ಶಿವಮೊಗ್ಗ ದೇಶಿಯ ವಿದ್ಯಾ ಶಾಲಾ ಪದವಿಪೂರ್ವ ಸ್ವತಂತ್ರ ಕಾಲೇಜಿಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇಕಡ 98.04ರಷ್ಟು ಫಲಿತಾಂಶ ಬಂದಿದ್ದು, ವಿಜ್ಞಾನ ವಿಭಾಗದಲ್ಲಿ 97.79, ಕಲಾವಿಭಾಗದಲ್ಲಿ 98.23, ವಾಣಿಜ್ಯ ವಿಭಾಗದಲ್ಲಿ 98.36ರಷ್ಟು ಫಲಿತಾಂಶ ಬಂದಿದೆ.
ಒಟ್ಟು 613 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು 603 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ 241 ಡಿಸ್ಟಿಂಕ್ಷನ್, 337 ಪ್ರಥಮ ದರ್ಜೆ ಬಂದಿದ್ದು, ನೂರಕ್ಕೆ ನೂರು ಅಂಕವನ್ನು 70 ವಿಷಯಗಳಲ್ಲಿ ವಿದ್ಯಾರ್ಥಿಗಳು ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ನಿತ್ಯಶ್ರೀ ರಾಜ್ಯಮಟ್ಟದ ಒಂಬತ್ತನೇ ಸ್ಥಾನ ಪಡೆದಿದ್ದು 590 ಅಂಕಗಳನ್ನು ಪಡೆದಿದ್ದಾರೆ ಕಲಾವಿಭಾಗದಲ್ಲಿ ಚುಕ್ಕಿ ಕೆ ಸಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದು 593 ಅಂಕ ಪಡೆದಿದ್ದಾರೆ ಸಿಂಚನ ಅವರು 591 ಅಂಕಗಳಿಸುವ ಮೂಲಕ ರಾಜ್ಯಕ್ಕೆ 6ನೇ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಯಶಸ್ವಿ ಎಚ್ ಎಂ ಅವರು 593 ಅಂಕ ಪಡೆದಿದ್ದು, ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದಾರೆ. ರಾಜ್ಯದಲ್ಲಿ 7ನೇ ಸ್ಥಾನ ಪಡೆದಿರುವ ನವ್ಯ ಎಂ ಅವರು 591 ಅಂಕ ಪಡೆದಿದ್ದಾರೆ ರಿಯಾ ಫೆರರಾ ಅವರು ಎಂಟನೇ ಸ್ಥಾನ ಪಡೆದಿದ್ದು 590 ಅಂಕ ಪಡೆದಿದ್ದು, ಸಾಂಘವಿ 581 ಅಂಕ ಪಡೆಯುವ ಮೂಲಕ 9ನೇ ಸ್ಥಾನ ಗಳಿಸಿದ್ದಾರೆ.
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ದೇಶಿಯ ವಿದ್ಯಾ ಶಾಲಾ ಸಮಿತಿಯ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದೆ.