ಶಿವಮೊಗ್ಗ, ಆಕಾಶ್ ಬೈಜೂಸ್ ಏಪ್ರಿಲ್ 2024 ರಲ್ಲಿ ಆರಂಭವಾಗಲಿರುವ ವೈದ್ಯರು ಮತ್ತು ಎಂಜಿನಿಯರ್ ಗಳಾಗಬೇಕೆಂದು ಹೊತ್ತಿರುವ ಹಲವಾರು ವಿದ್ಯಾರ್ಥಿಗಳ ಕನಸನ್ನು ನನಸು ಮಾಡುವ ಉದ್ದೇಶದಿಂದ ವಿವಿಧ ವಿದ್ಯಾರ್ಥಿ ವೇತನಗಳನ್ನು ಪ್ರಕಟಿಸಿದೆ.

ವಿದ್ಯಾರ್ಥಿ ವೇತನವೆಂದರೆ ಇನ್ ಸ್ಟಂಟ್ ಅಡ್ಮಿಶನ್ ಕಮ್ ಸ್ಕಾಲರ್ ಶಿಪ್ ಟೆಸ್ಟ್ (iACST) ಆಗಿದೆ. ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಫೌಂಡೇಶನ್ ಕೋರ್ಸ್ ಗಳ ಪ್ರವೇಶಕ್ಕೆ ಶೇ.90 ರವರೆಗೆ ವಿದ್ಯಾರ್ಥಿವೇತನ ದೊರೆಯಲಿದೆ. ಇದಲ್ಲದೇ, ಆಕಾಶ್ ಬೈಜೂಸ್ ಹುತಾತ್ಮರಾದ ಯೋಧರು, ಸೇನಾ ಸಿಬ್ಬಂದಿ ಮತ್ತು ಭಯೋತ್ಪಾದಕ ದಾಳಿಗೆ ತುತ್ತಾದವರ ಮಕ್ಕಳಿಗೆ ವಿಶೇಷ ರಿಯಾಯ್ತಿಯನ್ನು ನೀಡುತ್ತಿದೆ  

ಆಕಾಶ್ ಬೈಜೂಸ್ ನ ಚೀಫ್ ಬ್ಯುಸಿನೆಸ್ ಆಫೀಸರ್ ಅನೂಪ್ ಅಗರ್ವಾಲ್  ಮಾತನಾಡಿ,  ದೇಶಾದ್ಯಂತ ವಿದ್ಯಾರ್ಥಿಗಳಿಗೆ ಸುಲಭವಾಗಿ ಪ್ರವೇಶಿಸಬಹುದಾದ ಮತ್ತು ಪರಿಣಾಮಕಾರಿ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ನಾವು ಬದ್ಧರಾಗಿದ್ದೇವೆ. iACST ಮತ್ತು ನಮ್ಮ ವಿದ್ಯಾರ್ಥಿ ವೇತನ ಕಾರ್ಯಕ್ರಮಗಳಂತಹ ಉಪಕ್ರಮಗಳ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಮತ್ತು ವೃತ್ತಿ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಅವಕಾಶ ಕಲ್ಪಿಸುವ ಗುರಿಯನ್ನು ನಾವು ಹೊಂದಿದ್ದೇವೆ  ಎಂದು ತಿಳಿಸಿದರು.

ಇನ್ ಸ್ಟಂಟ್ ಅಡ್ಮಿಶನ್ ಕಮ್ ಸ್ಕಾಲರ್ ಶಿಪ್ ಟೆಸ್ಟ್ (iACST) 60 ನಿಮಿಷಗಳ ಪರೀಕ್ಷೆಯಾಗಿದ್ದು, ನಿಗದಿತ ದಿನಗಳಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯೊಳಗೆ ಪರೀಕ್ಷೆಯನ್ನು ಬರೆಯಲು ಅವಕಾಶವಿದೆ. 8 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ವೈದ್ಯಕೀಯ ಅಥವಾ ಎಂಜಿನಿಯರಿಂಗ್ ನಲ್ಲಿ ತಮ್ಮ ವೃತ್ತಿಜೀವನದ ಸಾಮರ್ಥ್ಯವನ್ನು ಪ್ರದರ್ಶಿಸಲು iACST ಒಂದು ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು.  

2024 ರಿಂದ ಇದುವರೆಗೆ ಈ ವಿದ್ಯಾರ್ಥಿವೇತನದಿಂದ 75.000 ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ.

ಇತ್ತೀಚೆಗೆ ನಡೆದ ಜೆಇಇ ಮೇನ್ಸ್ 2024 ಪರೀಕ್ಷೆಯಲ್ಲಿ ಆಕಾಶ್ ಬೈಜೂಸ್ ನ 41.263 ವಿದ್ಯಾರ್ಥಿಗಳು ಅರ್ಹತೆ ಪಡೆಯುವ ಮೂಲಕ ಸಂಸ್ಥೆಯು ಯಶಸ್ಸಿನ ಮತ್ತೊಂದು ಮೆಟ್ಟಿಲೇರಿದೆ. ಇವರ ಪೈಕಿ ಸಂಸ್ಥೆಯ 4.198 ವಿದ್ಯಾರ್ಥಿಗಳು ಶೇ.95 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದುಕೊಂಡಿದ್ದರೆ, 939 ವಿದ್ಯಾರ್ಥಿಗಳು ಶೇ.99 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದು ಹಿರಿಮೆ ತಂದಿದ್ದಾರೆ.  ಹೈದ್ರಾಬಾದ್ ನ ರಿಷಿ ಶೇಖರ್ ಶುಕ್ಲಾ ಅವರು ಶೇ.100 ಅಂಕ ಪಡೆದು ಟಾಪರ್ ಆಗಿದ್ದರೆ, ಕರ್ನಾಲ್ ನ ಅಭಿರಾಜ್ ಸಿಂಗ್, ತ್ರಿನುಲ್ವೇಲಿಯ ಶ್ರೀರಾಂ ಮತ್ತು ಹೈದ್ರಾಬಾದ್ ನ ವಿಶ್ವನಾಥ್ ಕೆ.ಎಸ್. ಅವರು ಶೇ.99.99 ಅಂಕ ಪಡೆದು ಸಂಸ್ಥೆಗೆ ಹೆಮ್ಮೆ ಬರುವಂತೆ ಮಾಡಿದ್ದಾರೆ.

ಕ್ಲಾಸ್ ರೂಂ ವಿದ್ಯಾರ್ಥಿಗಳಲ್ಲದೇ, ಆಕಾಶ್ ಬೈಜೂಸ್ ನ ಡಿಜಿಟಲ್ ಪ್ರೋಗ್ರಾಂನ ವಿದ್ಯಾರ್ಥಿಗಳು ಜೆಇಇ ಮೇನ್ಸ್ 2024 (ಸೆಶನ್ -01)ರಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಗಣಿತದಲ್ಲಿ 100 ಅಂಕಗಳೊಂದಿಗೆ ರೀತಂ ಬ್ಯಾನರ್ಜಿ ಒಟ್ಟಾರೆ ಶೇ.99.96 ಅಂಕ ಪಡೆಯುವುದರೊಂದಿಗೆ ಈ ವಿಭಾಗದಲ್ಲಿ ಟಾಪರ್ ಆಗಿದ್ದಾರೆ.  

ಇನ್ನು NEET-UG ಪರೀಕ್ಷೆ 2023 ರಲ್ಲಿ ಆಕಾಶ್ ಬೈಜೂಸ್ ನ 1.06.870 ವಿದ್ಯಾರ್ಥಿಗಳು ಅರ್ಹತೆ ಪಡೆದಿರುವುದು ಒಂದು ಮೈಲಿಗಲ್ಲಾಗಿದೆ. ಇವರಲ್ಲಿ 17 ಮಂದಿ ವಿದ್ಯಾರ್ಥಿಗಳು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಟಾಪರ್ ಗಳಾಗಿ ಹೊರಹೊಮ್ಮಿದ್ದಾರೆ. ಆಲ್ ಇಂಡಿಯಾ ರ್ಯಾಂಕಿಂಗ್ ಅಂದರೆ AIR ನಲ್ಲಿ ಮೂರನೇ ಟಾಪರ್, ಕೌಸ್ತುಭ್ ಬೌರಿ, ಧೃವ್ ಅಡ್ವಾಣಿ 5 ನೇ ಟಾಪರ್, ಸೂರ್ಯ ಸಿದ್ಧಾರ್ಥ್ ನಾಗರಾಜನ್ 6 ನೇ ಟಾಪರ್, ಸ್ವಯಂ ಶಕ್ತಿ ತ್ರಿಪಾಠಿ 8 ನೇ ಟಾಪರ್ ಮತ್ತು ಪಾರ್ಥ್ ಖಂಡೇಲ್ವಾಲ್ 10 ನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ.ಈ ಕಾರ್ಯಕ್ರಮದಲ್ಲಿ  ಹರೀಶ್ ಟ,ಸ್, ಬ್ರಾಂಚ್ ಮೆನೇಜರ್,  ವರುಣ ಸೋನಿ, ನಿತೀನ್ ಆರ್, ಉಪಸ್ಥಿತರಿದ್ದರು

By admin

ನಿಮ್ಮದೊಂದು ಉತ್ತರ

You missed

error: Content is protected !!