23/24 ರಂದು ಹಲವೆಡೆ ಕರೆಂಟ್ ಕಟ್….!
ಶಿವಮೊಗ್ಗ, ಜ.21:
ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪನಿಯು ನಗರ ಶಂಕರ ಮಠ ಮುಖ್ಯ ರಸ್ತೆ (ಸಂಗೋಳ್ಳಿ ರಾಯಣ್ಣ ಫ್ಲೈ ಓವರ್ ನಿಂದ ಮಾರುತಿ ಷೊರೂಂ ವರೆಗೂ) ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಡೆಲ್ ಸಬ್ ಡಿವಿಷನ್ ಯೋಜನೆಯಡಿ ಕೇಬಲ್ ಅಳವಡಿಕೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ. 23 ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 06:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನ.ಉ.ವಿ-1ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿದ್ಯುತ್) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆಗ್ಗಾನ್ ವಿ.ವಿ.ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಎ.ಆರ್.ಬಿ. ಕಾಲೋನಿ, ಅಶೋಕನಗರ, ಡಿ.ಎ.ಆರ್.ಕ್ವಾಟ್ರಸ್, ಸಕ್ರ್ಯೂಟ್‍ಹೌಸ್, ಎಸ್.ಪಿ.ಕಚೇರಿ, ಸಾಗರ ಮುಖ್ಯರಸ್ತೆ, ಈಡಿಗರ ಭವನ, ಆಯನೂರು ಗೇಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜ. 23 ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 06:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನ.ಉ.ವಿ-3ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿದ್ಯುತ್) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ನ.ಉ.ವಿ.-2ರ ಘಟಕ –6ರ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್‍ಸಿಲಿ ಯೋಜನೆಯಡಿ ಕಂಬಗಳನ್ನು ಅಳವಡಿಸುವ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಈ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಗೋಪಿಶೆಟ್ಟಿಹಳ್ಳಿ, ಇಲಿಯಾಜ್‍ನಗರ 3 ರಿಂದ 12ನೇ ಕ್ರಾಸ್, ಸಿದ್ದೇಶ್ವರ ಸರ್ಕಲ್, ಚಾಲುಕ್ಯನಗರ, ಕೆ.ಹೆಚ್.ಬಿ.ಕಾಲೋನಿ, ಮಂಡಕ್ಕಿ ಭಟ್ಟಿ, ಮೇಲಿನ ತುಂಗಾನಗರ, ಕೆಳಗಿನ ಗೋಪಿಶೆಟ್ಟಿಕೊಪ್ಪ, ಅಣ್ಣಾನಗರ, ಅರಕೆರೆ, ಮಂಜುನಾಥ ರೈಸ್‍ಮಿಲ್, ಶಂಕರ ಕಣ್ಣಿನ ಆಸ್ಪತ್ರೆ, ನಾರಾಯಣ ಹೃದಯಾಲಯ ಮತ್ತು ಅದರ ಹಿಂಭಾಗದ ಪ್ರದೇಶಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಕಲ್ಲೂರು ಮಂಡ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ದಿ: 23/01/2021 ರಂದು ಬೆಳಗ್ಗೆ 09 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ.
ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನ.ಉ.ವಿ.-2ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ. 23 ಮತ್ತು 24 ರಂದು ಕರೆಂಟಿಲ್ಲ…
ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪನಿಯು ಮಂಡ್ಲಿ, ಗಾಜನೂರು ಮತ್ತು ರಾಮಿನಕೊಪ್ಪ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ದಿ: 23.01.2021 ಮತ್ತು ದಿ: 24.01.2021 ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗಾಜನೂರು, ಹೊಸಳ್ಳಿ, ರಾಮೇನಕೊಪ್ಪ, ಕಲ್ಲೂರು, ಹೊಸಹೊನ್ನಾಪುರ, ಅಗಸವಳ್ಳಿ, ಲಕ್ಷ್ಮೀಪುರ, ಹರಕೆರೆ, ಪೇಪರ್ ಪ್ಯಾಕೇಜ್, ಶಂಕರ ಕಣ್ಣಿನ ಆಸ್ಪತ್ರೆ, ಇಲಿಯಾಸ್ ನಗರ, ಹಳೇಮಂಡ್ಲಿ, ಅಮೃತ್ ರೈಸ್ ಮಿಲ್, ಗಂಧರ್ವನಗರ, ಶ್ರೀನಿವಾಸ ಲೇಔಟ್, ಮಂಜುನಾಥ ರೈಸ್‍ಮಿಲ್, ಬೆನಕೇಶ್ವರ ರೈಸ್‍ಮಿಲ್, ಅನ್ನಪೂರ್ಣೇಶ್ವರಿ ಬಡಾವಣೆ, ನಾರಾಯಣ ಹೃದಯಾಲಯ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪಾ&ನಿ ಗ್ರಾ.ಉ.ವಿ.ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿದ್ಯುತ್) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.