
ಶಿವಮೊಗ್ಗ, ಮೇ. 31:
ಹೊಸಮನೆಯಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಪಟ್ಟಂತೆ ನಮಗೆ ಈಗಾಗಲೇ ಸಾಕಷ್ಟು ಮಾಹಿತಿಗಳು ಲಭಿಸಿದ್ದು ಶಂಕಿತರನ್ನು ಗುರುತಿಸಲಾಗಿದೆ. ಅವರನ್ನು ಪತ್ತೆಹಚ್ಚಲು ಹಾಗೂ ಬಂಧಿಸಲು ಈಗಾಗಲೇ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ತಪ್ಪು ಮಾಡಿದ ಯಾರೇ ಆಗಲಿ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.


ಅವರಿಂದು ಬೆಳಗ್ಗೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಚುನಾವಣೆ ಕರ್ತವ್ಯ ನಡುವೆ ಇಂತಹ ಅಹಿತಕರ ಘಟನೆಯ ಬಗ್ಗೆ ಈಗಾಗಲೇ ಸಮಗ್ರ ಮಾಹಿತಿಯನ್ನು ಕೂಡಿಕರಿಸಲಾಗಿದೆ. ಈ ಘಟನೆಯನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ತಪ್ಪಿತಸ್ಥರು ಎಲ್ಲೇ ಅಡಗಿದ್ದರೂ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಮಿಕ್ಕ ಮಾಹಿತಿಯನ್ನು ನಂತರ ನೀಡುತ್ತೇವೆ ಎಂದರು.

ಗಾಂಜಾ ಪ್ರಕರಣ ಕುರಿತಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ಪ್ರಕರಣಗಳನ್ನು ಭೇದಿಸಿದೆ. ಗಾಂಜಾ ಸೇವನೆ ಮಾಡಿದ ಅನುಮಾನದ ಮೇಲೆ ಮೂರು ಸಾವಿರಕ್ಕೂ ಹೆಚ್ಚು ಜನರನ್ನು ಪರಿಶೀಲಿಸಿದ್ದು, 300ಕ್ಕೂ ಹೆಚ್ಚು ಜನರ ವಿರುದ್ಧ ದೂರು ದಾಖಲಾಗಿದೆ. ಗಾಂಜಾ ಪ್ರಕರಣವನ್ನು ಹತ್ತಿಕ್ಕಲು ಎಲ್ಲೆಡೆ ಪೊಲೀಸ್ ಇಲಾಖೆ ಎಚ್ಚರಾವಸ್ಥೆಯಿಂದ ಕರ್ತವ್ಯ ನಿರ್ವಹಿಸುತ್ತಿದೆ ಎಂದರು.

ಹೊಸಮನೆಯಲ್ಲಿನ ಕುಡಿತ ಹಾಗೂ ದಾಂದಲೆಯ ಸಮಗ್ರ ಮಾಹಿತಿಯನ್ನು ಸದ್ಯದಲ್ಲೆ ನೀಡುತ್ತೇವೆ ಎಂದರು.
