ಶಿವಮೊಗ್ಗ.ಏ.೧೮: ಕಾಂಗ್ರೆಸ್ ಸರ್ಕಾರ ಬಡವರಿಗೆ ಭಾಗ್ಯಗಳನ್ನು ನೀಡಿ ಇನ್ನೊಂದು ಜೇಬಿನಿಂದ ಕಿತ್ತುಕೊಳ್ಳುವ ಪಿಕ್‌ಪಾಕೇಟ್ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಅವರು ಇಂದು ನಗರದ ಗೋಪಿವೃತ್ತದಲ್ಲಿ ಸಂಸದ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಭಾಗವಹಿಸಿ ಬಳಿಕ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮೂರು ಬಾರಿ ಸಂಸದರಾಗಿ ರಾಘವೇಂದ್ರ ಅವರಿಗೆ ಆಶೀರ್ವಾದ ಮಾಡಿದ್ದೀರಿ

. ಇವತ್ತಿನ ಐತಿಹಾಸಿಕ ಮೆರವಣಿಗೆಯನ್ನು ನೋಡಿದ ಬಳಿಕ ಇನ್ನೂ ಹೆಚ್ಚಿನ ಅಂತರದಿಂದ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ದೇಶದ ಭದ್ರತೆಗಾಗಿ ಮತ್ತು ಅಭಿವೃದ್ಧಿಗಾಗಿ ಮೋದಿ ಸರ್ಕಾರ ಅನಿವಾರ್ಯ ಎಂದು ಜನರ ಭಾವನೆ ಇದೆ. ಕಾಂಗ್ರೆಸ್‌ನ ಸುಳ್ಳು ಪ್ರಣಾಳಿಕೆಯಂತೆ ಮಹಿಳೆಯರಿಗೆ ಒಂದು ಲಕ್ಷ ರೂ. ನೀಡಲು ೭೫ ಲಕ್ಷ ಕೋಟಿ ಹಣ ಬೇಕು. ದೇಶದ ಬಜೆಟ್ ೪೫ ಲಕ್ಷ ಕೋಟಿ ಇದೆ. ಅದು ಯಾವ ರೀತಿ ಸುಳ್ಳು ಹೇಳುತ್ತಾರೆ ಎಂಬುವುದನ್ನು ಜನ ಅರಿತುಕೊಳ್ಳಬೇಕು. ತಾವು ಅಧಿಕಾರಕ್ಕೆ ಬರುವುದಿಲ್ಲ ಎಂಬ ಖಾತರಿ ಅವರಿಗೆ ಇದೆ. ಈಗಾಗಲೇ ಗೃಹಲಕ್ಷ್ಮೀ ೨೦೦೦ ನೀಡಿ ಮದ್ಯದಂಗಡಿಗೆ ೨೫ ರೂ.ಗಳಿಗೆ ದೊರೆಯುವ ಮದ್ಯಕ್ಕೆ ೨೫೦ ರೂ. ಮಾಡಿದ್ದಾರೆ. ಒಂದು ಕಡೆ ನೀಡಿ ಇನ್ನೊಂದು ಕಡೆ ಕಿತ್ತುಕೊಳ್ಳುತ್ತಿದ್ದಾರೆ. ರೈತರಿಗೆ ಬರಗಾಲಕ್ಕೆ ಯಾವುದೇ ಸಹಕಾರ ನೀಡಿಲ್ಲ. ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರದಿಂದ

ಬಿ.ಎಸ್.ವೈ. ನೀಡಿದ ೪ ಸಾವಿರ ರೂ.ಗಳನ್ನು ಕೂಡ ನಿಲ್ಲಿಸಿದ್ದಾರೆ. ಬಿಕ್ಷೆ ನೀಡುವ ಹಾಗೆ ೨೦೦೦ ರೂ. ರೈತರಿಗೆ ಪರಿಹಾರ ವಿತರಿಸಿದ್ದಾರೆ. ೫ ಸಾವಿರ ರೂ.ಗಳಿಗೆ ನಾವು ಸಮ್ಮಿಶ್ರ ಸರ್ಕಾರದಲ್ಲಿ ರೈತರಿಗೆ ಟ್ರಾನ್ಸ್‌ಫಾರ್ಮರ್ ಹಾಕಿ ವಿದ್ಯುತ್ ನೀಡುತ್ತಿದ್ದೇವು. ಈಗ ೨.೫ ಲಕ್ಷ ಕಿತ್ತುಕೊಳ್ಳುತ್ತಿದ್ದಾರೆ. ಸಬ್ ರಿಜಿಸ್ಟರ್ ಸ್ಟಾಂಪ್ ಡ್ಯೂಟಿ ಏರಿಕೆ ಮಾಡಿದ್ದಾರೆ. ೩೧ ಲಕ್ಷ ಕೇಂದ್ರ ಸರ್ಕಾರದ ಹುದ್ದೆಗಳನ್ನು ತುಂಬಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ಅವರದೇ ಸರ್ಕಾರ ರಾಜ್ಯದಲ್ಲಿದೆ. ಖಾಲಿ ಇರುವ ೨.೭೫ ಲಕ್ಷ ಹುದ್ದೆಯನ್ನು ಮೊದಲು ಭರ್ತಿ ಮಾಡಲಿ. ಕೇಂದ್ರದಲ್ಲಿ ಮೋದಿ ಸರ್ಕಾರ ಖಚಿತ. ಜನ ಅಭಿವೃದ್ಧಿ ಇಲ್ಲದೇ ಬೇಸತ್ತಿದ್ದು, ಚುನಾವಣೆಯ ನಂತರ ರಾಜ್ಯದಲ್ಲೂ ಕೂಡ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ಬರಬಹುದು. ಬಿ.ಎಸ್.ವೈ., ಬೊಮ್ಮಾಯಿ ಮತ್ತು ನಾನು ಮುಖ್ಯಮಂತ್ರಿ ಇದ್ದಾಗ ಯಾವತ್ತು ಬರಗಾಲ ಬಂದಿರಲಿಲ್ಲ, ಕಾಂಗ್ರೆಸ್ ಪಕ್ಷ ಬಂದಾಗ ಬರಗಾಲ ಬರುತ್ತದೆ ಎಂದರು.


ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಇವತ್ತಿನ ಮೆರವಣಿಗೆ ನೋಡಿದಾಗ, ೩ ಲಕ್ಷಕ್ಕಿಂತ ಅಧಿಕ ಮತಗಳಿಂದ ರಾಘವೇಂದ್ರ ಗೆಲ್ಲುವುದು ಖಚಿತವಾಗಿದೆ. ಕಾಂಗ್ರೆಸ್ ಮುಳುಗುವ ಹಡಗು ಎಂಬುವುದು ಎಲ್ಲರಿಗೂ ಗೊತ್ತಾಗಿದೆ. ಮುಂದಿನ ಪ್ರಧಾನಿ ಮೋದಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೂಡ ಮೋದಿ ಜೊತೆಗೆ ಕೈಜೋಡಿಸಿದ್ದಾರೆ. ಇಬ್ಬರ ಹೊಂದಾಣಿಕೆಯಲ್ಲಿ ಬಹಳ ಶಕ್ತಿಯಿದೆ. ಒಟ್ಟಾಗಿ ಓಡಾಡಿ ರಾಜ್ಯದ ೨೮ ಕ್ಷೇತ್ರವನ್ನು ಗೆಲ್ಲಿಸುತ್ತೇವೆ. ಆದರೂ ಕೂಡ ನಮ್ಮ ಕಾರ್ಯಕರ್ತರು ಮೈಮರೆಯದೆ ಕೆಲಸ ಮಾಡಬೇಕು. ಇನ್ನೂ ಮುಂದೆ ಬೇರೆ ಪಕ್ಷದವರು ಯಾರು ಕೂಡ ನಮ್ಮ ಎದುರಿಗೆ ನಿಲ್ಲುಸ ಧೈರ್ಯ ಮಾಡಬಾರದು ಎಂದರು.
ಸಿ.ಟಿ.ರವಿ ಮಾತನಾಡಿ, ಆರ್.ಎಸ್.ಎಸ್. ಮತ್ತು ಬಿಜೆಪಿ ಪ್ರಾರಂಭವಾಗಿದ್ದೇ ರಾಷ್ಟ್ರೀಯ ಹಿತ ಕಾಪಾಡಲು ನಾವು ಸದಾಕಾಲ ಹಿಂದುತ್ವಕ್ಕೆ ಬದ್ಧವಾಗಿ ರಾಜಕಾರಣ ಮಾಡುತ್ತೇವೆ. ಕಾಂಗ್ರೆಸ್ ಬಂದ ಮೇಲೆ ಬಿಲದಲ್ಲಿ ಅಡಗಿಕುಳಿತುಕೊಂಡು ಹಾವು ಚೇಳುಗಳು ತಲೆಯೆತ್ತಿ ಹೊರಗೆ ಬಂದಿವೆ. ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ. ರಾಮನವಮಿ ದಿನ ಜೈಶ್ರೀರಾಮ್ ಎಂದವರಿಗೆ ಹಲ್ಲೆ ಮಾಡುತ್ತಾರೆ. ಪಿತ್ತ ನೆತ್ತಿಗೇರಿದ ಪುಂಡರಿಗೆ ತಕ್ಕ ಪಾಠ ಕಲಿಸಬೇಕು. ಕಾಂಗ್ರೆಸ್ ದಲಿತ ವಿರೋಧಿ ಸರ್ಕಾರವಾಗಿದ್ದು, ದಲಿತರ ೧೪ ಸಾವಿರ ಕೋಟಿ. ರೂ.ಗಳನ್ನು

ಗ್ಯಾರಂಟಿಗೆ ಬಳಸಿದ್ದಾರೆ. ಅವರ ಓಟು ಕೇಳುವ ನೈತಿಕತೆ ಇಲ್ಲ. ರೈತರ ಕಷ್ಟಕ್ಕೆ ಸ್ಪಂದಿಸದ ಸರ್ಕಾರ ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾರೆ. ರಾಜ್ಯಕ್ಕೆ ೧೦ ತಿಂಗಳಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ. ಬಿಜೆಪಿಯ ಅಭಿವೃದ್ಧಿಗಳನ್ನು ಉದ್ಘಾಟನೆ ಮಾಡಿದ್ದೇ ಅವರ ಸಾಧನೆ ಎಂದರು.
ಹಿಂದೂ ನಾಯಕ ಅರುಣ್ ಪುತ್ತಿಲ್ಲ ಮಾತನಾಡಿ, ದೇಶದ ಭವಿಷ್ಯ ನಿರ್ಮಾಣ ಮಾಡುವ ಚುನಾವಣೆ ಇದಾಗಿದೆ. ಸಿ.ಎ.ಎ. ಜಾರಿಗೆ ತಂದಿದ್ದಾರೆ. ೩೭೦ ಅರ್ಟಿಕಲ್ ರದ್ದುಮಾಡಿದ್ದಾರೆ. ರಾಮಮಂದಿರ ನಿರ್ಮಾಣ ಮಾಡಿದ್ದಾರೆ. ಹಿಂದೂ ರಾಷ್ಟ್ರದ ಪರಿಕಲ್ಪನೆಯ ಸರ್ಕಾರ ನಿರ್ಮಾಣ ಮಾಡಲು ಹೊರಟಿರುವ ಬಿಜೆಪಿಗೆ ಬೆಂಬಲ ನೀಡಿ ಎಂದರು.
ಮಾಜಿ ಸಿ.ಎಂ. ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್ ಸ್ಪರ್ಧಿಸಿದ್ದು ಕೇವಲ ೨೩೫ ಸ್ಥಾನಗಳಲ್ಲಿ ದೇಶ ಆಳಲು ೨೭೨ ಸ್ಥಾನ ಬೇಕು. ಕನಿಷ್ಟ ಸ್ಪರ್ಧೆಯನ್ನು ಮಾಡದ ಕಾಂಗ್ರೆಸ್ ಯಾವ ರೀತಿ ಆಳಲು ಸಾಧ್ಯ ಎಂದರು.ಜನರಿಗೆ ಮೋಸ ಮಾಡುವ ಪಕ್ಷವಿದ್ದರೆ ಅದು ಕಾಂಗ್ರೆಸ್ ಪಾರ್ಟಿ ಜಲಜೀವನ ಮಿಷನ್ ಮೂಲಕ ನೀರು ಒದಗಿಸಿದ್ದು, ಕರೋನ ಸಂದರ್ಭದಲ್ಲಿ ೧೩೫ ಕೋಟಿ ಜನರಿಗೆ ವಿಶ್ವಾಸ ತುಂಬಿ ಪ್ರಾಣ ಉಳಿಸಿದ್ದು, ನರೇಂದ್ರ ಮೋದಿ ಸರ್ಕಾರ ಎಂಬುವುದನ್ನು ಜನರು ಮರೆಯಬಾರದು. ೪.೫ ಲಕ್ಷಕ್ಕೂ ಅಧಿಕ ಮತಗಳಿಂದ ಬಿ.ವೈ.ಆರ್.ರವರನ್ನು ಗೆಲ್ಲಿಸಿ ಎಂದರು.


ಸಂಸದ ಬಿ.ವೈ.ಆರ್.ಮಾತನಾಡಿ, ನಾನು ಮಾಡಿದ ಅಭಿವೃದ್ಧಿಯನ್ನು ಶಿವಮೊಗ್ಗ ಕ್ಷೇತ್ರದ ಜನತೆ ಕಣ್ಣಾರೆ ಕಂಡಿದ್ದಾರೆ. ಎಂ.ಪಿ.ಎಂ.ಗೆ ಕೊನೆ ಮೊಳೆ ಹೊಡೆದಿದ್ದು ಕಾಂಗ್ರೆಸ್ ಸರ್ಕಾರ ವಿಐಎಸ್‌ಎಲ್ ಜೀವಂತವಾಗಿಡಲು ನನ್ನ ಶಕ್ತಿ ಮೀರಿ ಕ್ಷಮಿಸಿದ್ದೇನೆ. ಈಗ ಕುಮಾರಣ್ಣ ಕೂಡ ನನ್ನ ಜೊತೆಗೆ ಸಂಸದರಾಗಿ ಬರುತ್ತಾರೆ. ನಾವಿಬ್ಬರು ಸೇರಿ ವಿ.ಐ.ಎಸ್.ಎಲ್. ಪುನಶ್ಚೇತನಗೊಳಿಸುತ್ತೇವೆ ಎಂದರು.
ವೇದಿಕೆಯಲ್ಲಿ ಶಾಸಕರಾದ ಚನ್ನಬಸಪ್ಪ, ಆರಗಜ್ಞಾನೇಂದ್ರ, ಡಿ.ಎಸ್.ಅರುಣ್, ಬೋಜೇಗೌಡ, ಭಾರತಿಶೆಟ್ಟಿ, ಗುರಾಜ ಗಂಟಿವಳಿ, ಶಾರದಪೂರ‍್ಯನಾಯ್ಕ, ಸಂಸದ ಮುನಿಸ್ವಾಮಿ, ಮಾಜಿ ಶಾಸಕರಾದ ಅಶೋಕ್‌ನಾಯಕ್ , ಕುಮಾರಬಂಗಾರಪ್ಪ, ಹರತಾಳು ಹಾಲಪ್ಪ, ಕೆ.ಬಿ.ಪ್ರಸನ್ನಕುಮಾರ್, ಟಿ.ಡಿ.ಮೇಘರಾಜ್ ಮತ್ತಿತರರು ಇದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಮಹೇಶ್ ಹುಲ್ಮಾಡಿ, ಚಂದ್ರಶೇಖರ್, ಮಲ್ಲಿಕಾರ್ಜುನ ಹಕ್ರೆ, ವಿ.ಜಿ.ಪರಶುರಾಮ್ ಬಿಜೆಪಿಗೆ ಸೇರ್ಪಡೆಗೊಂಡರು.

By admin

ನಿಮ್ಮದೊಂದು ಉತ್ತರ

You missed

error: Content is protected !!