ಶಿವಮೊಗ್ಗ, ಜೂ.25: ಕೊರನಾ ಸೋಂಕಿರುವ ವ್ಯಕ್ತಿಯೊರ್ವ ಮರ ಗೆಲಸ ಮಾಡಿದ ಎಂಬ ಶಂಕೆಯ ಮೇರೆಗೆ ಶಿವಮೊಗ್ಗ ನೆಹರೂ ರಸ್ತೆಯ ಮುಖ್ಯ ಕೇಂದ್ರ ಬಿಂದುವಾಗಿರುವ ಸಚಿವರು, ಶಾಸಕರ ಕಛೇರಿಯನ್ನು ಹೊಂದಿರುವ ಸ್ಮಾರ್ಟ್ಸಿಟಿ ಬಿಲ್ಡಿಂಗನ್ನು ಎರಡು ದಿನಗಳ ಕಾಲ ಸ್ಯಾನಿಟೈಜೇಷನ್ಗೋಸ್ಕರ ಮುಚ್ಚಲಾಗಿದೆ.
ಮಗ್ಗುಲಲ್ಲೇ ಬಹುದೊಡ್ಡ ಮಾಲ್ ಆಗಿರುವ ಸಿಟಿ ಸೆಂಟರ್ ಮಗ್ಗುಲಲ್ಲಿರುವ ಈ ಬಿಲ್ಡಿಂಗ್ನಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ ಅವರು ಕಛೇರಿಯನ್ನು ಮಾಡಿಕೊಂಡಿದ್ದರು. ಇಲ್ಲಿ ಸ್ಮಾರ್ಟ್ ಸಿಟಿ ಕಛೇರಿ ಸಹ ಕಾರ್ಯನಿರ್ವಹಿಸುತ್ತಿತ್ತು.
ಅತಿ ಹೆಚ್ಚು ಜನರು ಸೇರುವ ಈ ಭಾಗದಲ್ಲಿ ನಿನ್ನೆ ಮರಗೆಲಸ ಮಾಡುವ ವ್ಯಕ್ತಿಯೋರ್ವನಿಗೆ ಕೊರೊನಾ ಸೋಂಕಿರುವ ಅನುಮಾನ ವ್ಯಕ್ತವಾಗಿದ್ದು, ಪರೀಕ್ಷೆಗೆ ಒಳಪಡಿಸಲಾಗಿದೆ. ಆ ಫಲಿತಾಂಶ ಬರುವ ಪೂರ್ವದಲ್ಲೇ ಎಚ್ಚೆತ್ತಿರುವ ಜಿಲ್ಲಾಡಳಿತ ಸ್ಮಾರ್ಟ್ಸಿಟಿ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಪಶುಪಾಲನ ಇಲಾಖೆ, ಸಚಿವರು, ಶಾಸಕರ ಕಛೇರಿ ಸೇರಿದಂತೆ ಹಲವು ಕಛೇರಿಗಳನ್ನು ಸಂಪೂರ್ಣ ಮುಚ್ಚಲಾಗಿದ್ದು, ಒಟ್ಟಾರೆ ಎರಡು ದಿನ ಸ್ಯಾನಿಟೈಜೇಷನ್ಗೆ ಕ್ರಮ ಕೈಗೊಳ್ಳಲಾಗಿದೆ. ಶಿವಮೊಗ್ಗ 119 ರ ಸಂಖ್ಯೆಯ ನಡುವೆ ಮತ್ತೆ ಇಂದು ಮಂಡಗದ್ದೆ ಮೂಲದ 2 ಸೋಂಕಿತರ ಶಂಕೆಯನ್ನು ಹೊಂದಿದೆ.
ಅತ್ಯಾಧಿಕ ಸಂಖ್ಯೆಯ ಮಹಿಳೆಯರು ಕರ್ತವ್ಯ ನಿರ್ವಹಿಸುವ ಮಾಚೇನಹಳ್ಳಿಯ ಗಾರ್ಮೆಂಟ್ಸ್ನಲ್ಲಿ ಮೂವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ ಮೂವರು ಕರ್ತವ್ಯ ನಿರ್ವಹಿಸುತ್ತಿದ್ದ ಕೊಠಡಿಗಳನ್ನು ಬಂದ್ ಮಾಡಲಾಗಿದ್ದು, ಉಳಿದಂತೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡಲಾಗಿದೆ.
ಈ ಮೂವರು ಹೊರರಾಜ್ಯಕ್ಕೆ ಹೋಗಿ ಬಂದ ಹಿನ್ನೆಲೆಯಲ್ಲಿ ಮೊದಲು ಏಳು ದಿನಗಳ ಹೋಂ ಕ್ವಾರಂಟೈನ್ ಮಾಡಿದ್ದರು. ಅಂದಿನ ಪರೀಕ್ಷೆಯಲ್ಲಿ ನೆಗಿಟಿವ್ ಬಂದಿತ್ತು. ಈಗ ಸೋಂಕು ಕಂಡುಬಂದಿರುವುದರಿಂದ ಈ ಕೊಠಡಿಗಳನ್ನು ಬಂದ್ ಮಾಡಲಾಗಿದೆ. ಈ ಗಾಮೇಂರ್ಟ್ನಲ್ಲಿ ಸುಮಾರು ೪ಸಾವಿರ ಮಹಿಳೆಯರು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದು, ಅತ್ಯಂತ ವ್ಯವಸ್ಥಿತವಾಗಿ ಸ್ಯಾನಿಟೈಜೇಷನ್ ಹಾಗೂ ತಪಾಸಣೆಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಗಾಬರಿಯಾಗುವ ಆತಂಕವಿಲ್ಲವೆಂದು ಮೂಲಗಳು ತಿಳಿಸಿವೆ.