ಶಿವಮೊಗ್ಗ, ಜೂ.28: ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರ ಚಿಕಿತ್ಸಾ ವಿಧಾನವು ಇತ್ತೀಚಿನ ದಿನಗಳಲ್ಲಿ ಮೂಳೆ ಚಿಕಿತ್ಸೆಯ ಕಾರ್ಯವಿಧಾನದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದ್ದು, ಈ ಚಿಕಿತ್ಸೆಗೆ ಒಳಗಾಗುವ ರೋಗಿಗಳು ಶಸ್ತ್ರ ಚಿಕಿತ್ಸೆಯ ನಂತರ ನೋವನ್ನು ಕಡಿಮೆ ಅನುಭವಿಸುತ್ತಾರೆ ಎಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅಫೋಲೋ ಆಸ್ಪತ್ರೆಯ ರೋಬೋಟಿಕ್ ಜಾಯಿಂಟ್ ರಿಪ್ಲೇಸ್‍ಮೆಂಟ್‍ನಲ್ಲಿ ಪರಿಣತಿ ಹೊಂದಿರುವ ಮೂಳೆ ಶಸ್ತ್ರ ಚಿಕಿತ್ಸಕ ಡಾ.ರಾಜಶೇಖರ ಕೆ.ಟಿ. ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೋಬೋಟಿಕ್ಸ್ ಕ್ಷೇತ್ರದಲ್ಲಿನ ಪ್ರಗತಿಯು ಮೊಣಕಾಲು ಬದಲಾವಣೆಯಲ್ಲಿ ಗಣನೀಯ ಸಹಾಯ ಮಾಡಿದೆ. ಹಾಗೂ ಈ ಶಸ್ತ್ರ ಚಿಕಿತ್ಸೆಯು ಅದರ ನಿಖರತೆ ಹಾಗೂ ದಕ್ಷಣೆಯಿಂದಾಗಿ ಶಸ್ತ್ರ ಚಿಕಿತ್ಸೆಯ ನಂತರದ ಆರೈಕೆಯ ಅವಶ್ಯಕತೆಗಳನ್ನು ಕಡಿಮೆ ಮಾಡಿದ್ದೇವೆ ಎಂದರು.
ಶಾರೀರಿಕ ಚಿಕಿತ್ಸೆಯು ಇನ್ನೂ ಅಗತ್ಯವಾಗಬಹುದು. ಆದರೆ ಸಾಮಾನ್ಯವಾಗಿ ಕಡಿಮೆ ಅವಧಿಯಾಗಿರುತ್ತದೆ. ರೋಗಿಯ ಆರಂಭಿಕ ಸಜ್ಜುಗೊಳಿಸುವಿಕೆಯಿಂದಾಗಿ ಮೂತ್ರದ ಕ್ಯಾತಿಟೆರೈಸೇಶನ್ ಮತ್ತು ಬೆಡ್‍ಸೋರ್‍ಗಳಂತಹ ತೊಂದರೆಗಳು ಕಡಿಮೆ ಸಾಮಾನ್ಯವಾಗಿದೆ. ಇದು ಸುಗಮ ಚೇತರಿಕೆ ಪ್ರಕ್ರಿಯೆಗೆ ಅನುವು ಮಾಡಿಕೊಡುತ್ತದೆ ಎಂದರು.
ಒಂದೇ ಸಾರಿ ಎರಡು ಮೊಣಕಾಲಿನ ಶಸ್ತ್ರ ಚಿಕಿತ್ಸೆ ದೀರ್ಘಕಾಲದ ಬೆಡ್‍ರೆಸ್ಟ್ ಮತ್ತು ಸೊಂಕಿನ ಅಪಾಯವನ್ನು ಮಾಡಬಹುದು. ರೋಗಿಗಳ ತಮ್ಮ ವೈಯುಕ್ತಿಕ ಆರೋಗ್ಯ ಸ್ಥಿತಿ ಮತ್ತು ಆಧ್ಯತೆಗಳ ಆಧಾರದ ಮೇಲೆ ಉತ್ತಮ ಕ್ರಮ ನಿರ್ಧರಿಸಲು ಅರ್ಹ ಮೂಳೆ ಶಸ್ತ್ರ ಚಿಕಿತ್ಸಕರೊಂದಿಗೆ ತಮ್ಮ ಆಯ್ಕೆಗಳನ್ನು ಚರ್ಚಿಸಬಹುದು ಎಂದ ಅವರು, ನಮ್ಮ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ಲಭ್ಯವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗೌರಿಶಂಕರ್ ಉಪಸ್ಥಿತರಿದ್ದರು.