ನೀವು ಎಷ್ಟೇ ಒಳ್ಳೆಯರಾಗಿದ್ದರೂ, ಸಾಮಾಜಿಕ ಕಳಕಳಿ ಹೊಂದಿದ್ದರೂ ಸಹ ಯಾರಿಗೂ “ಪುಕ್ಸಟ್ಟೆ ಅಯ್ಯೋ ಪಾಪ” ಅನ್ಬೇಡ್ರಿ…,
ತುಂಗಾ ತರಂಗ ದಿನಪತ್ರಿಕೆ ಕಳೆದ ಶನಿವಾರದಿಂದ ಆರಂಭಿಸಿದ ನೆಗೆಟಿವ್ ಥಿಂಕಿಂಗ್ ಅಂಕಣ ಮೊದಲ ಸಂಚಿಕೆ ಅತ್ಯಂತ ಹೆಚ್ಚಿನ ಚರ್ಚೆಗೆ ಒಳಗಾಗಿದ್ದು ವಿಶೇಷ.
ನಾನೆಲ್ಲಿ ಸಾಲ ಕೇಳಿದೆ? ನಾನೇನಾದರೂ ನಿನಗೆ ಸಾಲ ಕೇಳಿದ್ದೇನಾ? ನೀನೇನಾದರೂ ಕೊಟ್ಟಿದ್ದೀಯಾ? ನೀನು ಯಾರಿಗೂ ಸಾಲ ಕೊಡೋದಿಲ್ವಾ? ಹೀಗೆ ನೂರಾರು ಪ್ರಶ್ನೆಗಳು ಓದುಗ ವಲಯದಿಂದ ಮೂಡಿ ಬಂದವು. ಮೊದಲು ತುಂಗಾ ತರಂಗದ ಈ ಅಂಕಣದ ಕುರಿತು ಮುಕ್ತ ಮನದಿಂದ ಚರ್ಚಿಸಿದ ಎಲ್ಲಾ ಓದುಗರಿಗೆ ಪತ್ರಿಕೆ ಅಭಿನಂದನೆಗಳನ್ನು ತಿಳಿಸುತ್ತದೆ.
ಒಂದಂತೂ ಸತ್ಯ ಇದು ಸಮಾಜದ ಮುಗ್ಧ ಮನಸುಗಳ ನಡುವಿನ ಒಂದಿಷ್ಟು ಬೆರಳೆಣಿಕೆಯ ಕ್ಷುದ್ರ ಮನಸುಗಳು ಇಡೀ ಮುಕ್ತ ಹಾಗೂ ಮುಗ್ಧ ಮನಸ್ಸುಗಳನ್ನು ಕೆ ಚಂಚಲಗೊಳಿಸುತ್ತಿರುವುದು ಇಲ್ಲಿನ ಅತಿ ಮುಖ್ಯ ವಾಸ್ತವದ ವಿವರಣೆಯಾಗಿದೆ.
ಸಾಲ, ಬದುಕು ಎಲ್ಲವನ್ನು ಒಂದೆಡೆ ಇಟ್ಟು ವಾಸ್ತವದ ಸನ್ನಿವೇಶಗಳನ್ನು, ಕಾಣದ ಕಾರಣಗಳನ್ನು, ಮಾಡದ ತಪ್ಪುಗಳನ್ನು ಮೈಮೇಲೆ ಹಾಕಿಕೊಳ್ಳುವ ಮನೋಸ್ಥಿತಿಯ ವಿವರಗಳನ್ನು ನಿಮ್ಮ ಮುಂದೆ ಇಡುವಂತಹ ಒಂದು ಪ್ರಯತ್ನ ಇದಾಗಿದೆ. ಸದಾ ನಿಮ್ಮ ಸಲಹೆ ಇರಲಿ.
ವಂದನೆಗಳೊಂದಿಗೆ
-ಸಂ
ಜಗದ ಶೇಕಡ ಹತ್ತರಷ್ಟಿರುವ ಜನ ನಿಮ್ಮ ಅಯ್ಯೋ ಪಾಪ ಎನ್ನುವ ಮನೋಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಸೆಳೆದು, ನಿಮ್ಮನ್ನು ಬಕ್ರಾಗಳನ್ನಾಗಿ ಮಾಡುತ್ತಾರೆ. ಇದು ಇಂದಿನ ವಾಸ್ತವ ಸತ್ಯಾಂಶ.
ಮತ್ತೊಂದು ಬಗೆಯಲ್ಲಿ ಕೇವಲ ಪಾಸಿಟಿವ್ ಥಿಂಕಿಂಗ್ ಎಂದು ಮನಸ್ಸು ಮಾಡುವ ಬದಲು ಒಂದಿಷ್ಟು ನೆಗೆಟಿವ್ ಗಳ ಬಗ್ಗೆ ನೆಗೆಟಿವ್ ಥಿಂಕಿಂಗ್ ಗಳ ಬಗ್ಗೆ ಯೋಚಿಸುವುದು ಗಮನಹರಿಸುವುದು ಅತ್ಯಂತ ಅಗತ್ಯ. ನಿಮ್ಮ ಮನದಾಳದಲ್ಲಿ ಹುದುಗಿರುವ ಕರುಣೆ ಸಹಜ ಪ್ರೀತಿ ಅನುಕಂಪ ಅಕ್ಕರೆ, ಹಾರೈಕೆ ಮನೋ ಸ್ಥಿತಿಯನ್ನು ಪುಕ್ಕಟ್ಟೆಯಾಗಿ ಯಾರಿಗೂ ಹಂಚದಿರಿ. ಕೊಡು ಪಡೆ ತತ್ವದ ಮೂಲಕ ಎಂತಹದೇ ಪ್ರೀತಿ ತೋರಿಸಿ ಅಷ್ಟು ಪ್ರೀತಿಯನ್ನು ಮತ್ತೆ ಮುಲಾಜಿಲ್ಲದೆ ಅಷ್ಟೇ ಪ್ರಮಾಣದಲ್ಲಿ ಪಡೆಯುವ ನಂಬಿಕೆ ಚಿಂತನೆ ಇದ್ದರೂ ಸಹ ಒಂದಿಷ್ಟು ಉಲ್ಟಾ ಯೋಚಿಸುವವರ ಬಗ್ಗೆ ಅವಲೋಕನ ಮಾಡುವುದು ಅತ್ಯಗತ್ಯ.
ಹಣದ ವಿಷಯ ಬಂದಾಗ ಎಷ್ಟೇ ಮುಲಾಜುಗಳು ನಿಮ್ಮ ಮುಂದೆ ಇದ್ದರೂ ಸಹ ಯಾವುದೇ ಕಾರಣಕ್ಕೂ ಅಲ್ಲಿ ಕನಿಕರ, ಪ್ರೀತಿ ಎಂಬುದು ನಿಮ್ಮ ಮನದಲ್ಲಿ ಮೂಡದಿರಲಿ. ಭಿಕ್ಷೆ ಕೊಡುವ ಬಗ್ಗೆ ನಿಮ್ಮ ಮನಸ್ಥಿತಿ ಹೇಗಿರುತ್ತದೆಯೋ ಹಾಗೆ ಈ ಹಣದ ಕೊಡುಕೊಳ್ಳುವಿಕೆ ವ್ಯವಹಾರ ನಿಮ್ಮ ಮುಂದೆ ಸೂಕ್ಷ್ಮವಾಗಿರಲಿ.
ಭಗವಂತ ಕೊಟ್ಟದ್ದನ್ನು ಇನ್ನೊಬ್ಬರಿಗೆ ಹಂಚಿ ತಿನ್ನಬೇಕೆಂಬ ಹಿರಿಯರ, ವಾಸ್ತವದ ಪಾಸಿಟಿವ್ ಮನೋಸ್ಥಿತಿಯ ಮಾತುಗಳನ್ನು ಇಲ್ಲಿ ಒಂದಿಷ್ಟು ದೂರ ನಿಲ್ಲಿಸಿ. ನಮ್ಮ ಚಿಂತನೆ ಮೊದಲು ವ್ಯಕ್ತಿಗತ ನಿಲುವುಗಳಲ್ಲಿ ಗೆಲ್ಲಲಿ. ಇಷ್ಟು ಗಂಭೀರವಾಗಿ ನಿಮ್ಮ ಮುಂದೆ ಈ ನೆಗೆಟಿವ್ ಥಿಂಕಿಂಗ್ ಗಳನ್ನು ಹೇಳಲು ಅನುಭವಜನ್ಯ ಹಾಗೂ ಕಂಡ ಸತ್ಯಾಂಶಗಳನ್ನು ಅವಲೋಕನ ಮಾಡಿದ್ದು ಕಾರಣ ಎನ್ನಬಹುದು.
ಪ್ರೀತಿ ಅನುಕಂಪ ಕನಿಕರ ಅಕ್ಕರೆ, ಹಾರೈಕೆ ಇವೆಲ್ಲ ಬದುಕಿನ ಒಂದು “ಶಾಪ” ಎಂದುಕೊಳ್ಳಿ. ಅವು ನಿಮ್ಮ ನಡುವೆ ನಿಮ್ಮೊಳಗಿನ ಅಂತರಾತ್ಮಕ್ಕೆ ಒಮ್ಮೆ ಪಡೆಯುವ, ತಿರುಗಿ ಒದೆಯುವ ಸಂಗತಿ ಯಾದೀತು.
ಈ ಸಮಾಜ ಎಷ್ಟು ವಿಚಿತ್ರವಾಗಿದೆ ಎಂದರೆ ಎಲ್ಲೆಡೆ ನಗುಮುಖದ ಸುಂದರತೆಯನ್ನು ಸಾರುವ ಸನ್ನಿವೇಶವನ್ನು ಕಾಣುತ್ತಿದ್ದೇವೆ
ಎಂದುಕೊಳ್ಳುತ್ತಿದ್ದೇವೆ.
ಆದರೆ ಅದರೊಳಗಿನ ಅಂತರಾತ್ಮದಲ್ಲಿ ಕೇವಲ ಪಾಸಿಟಿವ್ ಮನಸ್ಸು ಹೊಂದಿದವರು ಅನುಭವಿಸುವ ನರಕಯಾತನೇ ಮನದ ನೋವು ಅನುಭವಿಸಿದ ಆರ್ಥಿಕ ಸಂಕಷ್ಟ, ಬದುಕಿಗಾಗಿ ಪರದಾಡಿದ ಸನ್ನಿವೇಶಗಳನ್ನು ನಾವಿಲ್ಲಿ ಕಣ್ಣಿಗೆ ಕಾಣದಂತೆ ದೂರ ತಳ್ಳುತ್ತಿದ್ದೇವೆ.
ಈ ಸಮಾಜದಲ್ಲಿ ಕೇವಲ ವೇದಾಂತ ಹೇಳುವುದು ಒಳ್ಳೆಯದು. ವೇದಾಂತ ಪಾಲನೆ ಅಷ್ಟೊಂದು ಒಳ್ಳೆಯದು ಎನಿಸುತ್ತಿಲ್ಲ. ಏಕೆಂದರೆ ಎಲ್ಲರ ಮನದಲ್ಲಿ ವೇದಾಂತ ಪಾಲನೆ ಇಲ್ಲ. ಪಕ್ಕದ ಮನಸ್ಸುಗಳನ್ನು ಗೆದ್ದಂತೆ ಮಾಡಿ, ಅದರೊಳಗೆ ಆಟವಾಡಿ, ಬದುಕ ದಾರಿಯಲ್ಲಿ ನೋವಿನ ಅಲೆ ನೀಡುವ ಎಷ್ಟೋ ಸನ್ನಿವೇಶಗಳು ಅವರವರ ಕರ್ಮಕ್ಕೆ ಎಂದು ಕೊನೆಗೊಳ್ಳುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.
ಆದರೆ ಈ ಕೊನೆಯ ಹುಟ್ಟಿಗೆ ಕಾರಣವಾದ ಅಂಶವನ್ನು ನಾವಿಲ್ಲಿ ಮರೆತುಬಿಡುತ್ತಿದ್ದೇವೆ. ಆದ ತಪ್ಪೆಲ್ಲಾ ನಮ್ಮದೇ ಎಂದುಕೊಂಡು ನಮ್ಮ ನಮ್ಮ ಮನಕ್ಕೆ ಬಯ್ಯುತ್ತಾ, ತಪ್ಪಿನ ಮೂಲವನ್ನು ಮರೆತು ಬದುಕು ಸಾಗಿಸುತ್ತಿರುವುದು ಇಂದಿನ ಬಹುತೇಕ ದುರಂತದ ಸನ್ನಿವೇಶಗಳಲ್ಲಿ ಒಂದಾಗಿದೆ.
ನಾನು ನಿನ್ನ ಬಗ್ಗೆ ಪ್ರೀತಿ ತೋರಿಸಿದರೆ ನೀನು ಅಷ್ಟೇ ಪ್ರೀತಿಯನ್ನು ವಾಪಸ್ ಕೊಡಬೇಕು. ನಿನ್ನ ಪ್ರೀತಿಯಲ್ಲಿ ಒಂದು ಪೈಸೆಯಷ್ಟು ಕಡಿಮೆಯಾಗಬಾರದು ಇದು ಮಾನಸಿಕ, ಆರ್ಥಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ತುಲನೆಗಳಲ್ಲಿ ಒಂದಾಗಿರಬೇಕು. ಆದರೆ ಅಂತಹ ಮನೋಸ್ಥಿತಿಯ ಜನಸ್ತೋಮದ ನಡುವೆ ಒಂದಿಷ್ಟು ವಿಕೃತ ಮನಸ್ಸುಗಳಿಗೆ ಮಾನ, ಮರ್ವಾದೆ, ಸಮಾಜದ ಗೌರವ ಕಣ್ಣಿಗೆ ಕಾಣುವುದಿಲ್ಲ. ಅಂತಹ ವಿಕೃತ ಜನರ ನಡುವೆ ಎಲ್ಲರನ್ನೂ ಅನುಮಾನಿಸಬೇಕಾದ ಸನ್ನಿವೇಶ ನಮ್ಮ ನಡುವೆ ಕಂಡುಬರುತ್ತಿರುವುದು ದುರಂತವಲ್ಲವೇ?
ಇಂತಹ ತಪ್ಪನ್ನು ತಲೆಯ ಮೇಲೆ ಹೊತ್ತುಕೊಳ್ಳಬೇಡಿ. ತಪ್ಪಿನ ಮೂಲವನ್ನು ಗ್ರಹಿಸಿ ಅಂತಹ ತಪ್ಪುಗಳು ಮತ್ತೆ ಆಗದಿರಲಿ. ಅದಕ್ಕೂ ಮುನ್ನ ಮೊದಲೇ ಆ ತಪ್ಪುಗಳನ್ನು ಮಾಡದಿರುವುದು ಒಳ್ಳೆಯದಲ್ಲವೇ?
ಸಂಬಂಧ ಶಾಶ್ವತ ಎಂದುಕೊಂಡಿರುವುದೇ ಇಂದಿನ ಪಾಸಿಟಿವ್ ಥಿಂಕಿಂಗ್. ಇದು ಶಾಶ್ವತವಲ್ಲ ಕೇವಲ ಸಲಹುವಿಕೆಯ ಹಿಂದಿನ ನಾಟಕ ಎನ್ನುವುದನ್ನು ನಾವಿಲ್ಲಿ ನೆಗೆಟಿವ್ ಯೋಚನೆ ಲಹರಿ ಎಂದುಕೊಳ್ಳಲೇ ಬೇಕಾಗುತ್ತದೆ ಅಲ್ಲವೇ?
( ಮುಂದುವರೆಯುತ್ತದೆ )
ತುಂಗಾತರಂಗ ಯೂಟ್ಯೂಬ್ ನ್ಯೂಸ್ ಚಾನೆಲ್ ನೋಡಿ ಹರಸಿ
ಶಿವಮೊಗ್ಗದ ಕ್ಷಣ ಕ್ಷಣದ ಮಾಹಿಗಳನ್ನು ತಿಳಿಯಲು ನಿಮ್ಮ ತುಂಗಾತರಂಗ ಚಾನೆಲ್ ಗೆ SUBSCRIBE ಆಗಿ