ಶಿವಮೊಗ್ಗ,ಜು.04:
ಕರ್ನಾಟಕ ರಾಜ್ಯ ರೂಲರ್ ಸ್ಕೇಟಿಂಗ್ ಅಸೋಸಿಯೇಷನ್ ಶಿವಮೊಗ್ಗ ಜಿಲ್ಲೆಯಲ್ಲಿ ನಡೆಸುತ್ತಿರುವ ರಾಜ್ಯದ ಅತ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ರೋಲರ್ ಸ್ಕೇಟಿಂಗ್ ರೋಡ್ ರೇಸ್ ಪಂದ್ಯಾವಳಿ ಜುಲೈ ಆರರಿಂದ ಎರಡು ದಿನಗಳ ಕಾಲ ಶಿವಮೊಗ್ಗ ಹೊರವಲಯದ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ನಡೆಯಲಿದೆ ಎಂದು ಕೆ.ಆರ್. ಎಸ್.ಎ ತಿಳಿಸಿದೆ.
ಈ ಪಂದ್ಯಾವಳಿಗೆ ಶಿವಮೊಗ್ಗದ ‘ನಮ್ಮ ಶಿವಮೊಗ್ಗ ರೋಲರ್ ಅಸೋಸಿಯೇಷನ್’ ಪ್ರಾಯೋಜಕತ್ವ ವಹಿಸಿದ್ದು, ಭಾರೀ ದೊಡ್ಡ ಮಟ್ಟದ ಈ ಪಂದ್ಯಾವಳಿಗೆ ಸಕಲ ಸಿದ್ದತೆ ನಡೆದಿದೆ ಎಂದು ಸಂಸ್ಥೆಯ ಅಧ್ಯಕ್ಷ ಮೋಹನ್ ಕುಮಾರ್ ಕೆ.ಹೆಚ್ ಹಾಗೂ ಕಾರ್ಯದರ್ಶಿ ಎಂ. ರವಿ ತಿಳಿಸಿದ್ದಾರೆ.
ಬರುವ ಜುಲೈ 6 ಮತ್ತು 7ರಂದು ಶಿವಮೊಗ್ಗ ಹೊರವಲಯದ ದೇವಕಾತಿಕೊಪ್ಪದ ತಮ್ಮ
ಕೈಗಾರಿಕಾ ಪ್ರದೇಶದಲ್ಲಿ ಈ ಪಂದ್ಯಾವಳಿಯಲ್ಲಿ ಐನೂರಕ್ಕೂ ಹೆಚ್ಚು ಕ್ರೀಡಾಪಟುಗಳು ಸೇರಿದಂತೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪೋಷಕರು ಆಗಮಿಸುತ್ತಿದ್ದಾರೆ.
ನುರಿತ ಹಾಗೂ ಅರ್ಹತೆ ಹೊಂದಿದ ಅಂಪೈರ್ ಗಳು ಮತ್ತು ರಾಜ್ಯ ಸಮಿತಿ ನಡೆಸುವ ಪಂದ್ಯಾವಳಿ ಆರರ ಬೆಳಿಗ್ಗೆ ಏಳಕ್ಕೆ ಆರಂಭವಾಗಲಿದೆ. ಅಂದು ಬೆಳಿಗ್ಗೆ ಎಂಟು ಗಂಟೆಗೆ ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಹಾಗೂ ಕ್ರೀಡಾಕೂಟ ನಡೆಯುವ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಶಾಸಕರಾದ ಶಾರದಾ ಪೂರ್ಯಾನಾಯ್ಕ್, ಎಸ್. ಚನ್ನಬಸಪ್ಪ, ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಕೆಐಎಡಿಬಿ ವ್ಯವಸ್ಥಾಪಕ ನಿರ್ಧೇಶಕ ಈಶ್ವರಪ್ಪ
, ಯುವಜನ ಕ್ರೀಡಾ ಇಲಾಖೆಯ ಎ.ಡಿ. ಮಂಜುನಾಥ್ ಸ್ವಾಮಿ, ಕೆ ಆರ್ ಎಸ್ ಎ ಅಧ್ಯಕ್ಷ ಎಂ. ಲಕ್ಷ್ಮೀನಾರಾಯಣ್ , ಶಿವಮೊಗ್ಗ ಎ ಎಸ್. ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಗ್ರಾಮಾಂತರ ಪೊಲೀಸ್ ಇನ್ಸ್ ಸ್ಪೆಕ್ಟರ್ ಸತ್ಯನಾರಾಯಣ್ ಸೇರಿದಂತೆ ವಿವಿಧ ಗಣ್ಯರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಆರ್ ಎಸ್ ಎ ಪ್ರಧಾನ ಕಾರ್ಯದರ್ಶಿ ಇಂದೂದರ್ ಸೀತರಾಂ ವಹಿಸಲಿದ್ದಾರೆ.
ಇದೇ ಮೊದಲ ಬಾರಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಪಂದ್ಯಾವಳಿ ನಡೆಯುತ್ತಿದೆ. ಇದನ್ನು ರಾಜ್ಯ ಸಂಸ್ಥೆ ನಡೆಸುತ್ತಿದೆ. ಉದ್ಘಾಟನಾ ಸಮಾರಂಭದಲ್ಲಿ ನೂತನ ಸಂಸದರು, ವಿಧಾನಪರಿಷತ್ ಸದಸ್ಯರಿಗೆ ಆತ್ಮೀಯ ಸನ್ಮಾನವಿರುತ್ತದೆ.
ಆತ್ಮೀಯ ಕರೆಯೋಲೆ: ಪಂದ್ಯಾವಳಿಯು ಜುಲೈ ಆರರ ಬೆಳಿಗ್ಗೆ 7:00 ಯಿಂದ ಆರಂಭಗೊಳ್ಳಲಿದ್ದು ಕಾರ್ಯಕ್ರಮವು ಬೆಳಿಗ್ಗೆ 10:00 ಗಂಟೆಗೆ ಉದ್ಘಾಟನೆಯಾಗಲಿದೆ. ತಾವುಗಳು ಉದ್ಘಾಟನಾ ಸಮಾರಂಭಕ್ಕೆ ಆಗಮಿಸುವ ಮೂಲಕ ಸೂಕ್ತ ಪ್ರಚಾರ ನೀಡಲು ಕೋರುತ್ತಿದ್ದೇವೆ.