾಡಲಿದೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕಾರ್ಯಕರ್ತ ಮನುಷ್ಯನ ನರಮಂಡಲ ಇದ್ದ ಆಗೆ, ಪಕ್ಷದ ಶಕ್ತಿಯಾಗಿ ಕೆಲಸ ಮಾಡುತ್ತಿರುತ್ತಾರೆ. ಟಿ.ಎನ್.ಶೇಷನ್, ಚುನಾವಣಾಧಿಕಾರಿಯಾಗಿ ಬಂದಾಗ ನಮ್ಮ ದೇಶದ ನಿಜವಾದ ಪ್ರಜಾಪ್ರಭುತ್ವ ಕಾರ್ಯರೂಪಕ್ಕೆ ಬಂತು. ಅದರ ಪ್ರತಿಫಲವೇ ಬಿಜೆಪಿ ದೊಡ್ಡ ಪಕ್ಷವಾಗಿ ಅಧಿಕಾರ ಹಿಡಿಯಿತು. ಪಕ್ಷದ ಸಂಘಟನೆ ನಿಂತ ನೀರಾಗಬಾರದು, ಹರಿಯುವ ನದಿಯಾಗಬೇಕು. ಪಕ್ಷದ ರಾಜ್ಯಾಧ್ಯಕ್ಷರು ನೀಡಿದ ಗುರಿಯನ್ನು ಮುಟ್ಟಬೇಕು. ಎಲ್ಲರೂ ಸೇರಿ ಸದಸ್ಯತ್ವ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್.ಅರುಣ್, ಧನಂಜಯ ಸರ್ಜಿ, ಪ್ರಮುಖರಾದ ಎಸ್.ದತ್ತಾತ್ರಿ, ಹರತಾಳ್ ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮತ್ತಿತರರಿದ್ದರು.