ಶಿವಮೊಗ್ಗ: ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಬೇಧ-ಭಾವ ಇಲ್ಲದೇ ಎಲ್ಲ ಧರ್ಮದವರಿಗೂ ಸಮಾನ ನ್ಯಾಯ ಒದಗಿಸಲು ಪ್ರಮಾಣ ಕ ಪ್ರಯತ್ನ ನಡೆಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಅವರು ಶನಿವಾರ ಪೆಸಿಟ್ ಕಾಲೇಜ್ ಸಭಾಂಗಣದಲ್ಲಿ ಕ್ರೈಸ್ತ ಒಕ್ಕೂಟ ಏರ್ಪಡಿಸಿದ್ದ ಬೃಹತ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕಿಸಾನ್ ಸಮ್ಮಾನ್ ಯೋಜನೆಯಡಿ ಎಲ್ಲಾ ಧರ್ಮದ ರೈತರಿಗೂ ನೆರವು ನೀಡಿದ್ದೇನೆ ಎಂದ ಅವರು, ಸಮುದಾಯ ಭವನ ನಿರ್ಮಾಣಕ್ಕೆ ನೆರವು ನೀಡುವಂತೆ ಅಧ್ಯಕ್ಷ ಪಿ.ಡಿ. ಏಸುದಾಸ್ ಮಾಡಿದ ಮನವಿಗೆ ಸ್ಪಂದಿಸಿ ತಕ್ಷಣವೇ ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕ್ರೈಸ್ತ ಮುಖಂಡರು, ಯಡಿಯೂರಪ್ಪ ಸಿಎಂ ಆಗಿದ್ದಾಗ ಮೊದಲ ಬಾರಿಗೆ 2010ರಲ್ಲಿ ಕ್ರಿಶ್ಚಿಯನ್ ಅಭಿವೃದ್ಧಿ ಮಂಡಳಿ ರಚಿಸಿ 50 ಕೋಟಿ ಅನುದಾನ ನೀಡಿದರು. ನಂತರ ಅದನ್ನು 200 ಕೋಟಿಗೆ ಹೆಚ್ಚಿಸಿದ್ದರು. ಅಲ್ಲದೇ ಎಲ್ಲಾ ಉಪಪಂಗಡಗಳಿಗೆ 2000 ಕೋಟಿ ಹಣ ಬಳಸಿ ಚರ್ಚ್, ಕಾಂಪೌAಡ್ ನಿರ್ಮಾಣ ಮಾಡಿದ್ದರು.

ಮಾಚೇನಹಳ್ಳಿಯಲ್ಲಿರುವ ಬಿಷಪ್ ಹೌಸ್‌ಗೆ ರಸ್ತೆ ಸಂಪರ್ಕ ಸರಿ ಇರಲಿಲ್ಲ. ಸಂಸದ ಬಿ.ವೈ. ರಾಘವೇಂದ್ರ ಅವರು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 1 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಿ ಸಹಕಾರ ನೀಡಿದರು ಎಂದು ಸ್ಮರಿಸಿದರು. ಚರ್ಚ್ ಮೇಲೆ ದಾಳಿ ನಡೆದ ಸಂದರ್ಭದಲ್ಲಿ 2 ತಿಂಗಳ ಕಾಲ ರಾಜ್ಯದ ಎಲ್ಲಾ ಚರ್ಚ್ಗಳಿಗೆ ಪೊಲೀಸ್ ಭದ್ರತೆ ಒದಗಿಸಿದ್ದರು ಎಂದು ಶ್ಲಾಘಿಸಿದರು.

ಮುಖಂಡ ಇ.ಟಿ. ಬೆನ್ನಿ ಮಾತನಾಡಿ, 70 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ ಸಮುದಾಯಕ್ಕೆ ಯಾವುದೇ ನೆರವು ನೀಡಲಿಲ್ಲ. ಆದರೆ ಯಡಿಯೂರಪ್ಪ ಸಿಎಂ ಆಗಿದ್ದಾಗ, ಅನುದಾನ ನೀಡಿ ಸಹಕರಿಸಿದರು.

ಅಭಿವೃದ್ಧಿ ನಿಗಮ ಸ್ಥಾಪಿಸಲು ಯಡಿಯೂರಪ್ಪ ಕಾಲದಲ್ಲಿ ಪ್ರಯತ್ನ ಪ್ರಾರಂಭವಾಗಿತ್ತು. ಆದರೆ ಆರ್ಥಿಕ ಇಲಾಖೆಯಲ್ಲಿ ಕಡತ ಪೆಂಡಿAಗ್ ಆಗಿದ್ದು, ಸಿದ್ದರಾಮಯ್ಯ ಅವಧಿಯಲ್ಲಿ ಹಾಗೇ ಉಳಿದಿದೆ. ಯಡಿಯೂರಪ್ಪ, ವಿಜಯೇಂದ್ರ ಅವರಿಂದ ಮಾತ್ರ ಇದು ಸಾಧ್ಯ ಎಂದು ಹೇಳಿದರು.

ಸಭೆಯಲ್ಲಿ ಫಾಸ್ಟರ್‌ಗಳಾದ ಅಂತೋಣ ಪ್ರಕಾಶ್,ಸುರೇಶ್ ನಾಯ್??, ಸ್ಟಿ?ಫನ್, ನೇಮಿರಾಜ್, ಪಾಲರಾಜ್, ವಿನೋದ್, ರುದ್ರೆಶ್, ಜೇಸುದಾಸ್, ಮೋಸೆಸ್ ರೋಸಯ್ಯ, ಶಿವು, ಪ್ರಭಾಕರ್, ಕ್ರಿಶ್ಚಿಯನ್ ಅಭಿವೃದ್ಧಿ ಮಂಡಳಿ ಮಾಜಿ ಸದಸ್ಯ ವಿನ್ಸೆಂಟ್ ರೋಡ್ರಿಗ್ರಸ್ ಮತ್ತಿತರರು ಇದ್ದರು.

70 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ ಸಮುದಾಯಕ್ಕೆ ಯಾವುದೇ ನೆರವು ನೀಡಲಿಲ್ಲ. ಆದರೆ ಯಡಿಯೂರಪ್ಪ ಸಿಎಂ ಆಗಿದ್ದಾಗ, ಅನುದಾನ ನೀಡಿ ಸಹಕರಿಸಿದರು. 

– ಇ.ಟಿ. ಬೆನ್ನಿ, ಮುಖಂಡರು

By admin

ನಿಮ್ಮದೊಂದು ಉತ್ತರ

You missed

error: Content is protected !!