
ಶಿವಮೊಗ್ಗ:
ನಗರದ ಪ್ರತಿಷ್ಟಿತ ಸ್ಟೈಲ್ ಡ್ಯಾನ್ಸ್ ಕ್ರಿವ್ ನೃತ್ಯ ಸಂಸ್ಥೆಯ ವತಿಯಿಂದ ಸ್ವಾತಂತ್ರೋತ್ಸವ ಅಂಗವಾಗಿ “ನಮ್ಮ ಮಲೆನಾಡ ಸ್ವಾತಂತ್ರೋತ್ಸವದ ದೇಶಾಭಿಮಾನದ ಉತ್ಸವ” ಎಂಬ ಕಾರ್ಯಕ್ರಮವನ್ನು ಬ್ಯಾರಿಸ್ ಸಿಟಿ ಸೆಂಟರ್

ಮಾಲ್ನಲ್ಲಿ ಆ.೧೨ರಿಂದ ೧೫ ರವರೆಗೆ 2ವರ್ಷದ ಮಕ್ಕಳಿಂದ 60ವರ್ಷದ ವಯಸ್ಸಿನ ವಯಸ್ಕರ ವರೆಗೆ ವಿವಿಧ ಮಾಧರಿಯ ಸ್ಪರ್ಧೆಗಳನ್ನು ಶಿವಮೊಗ್ಗದ ಸಿಟಿ ಸೆಂಟರ್ ಮಾಲಿನಲ್ಲಿ ಆಯೋಜಿಸಲಾಗಿದೆ.

ಆ.೧೨ರಂದು ದೇಶಭಕ್ತಿಗೀತೆ ಕರೋಕೆ ಗಾಯನ ಸ್ಪರ್ಧೆ, ಆ.೧೩ ದೇಶಭಕ್ತಿ ನೃತ್ಯ ಸ್ಪರ್ಧೆ ಆ.೧೪ರಂದು ದೇಶಭಕ್ತರ ವೇಷಭೂಷಣ ಸ್ಪರ್ಧೆಗಳನ್ನು ಆಯೋಜಿಸಿದ್ದು, ಆ.೧೫ರಂದು ಬಹುಮಾನ ವಿತರಣೆ ಹಾಗೂ ಧ್ವಜಾರೋಹಣ

ಮತ್ತು ಸಾಮೂಹಿಕ ರಾಷ್ಟ್ರಗೀತೆ, ಶಿವಮೊಗ್ಗದ ಸ್ಟೈಲ್ ಡಾನ್ಸ್ ಕ್ರಿವ್ ಸಂಸ್ಥೆಯ ಪ್ರತಿಭಾನ್ವಿತ ನೃತ್ಯ ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆಗೆ ನೃತ್ಯವನ್ನು ಆಯೋಜನೆ ಮಾಡಲಾಗಿದೆ.

ಸ್ಪರ್ಧೆಗೆ ಭಾಗವಹಿಸಲು ಯಾವುದೇ ಶುಲ್ಕವಿರುದಿಲ್ಲ. ಮೊದಲೇ ಹೆಸರು ನೊಂದಾಯಿಸಿದವರಿಗೆ

ಮಾತ್ರ ಈ ಅವಕಾಶ ಸಿಗಲಿದೆ
ಹೆಚ್ಚಿನ ಮಾಹಿತಿಗಾಗಿ ೯೮೪೫೩ – ೮೮೦೨೮ / ೮೧೨೩೦ – ೦೫೬೦೩ಗೆ ಸಂಪರ್ಕಿಸಲು ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಶಶಿಕುಮಾರ್ ಮತ್ತು ವ್ಯವಸ್ಥಾಪಕರಾದ ಎಂ ಜಿ ವಿನಯ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.