ಶಿವಮೊಗ್ಗ, ಏ.19:
ಮೂರುವರೆ ಮುಖ್ಯಮಂತ್ರಿಗಳು ಸೇರಿಕೊಂಡು ನಿನ್ನೆ ಬಿಜೆಪಿಯ ರಾಘವೇಂದ್ರ ಅವರ ನಾಮಪತ್ರ ಸಲ್ಲಿಸಿದ್ದನ್ನು ನೋಡಿದರೆ ನಗು ಬರುತ್ತದೆ. ನಾನು ಪಕ್ಷೇತರನಾಗಿ ಸ್ಪರ್ಧಿಸಿ ನಾಮಪತ್ರ ಸಲ್ಲಿಸುವಾಗ 30,000ಕ್ಕೂ ಹೆಚ್ಚು ಜನ ಸ್ವಯಂಪ್ರೇರಿತರಾಗಿ ಬಂದಿದ್ದರು.ಆ ಜನರೇ ಈ ಯಡಿಯೂರಪ್ಪನ ಕುಟುಂಬದ ವಿರುದ್ಧ ಸಿಡಿದಿದ್ದಾರೆ. ಅದಕ್ಕೆ ನೆನ್ನೆ ನಡೆದ ಮೂರುವರೆ ಮುಖ್ಯಮಂತ್ರಿಗಳ ಜನರಿಲ್ಲದ ಮೆರವಣಿಗೆಯೇ ಸಾಕ್ಷಿ ಎಂದು ರಾಷ್ಟ್ರಭಕ್ತರ ಬಳಗದ ಚುನಾವಣಾ ಅಭ್ಯರ್ಥಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ತಿಳಿಸಿದರು.
ಅವರಿಂದು ಬೆಳಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, ರಾಷ್ಟ್ರಭಕ್ತರ ಬಳಗಕ್ಕೆ ಬರುವವರನ್ನು ಭೇಟಿ ಮಾಡಿ ಅವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದೀರಿ. ಅದು ನಿಮ್ಮ ಕೈಲಿ ಸಾಧ್ಯವೇ ಇಲ್ಲ. ನಿಮ್ಮನ್ನು ಯಾರೂ ನಂಬುವುದಿಲ್ಲ ಎಂದು ಯಡಿಯೂರಪ್ಪ ಹಾಗೂ ಮಾಜಿ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆರಗ ಜ್ಞಾನೇಂದ್ರ ಕೋಪ ಮಂಡೂಕ ತರ ಮಾತಾಡುತ್ತಿದ್ದಾರೆ. ಯಡಿಯೂರಪ್ಪ ದ್ರೋಹಿ.ಯಡಿಯೂರಪ್ಪ ಅವರಿಗೆ ಅ ಇಬ್ಬರು ಹೆಣ್ಣು ಮಕ್ಕಳ ಬಗ್ಗೆ ಅಷ್ಟೊಂದು ಪ್ರೀತಿ ಯಾಕೆ? ಭಾರತೀಯ ಜನತಾ ಪಕ್ಷವನ್ನು ತನ್ನ ಕುಟುಂಬದ ಹಿಡಿತದಲ್ಲಿ ಇಟ್ಟುಕೊಂಡಿರುವ ಯಡಿಯೂರಪ್ಪ ನಂಬಿಕೆ ದ್ರೋಹ ಮಾಡಿದ್ದಾರೆ. ತನಗೆ ಬೇಕಿದ್ದವರನ್ನು ಮಾತ್ರ ಬೆಳೆಸಿಕೊಂಡು ಉಳಿದವರನ್ನು ಹಿಂದೂ ಸಂಸ್ಕೃತಿಯನ್ನು ಕಾಯುವವರನ್ನು ತುಳಿಯುವ ಹಂತವನ್ನು ತಪ್ಪಿಸಲು ಬಿಜೆಪಿಯನ್ನು ಶುದ್ಧೀಕರಿಸಲು ಚುನಾವಣೆಗೆ ನಿಂತಿದ್ದೇನೆ ನನ್ನ ಗೆಲುವು ಖಚಿತ ಎಂದು ರಾಷ್ಟ್ರಭಕ್ತಿ ಬಳಗದ ಕೆಎಸ್ ಈಶ್ವರಪ್ಪ ತಿಳಿಸಿದರು.
ಇಲ್ಲಿಯವರೆಗೆ ಯಡಿಯೂರಪ್ಪ ಅವರ ವಿರುದ್ಧ ಎಲ್ಲಾ ಹಿರಿಯರಿಗೂ ನಾನೂ ಸೇರಿದಂತೆ ಹಲವರು ದೂರು ನೀಡಿದ್ದೇವೆ. ಅವರು ಬುದ್ಧಿ ಹೇಳಿದ್ದಾರೆ. ದಾರಿ ತಪ್ಪಬೇಡ ಎಂದೂ ಹೇಳಿದ್ದಾರೆ ಆದರೂ ಶೋಭಾ ಕರಂದ್ಲಾಜೆ ಭಾರತೀ ಶೆಟ್ಟಿ ಬಿಟ್ಟರೆ ಯಡಿಯೂರಪ್ಪರಿಗೆ ಬೇರೆ ಹೆಣ್ಣು ಮಕ್ಕಳು ಕಾಣುವುದಿಲ್ಲವೇ ಎಂದು ಪ್ರಶ್ನಿಸಿದರು.
ಹಿಂದೆ ಇದೇ ಆರಗ ಜ್ಞಾನೇಂದ್ರ ನಮ್ಮ ಮನೆಗೆ ಬಂದು ನನ್ನ ಸೈದ್ಧಾಂದಿಕ ಹಾಗು ವೈಚಾರಿಕ ಹೋರಾಟವನ್ನು ಒಪ್ಪಿಕೊಂಡು, ಆದರೂ ಚುನಾವಣೆಗೆ ನಿಲ್ಲಬೇಡಿ ಎಂದು ಗೋಗರೆದದ್ದನ್ನು ಮರೆತು ಈಗ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನವೊಲಿಸಲು ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು. ತೀರ್ಥಹಳ್ಳಿಯಲ್ಲಿ ನಡೆಯುವ ಪ್ರಸಕ್ತ ಚುನಾವಣೆಯಲ್ಲಿ ನನಗೆ ವ್ಯಕ್ತವಾಗಿರುವ ಪರಿವಾರದ ಅತಿ ಹೆಚ್ಚು ಬೆಂಬಲವನ್ನು ಕಂಡು ಹೀಗೆ ಮಾತನಾಡುತ್ತಿದ್ದೀರಿ. ನಾನು ಮತ್ತೆ ಬಿಜೆಪಿಗೆ ಬರುತ್ತೇನೆ ನಾನೇನು ಬಿಜೆಪಿ ಬಿಟ್ಟು ಹೋಗುವುದಿಲ್ಲ. ನಾನು ಸೇರಿದಂತೆ ಆ ಪರಿವಾರದ ಜನ ಸೇರಿಕೊಂಡು ನಿನ್ನನ್ನು ಮತ್ತೆ ಗೆಲ್ಲಿಸುತ್ತೇವೆ ಎಂದರು.
ವೈಚಾರಿಕ ಹಾಗೂ ಸೈದಾಂತಿಕ ಸಂಘರ್ಷ ಈ ನಮ್ಮ ಚುನಾವಣೆಯ ಉದ್ದೇಶ. ನಾನು 40 ವರ್ಷ ತಪಸ್ಸು ಮಾಡಿ ಈ ಪಕ್ಷವನ್ನು ಕಟ್ಟುವಲ್ಲಿ ಕೈಜೋಡಿಸಿದ್ದೇನೆ. ಈಗ ಈ ಪಕ್ಷ ಕುಟುಂಬ ರಾಜಕಾರಣಕ್ಕೆ ಬಲಿಯಾಗಿ ಹಿಂದುತ್ವವನ್ನು ಮರೆಮಾಚುತ್ತಿದೆ. ದಾರಿ ತಪ್ಪುತ್ತಿದೆ ಅನ್ನುವ ಕಾರಣಕ್ಕೆ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಲ್ಲೆಡೆ ಸಾಕಷ್ಟು ಬಹುಮತ ವ್ಯಕ್ತವಾಗಿದೆ ಗೆದ್ದೇ ಗೆಲ್ಲುತ್ತೇನೆ ಎಂದರು.
ಮೋದಿ ಅವರ ನಿಲುವಿನಂತೆ ಹಾಗೂ ಭಾರತೀಯ ಜನತಾ ಪಕ್ಷದ ನಿಯಮದನುಸಾರ ಒಂದು ಮನೆಗೆ ಒಂದು ಟಿಕೆಟ್ ಕೇಳಿದ್ದು ಸರಿಯಷ್ಟೇ, ಇವರ ಮನೆಯಲ್ಲಿ ಎಷ್ಟು ಟಿಕೆಟ್ ಗಳಿವೆ. ಈ ವಿಷಯವನ್ನು ಹೈಕಮಾಂಡ್ ಗಮನಕ್ಕೆ ತರಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಅವರಿಗೆ ನಾನು ಈ ವಿಷಯವನ್ನು ಮನದಟ್ಟು ಮಾಡಿಕೊಡಲು ಬಿಜೆಪಿಯನ್ನು ಕುಟುಂಬ ರಾಜಕಾರಣದಿಂದ ಹೊರಗಿಡಲು ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದರು.
ಶಿವಮೊಗ್ಗ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಈಗಾಗಲೇ ಎಲ್ಲ ಬಗೆಯ ಸಿದ್ಧತೆಗಳು ನಡೆದಿದೆ. ಅಖಾಡ ರೆಡಿಯಾಗಿದೆ. ಚುನಾವಣಾ ಚಿನ್ಹೆ ಹೊರಬಂದ ಮೇಲೆಚಿನ್ಹೆಗಳು ಶೆಡ್ಡು ಹೊಡೆಯಲು ಸಿದ್ಧ . ನನಗೆ ಸಿಕ್ಕಿರುವ ಬೆಂಬಲ ಹಿಂದೆ ಯಾರಿಗೂ ಸಿಕ್ಕಿರಲಿಲ್ಲ ಎಂದರು.
ಕಾಲೇಜು ವಿದ್ಯಾರ್ಥಿನಿ ಹತ್ಯೆ ಶಿಸ್ತು ಕ್ರಮಕ್ಕೆ ಸಿಎಂ ಗೆ ಆಗ್ರಹ
ಪ್ರೀತಿ ನಿರಾಕರಿಸಿದರು ಎಂಬ ಕಾರಣ ನೀಡಿ ಕಾಲೇಜು ವಿದ್ಯಾರ್ಥಿನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಮುಸಲ್ಮಾನ್ ಗೂಂಡಾನ ವಿರುದ್ಧ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು. ತಮಾಷೆ ಮಾಡಬೇಡಿ ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ. ಹಿಂದುಗಳ ಮಾನಸಿಕ ಸ್ಥಿಮಿತತೆಯನ್ನು ಕೆಣಕಬೇಡಿ ಎಂದು ಈಶ್ವರಪ್ಪ ಹೇಳಿದರು ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸುವರ್ಣ ಶಂಕರ್, ಕಾಚಿನ ಕಟ್ಟೆ ಸತ್ಯನಾರಾಯಣ, ಶಿವಾಜಿ ರಾವ್, ವಿಶ್ವಾಸ್, ಬಾಲು, ದೇವರಾಜ್, ಮಹೇಶ್, ಹೇಮಾ, ಆನಂದ್ ಹಾಗು ಇತರರಿದ್ದರು.