ಶಿವಮೊಗ್ಗ,ಜು.೧೦: ವಿನೋಬನಗರ ೬೦ ಅಡಿ ರಸ್ತೆಯ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ಹಾಗೂ ಶ್ರೀ ಶನೈಶ್ಚರ ದೇವಾಲಯದಲ್ಲಿ ಇಂದಿನಿಂದ ೧೪ರವರೆಗೆ ಶ್ರೀ ಅಥರ್ವ ಸಂಹಿತಾ ಯಾಗ ಅತ್ಯಂತ ವಿಧಿವತ್ತಾಗಿ ಜರುಗಲಿದೆ.


ಜು. ೧೦ರ ಬುಧವಾರದಿಂದ ಯಾಗ ಆರಂಭವಾಗಲಿದ್ದು, ಜು. ೧೪ರ ಭಾನುವಾರ ಮಹಾ ಪೂರ್ಣಾ ವತಿಯೊಂದಿಗೆ ಅಥರ್ವ ಸಂಹಿತಾ ಯಾಗ ಸಂಪನ್ನವಾಗಲಿದೆ.


ಈ ನಿಮಿತ್ತ ಪ್ರತಿದಿನ ಸಂಜೆ ಭಜನಾ ಪರಿಷತ್ ಸಹಯೋಗದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಜರುಗಲಿದ್ದು, ಪ್ರತಿದಿನ ಸಂಜೆ ೬.೩೦ರಿಂದ ೮ ಗಂಟೆವರೆಗೆ ವಿದ್ವಾನ್ ಹಂದಲಸು ವಾಸುದೇವ ಭಟ್ಟರಿಂದ ಮೋಕ್ಷದ ೧೦ ಸೋಪಾನಗಳು ಕುರಿತು ವಿಶೇಷ ಪ್ರವಚನ ಇರುತ್ತದೆ. ಉಪನ್ಯಾಸ ನಂತರ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ.


ಜು. ೧೪ರ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ಪೂರ್ಣಾಹುತಿ ನಂತರ ಹಂದಲಸು ವಾಸುದೇವ ಭಟ್ಟರಿಂದ ಅಥರ್ವಣ ವೇದ ಮಹತ್ವ ಕುರಿತು ಉಪನ್ಯಾಸವಿದೆ. ನಂತರ ತೀರ್ಥಪ್ರಸಾದ ವಿನಿಯೋಗ, ಮಹಾ ಅನ್ನಸಂತರ್ಪಣೆ ಜರುಗಲಿದೆ.


ಲೋಕ ಕಲ್ಯಾಣಾರ್ಥ ಹಾಗೂ ವೇದಗಳ ಸಂರಕ್ಷಣೆಗಾಗಿ ನಮ್ಮ ದೇವಳದಲ್ಲಿ ಪ್ರತಿವರ್ಷದ ಆಷಾಝ ಮಾಸದಲ್ಲಿ ಒಂದೊಂದು ವೇದದ ಸಂಹಿತಾ ಯಾಗದಂತೆ ನಾಲ್ಕು ವೇದಗಳ ಯಾಗ ನಡೆಸಿಕೊಂಡು ಬರಲಾಗುತ್ತಿದೆ. ದೇವಾಲಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಡಿಸಿಎಂ ಕೆ.ಎಸ್.

ಈಶ್ವರಪ್ಪ ಮತ್ತು ವೇ|ಬ್ರ|ಶ್ರೀ| ಅ.ಪ. ರಾಮಭಟ್ಟರ ಮಾರ್ಗದರ್ಶನದಂತೆ ಯಾಗಗಳನ್ನು ನಡೆಸಿಕೊಂಡು ಬರಲಾಗಿದ್ದು, ಈ ಬಾರಿ ಜರುಗುವ ಅಥರ್ವ ಸಂಹಿತಾ ಯಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಶ್ರೀ ಶನೈಶ್ಚರ ದೇವಳ ಸಮಿತಿ ಟ್ರಸ್ಟ್ ಪ್ರಮುಖರು, ಅರ್ಚಕವೃಂದದ ಪರವಾಗಿ ಪ್ರಧಾನ ಅರ್ಚಕ ವಿನಾಯಕ ಬಾಯರಿ ಅವರು ಕೋರಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!