ಶಿವಮೊಗ್ಗ, ಆ.27(
 ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಶೌಚಾಲಯ ಬಳಿ ಸುಸ್ತಾಗಿ ಮಲಗಿದ್ದ ಸುಮಾರು 65 ರಿಂದ 70 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯನ್ನು ಆ.24 ರಂದು ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು

ಹೋದಾಗ ವೈದ್ಯರು ಪರೀಕ್ಷಿಸಿ, ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
 ಮೃತಳು ಸುಮಾರು 5 ಅಡಿ 01 ಇಂಚು ಎತ್ತರ, ಗೋಧಿ ಮೈಬಣ್ಣ, ದುಂಡನೆಯ ಮುಖ,

ದೃಢವಾದ ಮೈಕಟ್ಟು ಹೊಂದಿದ್ದು, ಸುಮಾರು 8 ಇಂಚು ಉದ್ದ ಬಿಳಿ ಕೂದಲು,

ಹಣೆ ಮಧ್ಯಭಾಗದಲ್ಲಿ ಕಪ್ಪು ಹಚ್ಚೆ ಇರುತ್ತದೆ, ಮೃತಳ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ

ಪೊಲೀಸ್ ಠಾಣೆ, ದೂ.ಸಂ: 08182-261414, 9916882544 ನ್ನು ಸಂಪರ್ಕಿಸಬಹುದೆAದು ಠಾಣಾಧಿಕಾರಿಗಳು ತಿಳಿಸಿದ್ದಾರೆ.

==

By admin

ನಿಮ್ಮದೊಂದು ಉತ್ತರ

error: Content is protected !!