ಹೊಸನಗರ: ತಾಲೂಕಿನ ನಗರ ಹೋಬಳಿ ಕುಂಭತ್ತಿ ಗ್ರಾಮದ ಸ.ನಂ.5ರಲ್ಲಿ ಶ್ರೀಷಾ ಉಡುಪ ಬಿನ್ ಶ್ರೀನಿವಾಸ ಉಡುಪ, ಎಸ್.ಜಿ.ನಾರಾಯಣ ರಾವ್ ಎಂಬುವವರು ಜಂಟಿಯಾಗಿ ನಡೆಸುತ್ತಿರುವ ಕಲ್ಲು ಗಣಿಗಾರಿಕೆಯಿಂದ ಗ್ರಾಮಸ್ಥರಿಗೆ ದಿನವು ಹಲವಾರು ಅನಾಹುತ ನಡೆಯುತ್ತಿದ್ದು ಈ ಕುರಿತು ಅನೇಕ ಬಾರಿ ಸಂಭಂದಪಟ್ಟವರಿಗೆ ದೂರು ನೀಡಿದರೂ ಸೂಕ್ತ ಕ್ರಮಕೈಗೊಳ್ಳದ
ಹಿನ್ನಲೆಯಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತದಾನದಿಂದ ದೂರವೇ ಉಳಿದು ಚುನಾವಣೆ ಬಹಿಷ್ಕಾರಿಸುವುದಾಗಿ ಕುಂಭತ್ತಿ ಗ್ರಾಮಸ್ಥರು ತಹಶಿಲ್ದಾರ್ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕಾರಣಗಿರಿಯ ಬಸ್ ನಿಲ್ದಾಣದಲ್ಲಿ ಶುಕ್ರವಾರ ಸಾಮೂಹಿಕ ಪ್ರತಿಭಟನೆಗೆ ಮುಂದಾದ ಗ್ರಾಮಸ್ಥರು ಗಣಿಗಾರಿಕೆಯ ಎಲ್ಲಾ ನಿಬಂಧನೆಗಳನ್ನು ಗಾಳಿಗೆ ತೂರಿ ಮಟ ಮಟ ಮಧ್ಯಾಹ್ನವೇ ಭಾರೀ ಬ್ಲಾಷ್ಟಿಂಗ್ ಮಾಡುತ್ತಿದ್ದು,
ಇದರಿಂದ ಗ್ರಾಮಸ್ಥರ ಬೆಳೆ ಹಾನಿ, ಕಾಡು ಪ್ರಾಣಿಗಳ ಹಾವಳಿ, ಶಬ್ದ ಮಾಲಿನ್ಯ ಹೆಚ್ಚಾಗಿದೆ. ಗ್ರಾಮಸ್ಥರಿಗೆ ಸೂಕ್ತ ಪರಿಹಾರ- ರಕ್ಷಣೆ ಇಲ್ಲವಾಗಿದೆ. ಈ ಹಿನ್ನಲೆಯಲ್ಲಿ 2024ರ ಲೋಕಸಭಾ ಚುನಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕಾರಿಸಲು
ಒಮ್ಮತದ ಅಭಿಪ್ರಾಯಕ್ಕೆ ಗ್ರಾಮಸ್ಥರು ಬಂದಿದ್ದಾರೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕುಂಭತ್ತಿ ಕೃಷ್ಣಮೂರ್ತಿ ಬಿನ್ ಢಂಗನಾಯ್ಕ ತಿಳಿಸಿದ್ದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಅನುಪಮ, ಶಶಾಂಕ್, ಸತ್ಯ ನಾರಾಯಣ, ಆನಂದ, ಲತಾ, ಮಂಜಪ್ಪ, ಸಂಜೀವ, ಆಟೋ ರಾಘು, ಗಿರಿಯಪೂಜಾರಿ, ಸುಮತಿ, ಮಹೇಶ, ಶಾಂತ, ಯಶೋಧ, ಪದ್ಮಾವತಿ ಸೇರಿದಂತೆ ಅನೇಕರು ಇದ್ದರು.