ಶಿವಮೊಗ್ಗ: ಬಾವಿಯ ನೀರು ಸೇದಲು ಹೋದಾಗ ಹಗ್ಗ ತುಂಡಾದ ಹಿನ್ನೆಲೆಯಲ್ಲಿ ಬಾವಿಯನ್ನು ಇಣುಕಿ ನೋಡಲು ಹೋದ 19 ವರ್ಷದ ಯುವತಿ ಬಾವಿಗೆ ಬಿದ್ದು ಸಾವು ಕಂಡ ಘಟನೆ ಇಂದು ಮಧ್ಯಾಹ್ನ ಸಾಗರ ಸಮೀಪದ ತ್ಯಾಗರ್ತಿಯಲ್ಲಿ ನಡೆದಿದೆ .


ಬಾವಿಯಲ್ಲಿ ನೀರು ಸೇದಲು ಹೋದಾಗ ಹಗ್ಗ ತುಂಡಾದ ಹಿನ್ನೆಲೆಯಲ್ಲಿ ತ್ಯಾಗರ್ತಿಯ ಅಂಜಲಿ (19) ಈ ಅವಘಡಕ್ಕೆ ತುತ್ತಾಗಿದ್ದಾಳೆ.
ತ್ಯಾಗರ್ತಿಯ ಈಕೆ ಪ್ರಸಕ್ತ ಉಳ್ಳೂರು ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ಓದುತ್ತಿದ್ದಳು. ಸಾಗರ ಗ್ರಾಮಾಂತರ ಸಿಪಿಐ ಗಿರೀಶ್, ಎಸೈ ಭರತ್ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು.
ಇನ್ನೊಂದು ಮೂಲಗಳ ಪ್ರಕಾರ ಅಂಜಲಿ ಬಾವಿ ಕಟ್ಟೆ ಮೇಲೆ ಕುಳಿತು ಓದುತ್ತಿದ್ದಳೆನ್ನಲಾಗಿದೆ. ಆಯ ತಪ್ಪಿ ಬಿದ್ದಿರಬಹುದೆಂದು ಹೇಳಲಾಗುತ್ತಿದೆ.

By admin

ನಿಮ್ಮದೊಂದು ಉತ್ತರ

error: Content is protected !!