ಹೊಸನಗರ,ಆ.14:
ಈ ವರ್ಷ ಜೂನ್ ತಿಂಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮವಾದ ಮಳೆಯಾಗಿದ್ದು ಹೊಸನಗರ ತಾಲ್ಲೂಕಿನ ಕೃಷಿ ಇಲಾಖೆಯಿಂದ ಉತ್ತಮ ಬಿತ್ತನೆ ಬೀಜಗಳನ್ನು ಹಾಗೂ ಯಂತ್ರೋಪಕರಣಗಳನ್ನು ವಿತರಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೆಶಕಿ ಶ್ರೀಮತಿ ಪೂರ್ಣಿಮರವರು ಹೇಳಿದರು.
ಹೊಸನಗರ ತಾಲ್ಲೂಕಿನ ಯಳಗಲ್ಲು ಗ್ರಾಮದ ಜಯಲಕ್ಷ್ಮಿರವರ ಜಮೀನಿನಲ್ಲಿ ಸೋಬಾನೇ ಪದ ಹಾಡಿ ನಾಟಿ ಮಾಡುತ್ತಿದ್ದ ರೈತ ಮಹಿಳೆಯರೊಂದಿಗೆ ಸೇರಿ ಜಮೀನಿನಲ್ಲಿ ನಾಟಿ ಮಾಡಿ ಮಾತನಾಡಿದರು.
ಹೊಸನಗರ ತಾಲ್ಲೂಕಿನಲ್ಲಿ ಜೂನ್ ತಿಂಗಳಿಂದ ಇಲ್ಲಿಯವರೆವಿಗೆ ಸುಮಾರು ೨೫೦೦ಮೀ.ಮೀಟರ್ ಮಳೆಯಾಗಿದ್ದು ಶೇ೨೦ರಷ್ಟು ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ ರೈತರಿಗೆ ಬಿತ್ತನೆ ಮಾಡಿ ಬೆಳೆ ಬಳೆಯಲು ಅನುಕೂಲಕರವಾದ ವಾತಾವರಣವಿದ್ದು ಕೃಷಿ ಇಲಾಖೆಯಿಂದ ಉತ್ತಮ ಬಿತ್ತನೆ ಬೀಜಗಳನ್ನು ಹಾಗೂ ಯಂತ್ರೋಪಕರಣಗಳನ್ನು ವಿತರಿಸಲಾಗಿದ್ದು ಕೃಷಿ ಚಟುವಟಿಕೆ, ಉತ್ತಮವಾಗಿ ಆರಂಭವಾಗಿದೆ ರೈತರು ರೋಗ ನಿರೋಧಕ, ಹೆಚ್ಚು ಇಳುವರಿ ನೀಡುವ ತಳಿಗಳನ್ನು ಬಳಸಬೇಕು ಇದರಿಂದ ಇಳುವರಿ ಹೆಚ್ಚಿ, ಕೃಷಿಯಲ್ಲಿ ಕೃಷಿಗೆ ಮಾಡುವ ವೆಚ್ಚ ಕಡಿಮೆಯಾಗುತ್ತದೆ ಎಂದು ಈ ಸಂದರ್ಭದಲ್ಲಿ ರೈತರಿಗೆ ಸಲಹೆ ನೀಡಿದರು.
ಈ ನಾಟಿ ಮಾಡುವ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಜಂಟಿ ಕೃಷಿ ನಿರ್ದೆಶಕಿಯಾದ ಶ್ರೀಮತಿ ಪೂರ್ಣಿಮಾ, ಹೊಸನಗರ ತಾಲ್ಲೂಕಿನ ಕೃಷಿ ಸಹಾಯಕ ನಿರ್ದೆಶಕರಾದ ಸಚಿನ್ ಹೆಗಡೆ, ಸಹಾಯಕ ಕೃಷಿ ನಿರ್ದೆಶಕಿಯಾದ ರಶ್ಮೀ, ಕೃಷಿ ಅಧಿಕಾರಿ ಮಾರುತಿ, ಪ್ರತೀಮಾ ಇತರೆ ಕೃಷಿ ಇಲಾಖೆಯ ಸಿಬ್ಬಂದಿಗಳು ನಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.