ಶಿವಮೊಗ್ಗ : ನಗರದ ಮಲ್ಲೇಶ್ವರನಗರ(ಗುಂಡಪ್ಪಶೆಡ್)ಬಡಾವಣೆಯಲ್ಲಿರುವ ಓಂ ಶ್ರೀಂ ಮಹಾಶಕ್ತಿ ಮಾಸ್ತ್ಯಾಂಬಿಕಾ ಅಮ್ಮನವರ ಶ್ರೀ ಕ್ರೋಧಿ ನಾಮ ಸಂವತ್ಸರದ ೪೦ನೇ ಜಾತ್ರಾ ಮಹೋತ್ಸವ ಏ,16 ರಿಂದ ಏ.23 ರವರಗೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಏ.16ನೇ ಮಂಗಳವಾರ ಬೆಳಿಗ್ಗೆ 9 ಕ್ಕೆ ಧ್ವಜಾರೋಹಣ ನಡೆಯಲಿದೆ. ಏ.16 ರಿಂದ ಏ.23ರ ವರೆಗೆ (ಏಳು ದಿನಗಳು) ಪ್ರತಿದಿನಗಳ ಕಾಲ ಅಮ್ಮನವರಿಗೆ ಅರಿಶಿಣ ಪೂಜೆ ನಡೆಯಲಿದ್ದು, ಭಕ್ತಾಧಿಗಳು ಅಮ್ಮನವರ ಪೂಜೆಗೆ ಅರಿಶಿನ ಮತ್ತು ಎಳ್ಳಣ್ಣೆ ತಂದು ಸೇವೆ ಸಲ್ಲಿಸಬಹುದು, ಏ.19 ರಿಂದ ಏ.23ರವರೆಗೆ ಪ್ರತಿದನ ಬೆಳಿಗ್ಗೆ 9.30ಕ್ಕೆ ಪಂಚತತ್ವಹೋಮ, ಗಣಹೋಮ, ಸುಬ್ರಹ್ಮಣ್ಯಹೋಮ, ಸುದರ್ಶನಹೋಮ
ಚಿನ್ನಮಸ್ತಾಮೂಲಮಂತ್ರಹೋಮ, ಸಹಸ್ರಾಕ್ಷರೀ ಭದ್ರಕಾಳಿ ಮೂಲಮಂತ್ರಹೋಮ ನಡೆಯಲಿದೆ. ಹಾಗೂ ಏ.22ರ ಸೋಮವಾರ ಗಂಗಪೂಜೆ ನಡೆಯಲಿದ್ದು ಅಂದು ಸಂಜೆ 4.30ಕ್ಕೆ ದೇವಸ್ಥಾನದಿಂದ ಚಾಲನೆ ಸಿಗುವುದು ಗಂಗೆ ತರುವ ಭಕ್ತಾಧಿಗಳು ಕೊಡವನ್ನು ತಾವೇ ತರುವಂತೆ ಮನವಿ
ಮಾಡಲಾಗಿದೆ. ಹಾಗೂ ಅದೇ ದಿನ ರಾತ್ರಿ 6 ಕ್ಕೆ ಅಮ್ಮನವರಿಗೆ 108 ಬಾರಿ ನವಧಾನ್ಯ ಅಭಿಷೇಕ ರಾತ್ರಿ 12ಕ್ಕೆ ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಏ.23ರ ಮಂಗಳವಾರ ಬೆಳಿಗ್ಗೆ 9ಕ್ಕೆ ನವ ಚಂಡಿಕಾ ಹೋಮ ಮಧ್ಯಾಹ್ನ 12.30ಕ್ಕೆ ಪೂರ್ಣಹುತಿ
ನಂತರ ಅನ್ನಸಂತರ್ಪಣೆ ನಡೆಯಲಿದ್ದು, ಅದೇ ದಿನ ಸಂಜೆ 6 ಕ್ಕೆ ಅಮ್ಮನವರ ರಥೋತ್ಸವ ನಡೆಯಲಿದೆ, ಈ ಎಲ್ಲಾ ಕಾರ್ಯಕ್ರಮಗಳನ್ನು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಮ್ಮನವರ ಕೃಪಾಶೀರ್ವಾದಗಳಿಗೆ ಪಾತ್ರರಾಗುವಂತೆ ದೇವಸ್ಥಾನದ ಸಮಿತಿ ಪ್ರಕಟಣೆ ತಿಳಿಸಿದೆ.