ಶಿವಮೊಗ್ಗ, ಆ.೦೧:
ಮಾತೃಭಾಷೆಯ ವಿದ್ವತ್ತಿನ ಜೊತೆಗೆ ಬಹುಭಾಷೆ ಗಳ ಕಲಿಕೆಗೆ ಮುಕ್ತರಾಗಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಸಲಹೆ ನೀಡಿದರು.


ನಗರದ ಸಿ.ಬಿ.ಆರ್ ಕಾನೂನು ಮಹಾವಿದ್ಯಾಲ ಯದ ವತಿಯಿಂದ ಕಾನೂನು ಸ್ನಾತ್ತಕೋತ್ತರ ಕಲಿಕಾ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ ಇಂಗ್ಲಿಷ್ ಭಾಷೆ ಕುಶಲತೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು


ಇಂದಿನ ಸ್ಪರ್ಧಾತ್ಮಕ ಯುಗವು ಇಂಗ್ಲಿಷ್ ಭಾಷೆ ಸೇರಿದಂತೆ ವಿವಿಧ ಭಾಷೆಗಳ ಕಲಿಕೆಯ ಅತ್ಯವಶ್ಯಕತೆ ಯನ್ನು ಸಾರಿ ಹೇಳುತ್ತಿದೆ. ಅದರಲ್ಲಿಯು ಕಾನೂನು ವಿದ್ಯಾರ್ಥಿಗಳಿಗೆ ಪ್ರಾದೇಶಿಕ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪರಿಪೂರ್ಣ ಕಲಿಕೆ ಅವಶ್ಯಕವಾಗಿದೆ. ಬಹುತೇಕ ಕಾನೂನಿನ ವಿಷಯಗಳು ಆಂಗ್ಲ ++

ಭಾಷೆಯಲ್ಲಿಯೇ ಇದ್ದು ಅದನ್ನು ಪ್ರಾದೇಶಿಕ ಭಾಷೆಗಳ ಮೂಲಕ ಜನ ಸಾಮಾನ್ಯರಿಗೆ ತಲುಪಿಸುವ ಕಾರ್ಯ ನಡೆಯಲಿ ಎಂದು ಹೇಳಿದರು.+


ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗ ರಾಜ ಮಾತನಾಡಿ, ಮಾತೃಭಾಷೆ ನಮ್ಮಲ್ಲಿ ವಿಮರ್ಶಾತ್ಮಕ ಚಿಂತನೆಗಳನ್ನು ಬೆಳೆಸಲಿದ್ದು, ಇಂಗ್ಲಿಷ್ ನಂತಹ ಇತರೇ ಭಾಷೆಗಳನ್ನು ಕಲಿಯಲು ಪೂರಕವಾಗಿ

ನಿಲ್ಲುತ್ತದೆ. ಶೈಕ್ಷಣಿಕ ಅಧ್ಯಯನದಲ್ಲಿ ಇಂಗ್ಲಿಷ್ ಅನ್ನು ವಿಷಯವಾಗಿ ಕಲಿಯುವ ಬದಲಿಗೆ ಭಾಷೆಯಾಗಿ ಕಲಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯತ್ತಿಗೆ ಬೇಕಾದ ಅಗತ್ಯ ಕೌಶಲ್ಯತೆಗ ಳನ್ನು ಕಲಿಸಲು ಎನ್‌ಇಎಸ್ ಮುಂದಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಅನಲಾ ಅಧ್ಯಕ್ಷತೆ ವಹಿಸಿದ್ದರು. ಎನ್‌ಇಎಸ್ ಕುಲಸಚಿವರಾದ ಪ್ರೊ.ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ನಿವೃತ್ತ ಪ್ರಾಂಶುಪಾಲರಾದ ಪ್ರೊ.ಡಿ.ಎಸ್.ಮಂಜುನಾಥ, ಸಹ ಪ್ರಾಧ್ಯಾಪಕ ಡಾ.ಆದರ್ಶ್.ಎಂ.ಎನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!