ಶಿವಮೊಗ್ಗ :
ಬಂಗಾರ ಎಂಬುದು ಆಪದ್ಧನ ಇದ್ದಂತೆ, ಇದು ಆಸ್ತಿ ಕೂಡ ಹೌದು ಎಂದು ಖ್ಯಾತ ವಾಗ್ಮಿ ಹಾಗೂ ಕೆವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭ ಮರವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಮೈತ್ರಿ ಮೈ ಜುವೆಲ್ಸ್ ಸಂಸ್ಥೆಯಲ್ಲಿ ವರಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಕೂಡ ಕಷ್ಟದ ಸಂದರ್ಭದಲ್ಲಿ ಚಿನ್ನವನ್ನು ಆಪದ್ಧನವಾಗಿ ಬಳಸಿಕೊಳ್ಳುವುದು ಲೋಕ ರೂಢಿಯಾಗಿದೆ. ದಿನೇ ದಿನೇ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು, ದೈನಂದಿನ ದುಡಿಮೆ ಮಾಡಿ ಜೀವನ ಸಾಗಿಸುವವರಿಗೆ ಚಿನ್ನವೆಂಬುದು ಕನಸಾಗಿಯೇ ಇರುತ್ತದೆ.
ಆದರೂ ಚಿನ್ನದ ಮೋಹ ಎಂಬುದು ಹಣವನ್ನು ಉಳಿಸಿ, ತೆಗೆದುಕೊಳ್ಳಲೇ ಬೇಕು. ಹೀಗಾಗಿ, ಯೋಜನೆಗಳಲ್ಲಿ ಹಣ ತೊಡಗಿಸಿದರೆ, ಚಿನ್ನ ಖರೀದಿ ಬಲು ಸುಲಭ ಎಂದು ಅರ್ಥೈಸಿದರು.
ಈ ಹಿಂದೆ, ಬಂಗಾರವನ್ನು ನಿಧಿ ರೂಪದಲ್ಲಿ ಮಡಿಕೆಗಳಲ್ಲಿ, ನೆಲದಲ್ಲಿ ಹೂತಿಡುತ್ತಿದ್ದರು. ಅಲ್ಲದೇ, ಸಮೃದ್ಧವಾದ ನಾಡು ವಿಜಯನಗರದಲ್ಲಿ ಚಿನ್ನ ಬೀದಿಯಲ್ಲಿ ಮಾರಾಟ ಮಾಡುತ್ತಿದ್ದರು. ಆದರೆ, ಈಗಿನ ಕಾಲದಲ್ಲಿ ಚಿನ್ನ ಎಂಬುದು ದುಬಾರಿ ಲೋಹವಾಗಿದೆ.
ಸಾಮಾನ್ಯರ ಜೀವನದಲ್ಲಿ ಚಿನ್ನ ಎಂಬುದು ಕನಸಾಗಿದ್ದು, ದುಡಿಮೆ ಮಾಡಿಕೊಂಡು ಚಿನ್ನವನ್ನ ಖರೀದಿಸಿ ಹಾಕಿಕೊಂಡರೆ, ಅದರ ಅರ್ಥವೇ ಬೇರೆಯಾಗಿರುತ್ತದೆ. ತಿಂಗಳು, ತಿಂಗಳು ಹಣವನ್ನು ಕೂಡಿಟ್ಟು ಮನೆಗೆ ಲಕ್ಷ್ಮಿ ಬರಬೇಕು ಆಗ ಆಗುವ ಖುಷಿಯೇ ಬೇರೆ.
ಹೀಗಾಗಿ ತಿಂಗಳು, ತಿಂಗಳು ಹಣ ಉಳಿಸಿ ಸ್ಕೀಮ್ ಗೆ ಹಣ ಹಾಕಿ ಅಮೂಲ್ಯವಾದ ಚಿನ್ನ ಗಳಿಸಿಕೊಳ್ಳುವ ಸಾಮರ್ಥ್ಯ ಎಲ್ಲರೂ ತೋರಲಿ. ಈ ಸ್ಕೀಂ ಹೆಚ್ಚು ಜನರಿಗೆ ತಲುಪಲಿ. ಶ್ರಾವಣದ ಸಂಕಲ್ಪ ಕಾಲದಲ್ಲಿ ನಿಮ್ಮ ಕನಸುಗಳು ಈಡೇರಲಿ ಎಂದು ಶುಭ ಮರವಂತೆ ಆಶಿಸಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮೈತ್ರಿ ಮೈ ಜುವೆಲ್ ನಿರ್ದೇಶಕಿ ಅನಿತಾ, ರೋಟರಿ ಇನ್ನರ್ ವ್ಹೀಲ್ ಅಧ್ಯಕ್ಷೆ ಗಾಯತ್ರಿ ಸುಮತೀಂದ್ರ, ಶಿಕ್ಷಕಿ ರಾಧಿಕಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈತ್ರಿ ಮೈ ಜುವೆಲ್ ಸಿಇಓ ಸೇಂಥಿಲ್ ವೇಲನ್ ವಹಿಸಿದ್ದರು.