ಶಿವಮೊಗ್ಗ,ಜೂ.28:ನಗರದ ಸರ್ಕಾರಿ ಶಾಲೆಗೆ ನುಗ್ಗಿರುವ ದುಷ್ಕರ್ಮಿಗಳು ಮಕ್ಕಳ ಉಪಯೋಗಕ್ಕೆ ಇಟ್ಟಿದ್ದ ದಿನಸಿ ವಸ್ತುಗಳನ್ನು ಹಾಳುಗೆಡವಿದ್ದಾರೆ. ಕಾಮಾಕ್ಷಿ ಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ಸಂಭವಿಸಿದೆ.

ಮುಖ್ಯ ಶಿಕ್ಷಕರು ಬೆಳಗ್ಗೆ ಶಾಲೆಗೆ ಬಂದಾಗ ಅಡುಗೆ ಮನೆಯ ಬಾಗಿಲಿನ ಬೀಗ ಮುರಿದಿತ್ತು.

ಅಡುಗೆ ಮನೆಯಲ್ಲಿ ಗ್ಯಾಸ್ ಆನ್ ಮಾಡಲಾಗಿತ್ತು. ಹಾಲಿನ ಪುಡಿ, ಸಕ್ಕರೆ, ರಾಗಿ ಮಾಲ್ಟ್ ಅನ್ನು ನೀರಿನಲ್ಲಿ ಮಿಕ್ಸ್ ಮಾಡಿ ಹಾಳು ಮಾಡಲಾಗಿತ್ತು.

ಈ ಹಿಂದೆಯು ಇದೇ ರೀತಿಯಾಗಿತ್ತು ಎಂದು ಮುಖ್ಯ ಶಿಕ್ಷಕ ರಂಗಸ್ವಾಮಿ ದೂರು ನೀಡಿದ್ದಾರೆ. ದೊಡ್ಡಪೇಟೆ police ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!