ಭದ್ರಾವತಿ,ಜ.16:

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಗಮನಕ್ಕಾಗಿ ಇಡೀ ಭದ್ರಾವತಿ ಸಿಂಗಾರಗೊಂಡು ಹಬ್ಬದ ವಾತಾವರಣವನ್ನು ಮೂಡಿಸಿತ್ತು. ಇದು ಯಾರಗಾಗಿ. ಯಾಕಷ್ಟು ಸಡಗರ…? ಯಾರಿಗೂ ಗೊತ್ತಿಲ್ಲ. ಕಾಯುತ್ತಿದ್
ಅಮಿತ್ ಶಾ ಭದ್ರಾವತಿಗೆ ಸುಮಾರು 2 ಗಂಟೆಗೆ ಬರುವುದಾಗಿ ಮೊದಲು ನಿಗದಿಯಾಗಿತ್ತು. ಆದರೆ ಹಲವು ಕಾರಣಗಳಿಂದ ಅವರು ಬರುವುದು ತಡವಾದರೂ ಕೂಡ ಕಾರ್ಯಕರ್ತರು, ಭದ್ರಾವತಿಯ ಸಾರ್ವಜನಿಕರು ಸಹನೆಯಿಂದ ಕಾಯುತ್ತಿದ್ದರು. ಕಾರ್ಯಕರ್ತರಲ್ಲಿ ಈಗ ಬೆಂಗಳೂರಿಗೆ ಬಂದಿದ್ದಾರೆ, ಈ ಬೆಂಗಳೂರುಬಿಟ್ಟರು, ಸುಮಾರು 4.30 ಕ್ಕೆ ಭದ್ರಾವತಿಗೆ ಬರಬಹುದು. ಅವರ ಜೊತೆ ಮುಖ್ಯಮಂತ್ರಿ ಸೇರಿದಂತೆ ಬಿಜೆಪಿಯ ಮುಖಂಡರುಗಳು ಇದ್ದಾರೆ ಎಂಬ ಕ್ಷಣ ಕ್ಷಣದ ಮಾಹಿತಿಗಳ ಕುರಿತಂತೆ ಅಮಿತ್ ಶಾ ಆಗಮನಕ್ಕಾಗಿ ಕಾಯುತ್ತಿರುವ ಸಾರ್ವಜನಿಕರಲ್ಲಿ ಮಾತುಗಳು ಹೀಗೆ ಕೇಳಿಬರುತ್ತಿದ್ದವು.
ಕೇಂದ್ರ ಗೃಹ ಸಚಿವರ ಆಗಮನದ ಹಿಂದೆ ಬಹು ನಿರೀಕ್ಷೆಗಳು ಇದ್ದವು. ಕೈಗಾರಿಕಾ ನಗರದಲ್ಲಿ ಆರ್‌ಎಎಫ್ (ಕ್ಷಿಪ್ರ ಶಸಸ್ತ್ರ ರಕ್ಷಣಾ ಪಡೆ)ನ ೧೯ನೇ ಬೆಟಾಲಿಯನ್ ಘಟಕ ಸ್ಥಾಪನೆಗೆ ಎಲ್ಲ ಸಿದ್ದತೆಗಳು ಪೂರ್ಣಗೊಂಡಿವೆ. ಈಗಾಗಲೇ ಬಿಜೆಪಿ ಮುಖಂಡರುಗಳು, ಸಂಸದರು, ಆರ್‌ಎಎಫ್‌ನ ಸಂಪೂರ್ಣ ವಿವರಣೆಗಳನ್ನು ಪತ್ರಿಕಾಗೋಷ್ಠಿಗಳ ಮೂಲಕ ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಸರ್ಕಾರಿ ಕಾರ್ಯಕ್ರಮದ ಜೊತೆ ಜೊತೆಗೆ ಬಿಜೆಪಿ ಮುಖಂಡರು ಈ ಕಾರ್ಯಕ್ರಮವನ್ನು ಪಕ್ಷದ ಸಂಘಟನೆಗೂ ಬಳಸಿಕೊಳ್ಳುವ ಜಾಣ್ಮೆಯನ್ನು ತೋರಿದ್ದಾರೆ. ಅದರಲ್ಲೂ ಬಹುಮುಖ್ಯವಾಗಿ ಸಂಸದ ಬಿ.ವೈ.ರಾಘವೇಂದ್ರ ಅವರು, ವಿಶೇಷ ಆಸಕ್ತಿ ವಹಿಸಿದ್ದಾರೆ.ಆರ್‌ಎಎಫ್ ಜೊತೆಗೆ ಇಲ್ಲಿನ ಎರಡು ಕಾರ್ಖಾನೆಗಳ ಬಗ್ಗೆ ಅವರುಕೇಂದ್ರ ಗೃಹ ಸಚಿವರ ಜೊತೆ ಮಾತನಾಡಲಿದ್ದಾರೆ.
ಇಡೀ ಭದ್ರಾವತಿನಗರದಲ್ಲಿ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದುದು ಕಂಡುಬಂದಿತು. ನಗರದ ಎಲ್ಲ ವೃತ್ತಗಳಲ್ಲಿಯೂ, ಪ್ರಮುಖ ರಸ್ತೆಗಳಲ್ಲಿಯೂ ಬಿಜೆಪಿ ಬಾವುಟಗಳು ಹಾರಾಡುತ್ತಿದ್ದವು. ಅಷ್ಠೇ ಅಲ್ಲ ಶಿವಮೊಗ್ಗ ಸೇರಿದಂತೆ ವಿವಿಧ ಕಡೆಗಳಿಂದ ಬಸ್‌ಗಳಲ್ಲಿ ಕಾರ್ಯಕರ್ತರನ್ನು ಕರೆತರಲಾಗಿತ್ತು. ಭದ್ರಾವತಿ ಮತ್ತು ಶಿವಮೊಗ್ಗ ನಡುವಿನ ಹೆದ್ದಾರಿ ಕಾರ್ಯಕ್ರಮಕ್ಕೆ ಹೋಗುವವರ ವಾಹನಗಳಿಂದ ದಟ್ಟವಾಗಿತ್ತು. ರಸ್ತೆಯುದ್ದಕ್ಕೂರಾಷ್ಟ್ರ, ಹಾಗೂ ರಾಜ್ಯ ಬಿಜೆಪಿ ನಾಯಕರ ಫ್ಲೆಕ್ಸಿಗಳು ಎದ್ದು ಕಾಣುತ್ತಿದ್ದವು.
ಕಾರ್ಯಕ್ರಮ ನಡೆಯುವ ಸ್ಥಳವಾದ ಬುಳ್ಳಾಪುರದ ಡಿಎಆರ್ ಮೈದಾನ ಕಾರ್ಯಕರ್ತರಿಂದ, ಸಾರ್ವಜನಿಕರಿಂದ ತುಂಬಿ ಹೋಗಿತ್ತು. ಹರ್ಷೋದ್ಗಾರ, ಘೋಷಣೆಗಳು ಮುಗಿಲುಮುಟ್ಟಿದ್ದವು. ನಾಯಕನ ಆಗಮನಕ್ಕಾಗಿ ಕಾರ್ಯಕರ್ತರು ಅತ್ಯಂತ ಸಂಭ್ರಮದಿಂದ ಕಾಯುತ್ತಿದ್ದದು ಕಂಡುಬಂದಿತು.
ಎಂ.ಪಿಎಂ ಖಾಸಗೀಕರಣ ವಿರೋಧಿಸುತ್ತಿರುವ ಮತ್ತು ವಿಐಎಸ್‌ಎಲ್ ಕೂಡ ಖಾಸಗೀಕರಣದ ಆತಂಕದಲ್ಲಿರುವ ಭದ್ರಾವತಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶವೇ ಇವತ್ತಿನ ಕಾರ್ಯಕ್ರಮದ ಅಬ್ಬರವೆಂಬ ಮಾತುಗಳು ಭದ್ರಾವತಿ ಜನರಿಂದಲೇಕೇಳಿ ಬರುತ್ತಿತ್ತು.
ಸಂಗಮೇಶ್ ಅಸಮಾಧಾನ:
ಇಷ್ಟೊಂದು ಅದ್ಧೂರಿ ಕಾರ್ಯಕ್ರಮ ಬೇಕಿರಲಿಲ್ಲ. ಬಿಜೆಪಿ ಪ್ರಚಾರಕ್ಕಾಗಿ ಮಾಡುತ್ತಿದೆ ಎಂದ ಶಾಸಕ ಬಿ.ಕೆ ಸಂಗಮೇಶ್ ( ಕಾಂಗ್ರೆಸ್) ಅಸಮಾಧಾನ ವ್ಯಕ್ತಪಡಿಸಿದರು.ಆರ್‌ಎಎಫ್ ಘಟಕ ಸ್ಥಾಪನೆಗೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಮೀನು ಮಂಜೂರು ಮಾಡಿದ್ದರು. ಇದಕ್ಕಾಗಿ ನಾನೇ ಪ್ರಯತ್ನ ಮಾಡಿ ಮಂಜೂರು ಮಾಡಿಸಿದ್ದು. ಬಿಜೆಪಿ ಈಗ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಬಂಧನ:
ವಿಐಎಸ್ ಎಲ್ ಖಾಸಗೀಕರಣ ವಿರೋಧಿಸಿ ಹೇಳಿಕೆ ನೀಡಿದ ಕಾಂಗ್ರೇಸ್ ಮುಖಂಡರಾದ ಚಂದ್ರೇಗೌಡ.ಬಾಲು ಅವರು ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!