ಮೇ 07 ರಂದು ನಡೆಯುವ ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಮೇ 04 ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣಾ ಮತದಾನದ ಕುರಿತು ಜಿಲ್ಲೆಯಲ್ಲಿನ ಸಿದ್ದತೆ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.
ಮತಗಟ್ಟೆ ಹಾಗೂ ಮತದಾರರ ವಿವರ ; ಮತಗಟ್ಟೆಯೊಂದರಲ್ಲಿ ಸರಾಸರಿ ಗರಿಷ್ಟ 1500 ಮತದಾರರನ್ನು ಒಳಗೊಂಡಂತೆ ಮತಗಟ್ಟೆಗಳನ್ನು ಸ್ಥಾಪಿಸಲಾಗಿರುತ್ತದೆ. ಮಹಿಳಾ ಮತದಾರರನ್ನು ಮತಗಟ್ಟೆಗೆ ಸೆಳೆಯಲು 40 ‘ಸಖಿ’ ಮತದಾನ ಕೇಂದ್ರಗಳನ್ನು ಹಾಗೂ ಯುವ ಮತದಾರರಿಗಾಗಿ 8, ವಿಶೇಷಚೇತನ ಮತದಾರರಿಗೆ 8, ಮಾದರಿ ಮತಗಟ್ಟೆಗಳು 8, ಧ್ಯೇಯ ಆಧಾರಿತ 8 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
111-ಶಿವಮೊಗ್ಗ ಗ್ರಾಮಾಂತರದಲ್ಲಿ 249 ಮತಗಟ್ಟೆಗಳಿದ್ದು, ಪುರುಷ ಮತದಾರರ ಸಂಖ್ಯೆ 107936, ಮಹಿಳಾ ಮತದಾರರ ಸಂಖ್ಯೆ 110637, ತೃತೀಯ ಲಿಂಗಿ ಮತದಾರರ ಸಂಖ್ಯೆ 7 ಒಟ್ಟು ಮತದಾರರು 218580, 112-ಭದ್ರಾವತಿಯಲ್ಲಿ 253 ಮತಗಟ್ಟೆಗಳಿದ್ದು, ಪುರುಷ ಮತದಾರರ ಸಂಖ್ಯೆ 105001, ಮಹಿಳಾ ಮತದಾರರ ಸಂಖ್ಯೆ 111838, ತೃತೀಯ ಲಿಂಗಿ ಮತದಾರರ ಸಂಖ್ಯೆ 5 ಒಟ್ಟು ಮತದಾರರು 216844, 113-ಶಿವಮೊಗ್ಗದಲ್ಲಿ 288 ಮತಗಟ್ಟೆಗಳಿದ್ದು, ಪುರುಷ ಮತದಾರರ ಸಂಖ್ಯೆ 133303, ಮಹಿಳಾ ಮತದಾರರ ಸಂಖ್ಯೆ 140586, ತೃತೀಯ ಲಿಂಗಿ ಮತದಾರರ ಸಂಖ್ಯೆ 17 ಒಟ್ಟು ಮತದಾರರು
273906, 114-ತೀರ್ಥಹಳ್ಳಿಯಲ್ಲಿ 258 ಮತಗಟ್ಟೆಗಳಿದ್ದು, ಪುರುಷ ಮತದಾರರ ಸಂಖ್ಯೆ 94050, ಮಹಿಳಾ ಮತದಾರರ ಸಂಖ್ಯೆ 97174, ತೃತೀಯ ಲಿಂಗಿ ಮತದಾರರ ಸಂಖ್ಯೆ 0 ಒಟ್ಟು ಮತದಾರರು 191224, 115-ಶಿಕಾರಿಪುರದಲ್ಲಿ 235 ಮತಗಟ್ಟೆಗಳಿದ್ದು, ಪುರುಷ ಮತದಾರರ ಸಂಖ್ಯೆ 101990, ಮಹಿಳಾ ಮತದಾರರ ಸಂಖ್ಯೆ 102042, ತೃತೀಯ ಲಿಂಗಿ ಮತದಾರರ ಸಂಖ್ಯೆ 2 ಒಟ್ಟು ಮತದಾರರು 204034, 116ಸೊರಬದಲ್ಲಿ 239 ಮತಗಟ್ಟೆಗಳಿದ್ದು, ಪುರುಷ ಮತದಾರರ ಸಂಖ್ಯೆ 99153, ಮಹಿಳಾ ಮತದಾರರ ಸಂಖ್ಯೆ 98549, ತೃತೀಯ ಲಿಂಗಿ ಮತದಾರರ ಸಂಖ್ಯೆ 0 ಒಟ್ಟು ಮತದಾರರು 197702, 117-ಸಾಗರದಲ್ಲಿ 271 ಮತಗಟ್ಟೆಗಳಿದ್ದು, ಪುರುಷ ಮತದಾರರ ಸಂಖ್ಯೆ 103645, ಮಹಿಳಾ ಮತದಾರರ ಸಂಖ್ಯೆ 106449, ತೃತೀಯ ಲಿಂಗಿ ಮತದಾರರ ಸಂಖ್ಯೆ 1 ಒಟ್ಟು ಮತದಾರರು 210095. ಒಟ್ಟು 1793 ಮತಗಟ್ಟೆಗಳು, ಪುರುಷ ಮತದಾರರು 745078, ಮಹಿಳಾ ಮತದಾರರು 767275, ತೃತೀಯ ಲಿಂಗಿಯರು 32, ಒಟ್ಟು ಮತದಾರರ ಸಂಖ್ಯೆ 1512385,. 118 ಬೈಂದೂರು -246 ಮತಗಟ್ಟೆಗಳು, ಪುರುಷ ಮತದಾರರು 117711. ಮಹಿಳಾ ಮತದಾರರು -122786, ತೃತೀಯ ಲಿಂಗಿ ಮತದಾರರು-3, ಒಟ್ಟು ಮತದಾರರು 240500.
ಒಟ್ಟು 2039 ಮತಗಟ್ಟೆಗಳು, ಪುರುಷ ಮತದಾರರು-862789, ಮಹಿಳಾ ಮತದಾರರು -890061, ತೃತೀಯ ಲಿಂಗಿಯರು 35, ಒಟ್ಟು ಮತದಾರರ ಸಂಖ್ಯೆ – 1752885.
Published on Date 19-04-2024 | |||||
Gender Wise Count | |||||
Name & No of AC | Total PS | Male | Female | Third Gender | Total |
111-Shimoga Rural | 249 | 107936 | 110637 | 7 | 218580 |
112-Bhadravathi | 253 | 105001 | 111838 | 5 | 216844 |
113-Shimoga | 288 | 133303 | 140586 | 17 | 273906 |
114-Thirthahalli | 258 | 94050 | 97174 | 0 | 191224 |
115-Shikaripura | 235 | 101990 | 102042 | 2 | 204034 |
116-Soraba | 239 | 99153 | 98549 | 0 | 197702 |
117-Sagara | 271 | 103645 | 106449 | 1 | 210095 |
Total | 1793 | 745078 | 767275 | 32 | 1512385 |
118-Byndoor | 246 | 117711 | 122786 | 3 | 240500 |
Total | 2039 | 862789 | 890061 | 35 | 1752885 |
- Vulnerable & Critical Booths :
Name & No of AC | VulnerableBooths | Vulnerable Area | VulnerableVoters | PossibleIntimidators | Critical PS |
111-Shimoga Rural | 16 | 20 | 255 | 20 | 32 |
112-Bhadravathi | 18 | 22 | 515 | 25 | 68 |
113-Shimoga | 22 | 38 | 2838 | 30 | 65 |
114-Thirthahalli | 7 | 7 | 80 | 07 | 33 |
115-Shikaripura | 6 | 8 | 420 | 7 | 34 |
116-Soraba | 6 | 6 | 392 | 8 | 26 |
117-Sagara | 0 | 0 | 0 | 8 | 25 |
118-Baindur | 12 | 3 | 150 | 8 | 42 |
Total | 87 | 104 | 4650 | 113 | 325 |
ಹಿಂದಿನ ಚುನಾವಣೆಗಳ ಮಾಹಿತಿ ಆಧರಿಸಿ ಹಾಗೂ ಪ್ರಸ್ತುತ ಮೇಲೆ ಸುಲಭವಾಗಿ ಬೀರಬಹುದಾದ ಪ್ರಭಾವಗಳನ್ನು ಆಧರಿಸಿ ಸಮಾಜದ ದುರ್ಬಲ ವರ್ಗಗಳ ಜನವಸತಿ ಪ್ರದೇಶಗಳಲ್ಲಿ ಸೆಕ್ಟರ್ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಅಧಿಕಾರಿಗಳಿಂದ ನಿರಂತರ ಸರ್ವೇಕ್ಷಣೆಗೆ ಒಳಪಡಿಸಲಾಗಿದ್ದು, ಯಾವುದೇ ಅಕ್ರಮ ಚಟುವಟಿಗಳು ನಡೆಯದಂತೆ ನಿಗಾವಹಿಸಲಾಗಿರುತ್ತದೆ.
ನೇಮಕಮಾಡಲಾದ ಮತಗಟ್ಟೆ ಸಿಬ್ಬಂದಿಗಳ ವಿವರ:
ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅರೆಸರ್ಕಾರಿ ಮತ್ತು ಅನುದಾನಿತ ಇಲಾಖೆಗಳ ನೌಕರರನ್ನು ಮತಗಟ್ಟೆ ಕಾರ್ಯನಿರ್ವಹಣೆಗೆ ನಿಯೋಜಿಸಲಾಗುತ್ತಿದೆ. ಈ ಸಿಬ್ಬಂದಿಗಳಿಗೆ 2 ಹಂತಗಳಲ್ಲಿ ತರಬೇತಿಗಳನ್ನು ನೀಡಲಾಗಿರುತ್ತದೆ. ಸ್ವಂತ ಮತ್ತು ಕಾರ್ಯ ನಿರ್ವಹಿಸುತ್ತಿರುವ ಕ್ಷೇತ್ರಗಳನ್ನು ಹೊರತುಪಡಿಸಿ, ಅನ್ಯ ಕ್ಷೇತ್ರಗಳಿಗೆ ನಿಯೋಜಿಸಲಾಗಿರುತ್ತದೆ.
Name of AC | Number of PS | No.of PROs | No. of POs | Micro Observer |
111-Shimoga Rural | 249 | 299 | 934 | 4 |
112-Bhadravathi | 253 | 304 | 953 | 5 |
113-Shimoga | 288 | 346 | 1101 | 3 |
114-Thirthahalli | 258 | 310 | 947 | 35 |
115-Shikaripura | 235 | 283 | 874 | 8 |
116-Soraba | 239 | 287 | 888 | 10 |
117-Sagara | 271 | 325 | 1009 | 59 |
118-Baindur | 246 | 246 | 738 | 81 |
Total | 2039 | 2400 | 7444 | 205 |
- ಮತದಾನ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳ ವ್ಯವಸ್ಥೆ (AMF):
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲಾ 2039 ಮತದಾನ ಕೇಂದ್ರಗಳಲ್ಲಿ ಕನಿಷ್ಟ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರ್ಯಾಂಪ್, ಶೌಚಾಲಯ, ವಿದ್ಯುಚ್ಛಕ್ತಿ ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರಸ್ತುತ ಅತೀ ಹೆಚ್ಚು ಬಿಸಿಲು ಇರುವುದರಿಂದ ಸಂಭವನೀಯ Sun Stroke ನಿಂದ ತಪ್ಪಿಸಲು ಮತದಾರರಿಗೆ ನೆರಳಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಓಆರ್ ಎಸ್ ಸೇರಿದಂತೆ ಅಗತ್ಯ ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗೆ ಬರುವ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ Wheel Chair ವ್ಯವಸ್ಥೆ ಕಲ್ಪಿಸಲಾಗಿದೆ.
- ಮತದಾರರ ಮಾಹಿತಿ ಚೀಟಿ (Voters Information Slips):
ಕ್ಷೇತ್ರ ವ್ಯಾಪ್ತಿಯಲ್ಲಿ ಮತಗಟ್ಟೆ ಅಧಿಕಾರಿಗಳ ಮೂಲಕ ಈ ವರೆಗೆ 17,25,883 ಮತದಾರರ ಮಾಹಿತಿ ಚೀಟಿ (Voters Information Slips)ಗಳನ್ನು ಮನೆಮನೆಗೆ ವಿತರಿಸಿ, ಸಹಿ ಪಡೆಯಲಾಗಿದ್ದು, ಗೈರು, ಮೃತ ಮತ್ತು ಸ್ಥಳಾಂತರಗೊಂಡಿರುವ 27,002 ಮತದಾರರನ್ನು ಗುರುತಿಸಲಾಗಿರುತ್ತದೆ. ಮತದಾರರಿಗೆ ಮತದಾನದ ಮಾರ್ಗದರ್ಶನ ಗೈಡ್ ಗಳನ್ನು ಹಾಗೂ ಯುವ ಮತದಾರರಿಗೆ ಪ್ರತ್ಯೇಕ ಗ್ರೀಟಿಂಗ್ ಪತ್ರಗಳನ್ನು ವಿತರಿಸಲಾಗಿರುತ್ತದೆ.
- ಅಗತ್ಯ ಸೇವೆಗಳ ಇಲಾಖೆಗಳ ಸಿಬ್ಬಂದಿಗಳಿಗೆ ಮತದಾನದ ವ್ಯವಸ್ಥೆ (AVES):
3ನೇ ಹಂತದ ಲೋಕಸಭಾ ಕ್ಷೇತ್ರಗಳಿಗೆ ದಿನಾಂಕ 07.05.2024 ರಂದು ನಡೆಯುವ ಮತದಾನದ ಸಮಯದಲ್ಲಿ ಭಾರತ ಚುನಾವಣಾ ಆಯೋಗವು ಸೂಚಿಸಲಾದ ಅಗತ್ಯ ಸೇವೆಗಳ ಇಲಾಖೆಗಳಿಗೆ ಸಂಬಂಧಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಗತ್ಯ ಸೇವೆಗಳ (AVES) ಇಲಾಖೆಗಳಲ್ಲಿ ಉದ್ಯೋಗದಲ್ಲಿರುವ ಸಿಬ್ಬಂದಿಗಾಗಿ ಅಂಚೆ ಮತದಾನ ಕೇಂದ್ರಗಳಲ್ಲಿ (PVC) ಮತದಾನಕ್ಕಾಗಿ