ಶಿವಮೊಗ್ಗ, ಮೇ.31:
ಶಿವಮೊಗ್ಗ ಪೊಲೀಸ್ ವ್ಯವಸ್ಥೆಗೆ ಇಂದು ಮದ್ಯಾಹ್ನ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಬರ್ಜರಿ ಟಾಂಗ್ ನೀಡಿದ್ದು ಎಲ್ರೂ ತಿಂತಾರೆ ತಿನ್ಲಿ, ಇಲ್ಲಿ ತಿನ್ನಬೇಕಾ? ಸಮಾಜ ಉಳಿಯುತ್ತಾ ಎಂದು ಜಾಡಿಸಿದರು.
ಈ ಕಚಡಾ ಹಣದಲ್ಲಿ ಹೆಂಡ್ತಿಗೆ ಸೀರೆ ಕೊಡಿಸಬೇಕಾ? ಮಕ್ಕಳಿಗೆ ಓದಿಸಬೇಕಾ? ಥೂ.. ಎಂದರು.
ಏನಾಗಿದೆ ಈ ಪೊಲೀಸು ವ್ಯವಸ್ಥೆಗೆ, ಎಲ್ಲೆಡೆ ಮಟ್ಕಾ ಗಾಂಜಾ ಹಾವಳಿ ಹೆಚ್ಚಾಗಿದೆ. ಶಿವಮೊಗ್ಗ ಎಸ್ ಪಿ ಈ ಬಗ್ಗೆ ಒಂದು ಮಾತು ಹೇಳಲಿ. ಪೊಲೀಸ್ ಇಲಾಖೆಯ ಯಾರೂ ಇದರಲ್ಲಿ ಶಾಮೀಲಾಗಿಲ್ಲ ಎನ್ನಲಿ ನೋಡೋಣ ಎಂದರು.
ಎಲ್ಲಿಯ ತನಕ ಪೋಲಿಸ್ ಇಲಾಖೆ ಗಾಂಜಾ ಮಟ್ಕಾ ಹಾವಳಿ ತಪ್ಪಿಸುವುದಿಲ್ಲವೋ ಅಲ್ಲಿಯತನಕ ಸಮಾಜ ಉದ್ದಾರ ಆಗೋಲ್ಲ ಎಂಬ ಸತ್ಯ ಅರ್ಥವಾಗುವುದಿಲ್ಲವೇ? ಈ ಭೂಮಿಯಲ್ಲಿ ಯಾರು ಸತ್ಯ ಹರಿಶ್ಚಂದ್ರರಲ್ಲ ತಿನ್ನುವ ಕಡೆ ತಿನ್ನಲಿ. ಗಾಂಜಾ ಮಟ್ಕಾ ಹೆಸರಲ್ಲಿ ಹೆಂಡ್ತಿಗೆ ಸೀರೆ ಕೊಡಿಸಬೇಕಾ? ಮಕ್ಕಳನ್ನು ಓದಿಸಬೇಕಾ? ಎಲ್ಲಿ ತಿನ್ನಬೇಕು ನೋಡ್ಕೊಂಡು ಕೆಲಸ ಮಾಡಲಿ. ಇಂತಹ ಮನೆಹಾಳ ಕೆಲಸದಲ್ಲಿ ಹಣ ತಿಂದರೆ ಉದ್ಧಾರಾಗುತ್ತಾರಾ? ಇದು ಒಳ್ಳೆಯದಲ್ಲ ಎಂದರು.
ನಾನು ಹಸು ಒಂದರ ವಿಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಠಾಣೆಯಲ್ಲಿ ಮಾಡಿದ ಅವಾಂತರವನ್ನು ಬಾಯಿ ಬಿಟ್ಟು ಎಸ್ಪಿಗೆ ಹೇಳಿದ ನಂತರ ಒಬ್ಬರನ್ನು ಸಸ್ಪೆಂಡ್ ಮಾಡಿದ್ದು, ಬಿಟ್ಟರೆ ಬೇರೇನು ಇಲ್ಲ ಸರ್ಕಾರ ಬದುಕಿದೆಯಾ? ಬದುಕಿರದ ಈ ಸರ್ಕಾರದಿಂದ ಹೇಗೆ ತಾನೇ ಪೊಲೀಸರನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.