ಶಿವಮೊಗ್ಗ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ತುಂಗಾ ನಗರ ಪೊಲೀಸ್ ಠಾಣೆ ಹಾಗೂ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು 3 ಪ್ರಕರಣಗಳಲ್ಲಿ 3 ಜನ ಆರೋಪಿಗಳನ್ನು ವಶಕ್ಕೆ ಪಡೆದು ಒಟ್ಟು 19, 078 ರೂಪಾಯಿ ಮೌಲ್ಯದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಣಗಲ ಕೊಪ್ಪ ಗ್ರಾಮದ ರಮೇಶ್ ಹಾಗೂ ತುಂಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೊಮ್ಮನಕಟ್ಟೆ ನಿವಾಸಿ ವಿನಯ್ ಹಾಗೂ ಗಾಜನೂರು ಸರೋವರ್ ಹೊಟೇಲ್ ಹತ್ತಿರ ಬೀಡ ಸ್ಟಾಲ್ ಹೊಂದಿರುವ ಆರೋಪಿ ನಾಗರಾಜ್ ಇವರನ್ನು ವಶಕ್ಕೆ ಪಡೆಯಲಾಗಿದೆ.