ಶಿವಮೊಗ್ಗ,ಆ.26: ಶಿವಶಕ್ತಿ ಸಮಾಜದ ವತಿಯಿಂದ ಆ.30ರಂದು ಬೆಳಿಗ್ಗೆ 7ಕ್ಕೆ ವಿನೋಬನಗರದ ಶಿವಾಲಯ ದೇವಸ್ಥಾನ ಸಭಾಂಗಣದಲ್ಲಿ ಉಚಿತ ಸಾಮೂಹಿಕ ದೀಕ್ಷೆಯನ್ನು ಏರ್ಪಡಿಸಲಾಗಿದೆ ಎಂದು ತಾವರೆಕೆರೆ ಶಿಲಾಮಠದ ಡಾ.ಅಭಿನವ  ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವೀರಶೈವ ಲಿಂಗಾಯಿತ, ಜಂಗಮ ಸಮಾಜದಲ್ಲಿ ದೀಕ್ಷೆ ಎಂಬುವುದು ಒಂದು ಪವಿತ್ರವಾದ ಸಂಸ್ಕಾರವಾಗಿದೆ. 8 ವರ್ಷ ಮೇಲ್ಪಟ್ಟ ವಯೋಮಾನದ ಮಕ್ಕಳು ಹಾಗೂ ಪುರುಷರು ಮತ್ತು ಮಹಿಳೆಯರು ಲಿಂಗದೀಕ್ಷೆ ಪಡೆಯಬಹುದಾಗಿದೆ. ಇದಕ್ಕೆ ಗಂಡು ಹೆಣ್ಣು ಎಂಬ ಬೇಧವಿಲ್ಲ, ದೀಕ್ಷೆ ಸಮಯದಲ್ಲಿ ಪೂಜೆ ಮಾಡುವ ವಿಧಿ ವಿಧಾನಗಳನ್ನು ಹೇಳಿಕೊಡಲಾಗುವುದು ಎಂದರು.

ದೀಕ್ಷೆ ಪಡೆಯುವ ಪುರುಷರು ಮುಡಿ ತೆಗೆಸಿಕೊಳ್ಳಬೇಕು. ಮಹಿಳೆಯರು ಶುಚಿರ್ಭೂತರಾಗಿಸೀರೆ ಧರಿಸಿ ಬರಬೇಕು. ಲಿಂಗ ದೀಕ್ಷೆ ಪಡೆಯುವವರಿಗೆ ಕರಡಿಗೆಯನ್ನು ಉಚಿತವಾಗಿ ನೀಡಲಾಗುವುದು. ಜಂಗಮ ಸಮಾಜದವರಿಗೆ ಜೋಳಿಗೆ ಮತ್ತು ಬೆತ್ತವನ್ನು ನೀಡಲಾಗುವುದು ಎಂದರು.

ಈ ಕಾರ್ಯಕ್ರಮದ ಸಾನಿಧ್ಯವನ್ನು ಬಾಳೆಹೊನ್ನೂರು ಪೀಠ ಶಾಖಾ ಮಠ ಎಡೆಯೂರು ಕ್ಷೇತ್ರದ ರೇಣುಕಾಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸುತ್ತಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಶಕ್ತಿ ಸಮಾಜದ ಅಧ್ಯಕ್ಷೆ ಹೆಚ್.ಪಾರ್ವತಮ್ಮ ವಹಿಸುವರು. ಸಮಾಜದ ಬಾಂಧವರು ಇದರ ಪ್ರಯೋಜನ ಪಡೆಯಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಅಧ್ಯಕ್ಷೆ ಹೆಚ್.ಪಾರ್ವತಮ್ಮ, ಪದಾಧಿಕಾರಿಗಳಾದ ರತ್ನಮ್ಮ, ಜಯಂತಿ, ಜ್ಯೋತಿಪ್ರಕಾಶ್, ಉಮೇಶ್ ಹಿರೇಮಠ, ಸಂತೋಷ ಬೆಳ್ಳಕೆರೆ, ಮರುಳೇಶ್ ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!