ಶಿವಮೊಗ್ಗ, ಜೂ.21:
ಜನರಿಗೆ ಕಾನೂನು ಹೇಳಿ ಕಾನೂನು ಬದ್ಧ ನಗರ ನಿರ್ಮಾಣಕ್ಕೆ ಮುಂದಾಗ ಬೇಕಿದ್ದ ಮಹಾನಗರ ಪಾಲಿಕೆ ತನ್ನ ವ್ಯವಸ್ಥೆಯನ್ನು ಕಾನೂನುಬಾಹಿರವಾಗಿ ಮಾಡುತ್ತಾ ಬೇರೆಯವರಿಗೆ ಬುದ್ಧಿವಾದ ಹೇಳುತ್ತದೆ ಎಂಬ ಗಂಭೀರ ಆರೋಪ ಸಾಕ್ಷಿ ಸಹಿತ ಮಾಜಿ ನಗರಪಾಲಿಕೆ ಸದಸ್ಯರಿಂದ ಹೊರಬಂದಿದೆ.


ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರು ನೂತನವಾಗಿ ತಮ್ಮ ಜಾಗದಲ್ಲಿ ಕಟ್ಟಡ ನಿರ್ಮಿಸಲು ಹೋದಾಗ ನಗರ ಯೋಜನೆಯ ಪ್ಲಾನ್ ಪ್ರಕಾರವಾಗಿ ಅನುಮೋದನೆಗೊಂಡಿರುವ ರಸ್ತೆಯ ಜಾಗವನ್ನು ದಾನ ಪತ್ರ ಕೊಟ್ಟು ಪಾಲಿಕೆಗೆ ಹಸ್ತಾಂತರವಾದ ನಂತರ ಲೈಸೆನ್ಸ್ ಅನ್ನು ನೀಡುತ್ತಾರೆ. ಆದರೆ ನಗರದ ಹೃದಯ ಭಾಗವಾಗಿರುವ ಜನನಿಬಿಡ ರಸ್ತೆಯಾದ


ಎಲ್ ಎಲ್ ಆರ್ ರಸ್ತೆಯಲ್ಲಿ ಪಾಲಕೆಯ 6 ಕೋಟಿಗಳ ಅನುದಾನದಿಂದ ನಿರ್ಮಿಸಲಾದ ಹೂವು ಹಣ್ಣು ಮಾರುಕಟ್ಟೆಯಲ್ಲಿ ಕಾನೂನು ಪ್ರಕಾರವಾದ ರಸ್ತೆಯ ಜಾಗವನ್ನು ಬಿಡದೆ ಅಕ್ರಮವಾಗಿ ಕಾಂಪೌಂಡನ್ನು ನಿರ್ಮಿಸಿರುತ್ತಾರೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಐಡಿಯಲ್ ಗೋಪಿ ಆರೋಪಿಸಿದ್ದಾರೆ.


ರಸ್ತೆಯ ಜಾಗದಲ್ಲಿ ನಿರ್ಮಿಸಿರುವ ಕಾಂಪೌಂಡನ್ನು ತೆರವುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಪಾಲಿಕೆ ವಿರುದ್ಧ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ.


ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುವ ಹಾಗೆ ಕಾನೂನು ಭಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿರುವುದು ಹಾಸ್ಯಸ್ಪದವಾಗಿದೆ
ಪಾಲಿಕೆಯಲ್ಲಿ ಹೇಳುವವರು ಇಲ್ಲ ಕೇಳುವವರು ಇಲ್ಲ ಎಂದಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!