ಶಿವಮೊಗ್ಗ,ಏ.11:
ಇಡೀ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪ್ರಮುಖ ಸ್ಥಳಗಳಿಗೆ ಹೋಗಿದ್ದೇನೆ. ಅಭೂತಪೂರ್ವ ಬೆಂಬಲ ಸಿಕ್ಕಿದೆ. ಅಪಾರ ಸಂಖ್ಯೆಯ ಜನಬೆಂಬಲ ವ್ಯಕ್ತವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ ಎಸ್. ಈಶ್ವರಪ್ಪ ಇಂದಿಲ್ಲಿ ಹೇಳಿದರು.
ಅವರಿಂದು ಬೆಳಗ್ಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಕೆಲವರು ಸೋಲುವ ಹತಾಶೆಯಿಂದ ಈಶ್ವರಪ್ಪ ಹಿಂದೆ ಬರುತ್ತಾರೆ. ಅವರು ಸ್ಪರ್ಧಿಸುವುದಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ, ನಾನ್ ನಿಲ್ಲೋದು ಗೆಲ್ಲೊದು ಗ್ಯಾರಂಟಿ ಅಂದರು.
ಇನ್ನು ಮುಂದೆ ಏನೂ ನಡೆಯಲ್ಲ, ಯಾರೇ ಬಂದು ಹೇಳಿದರುಇ ನಾನು ಕೇಳಲ್ಲ. ಚುನಾವಣೆಗೆ ನಿಂತೇ ನಿಲ್ತೇನೆ ಎಂದು ಹೇಳಿದರು. ಮಾತುಕತೆ ಗೀತುಕತೆ ಯಾವುದು ಕಥೆ ಇಲ್ಲ. ನನ್ನನ್ನು ಅಪಾರ ಸಂಖ್ಯೆಯ ಅಭಿಮಾನಿಗಳು, ಹಿಂದುತ್ವವಾದಿಗಳು,
ಹಿಂದೂ ಸಮಾಜವನ್ನು ಪ್ರೀತಿಸುವವರು, ರಾಷ್ಟ್ರ ಭಕ್ತಿಯನ್ನು ಹೊಂದಿರುವ ಪ್ರೀತಿಯ ಮುಸ್ಲಿಮರು ಬೆಂಬಲಿಸಿದ್ದಾರೆ ಅವರ ನಂಬಿಕೆಗೆ ದ್ರೋಹ ಮಾಡುವುದಿಲ್ಲ. ಎಂದರು.
ಚುನಾವಣೆಗೆ ನಿಂತೇ ನಿಲ್ತೇನೆ ನನ್ನ ಕಾರ್ಯಕರ್ತರಿಗೆ ಅನ್ಯಾಯ ಮಾಡುವುದಿಲ್ಲ ಎಂದು ಈಶ್ವರಪ್ಪ ಖಡಕ್ಕಾಗಿ ಹೇಳಿದರು.