ಶಿವಮೊಗ್ಗ, ಏ.11
ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಗುರುಕುಲ ಮಾದರಿಯ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿ ದ್ವಿತೀಯ ಪಿಯುಸಿ ಯಲ್ಲಿ ಅತ್ಯುನ್ನತ ಫಲಿತಾಂಶವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ: 68 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 30 ಉನ್ನತ ಶ್ರೇಣಿ, 36 ಪ್ರಥಮ ಶ್ರೇಣಿ, ಎರಡು ದ್ವಿತೀಯ ಶ್ರೇಣಿ ಪಡೆದಿದ್ದು, ವಾಣಿಜ್ಯ ವಿಭಾಗದಲ್ಲಿ: 23 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 05 ಉನ್ನತ ಶ್ರೇಣಿ ಹಾಗು 18 ಪ್ರಥಮ ಶ್ರೇಣಿ ಲಭಿಸಿದೆ.
ವಿಜ್ಞಾನ ವಿಭಾಗದಲ್ಲಿ ರೋಜಾ ಎಂ ಪಟೇಲ್ 600 ಕ್ಕೆ 588 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರೆ, ಪೂಜಾ ಟಿ 572 ಅಂಕಗಳಿಸುವ ಮೂಲಕ ದ್ವಿತೀಯ ಸ್ಥಾನ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ವರ್ಷ ಎನ್ 565, ಮನೋಜ 560 ಅಂಕಗಳಿಸಿದ್ದಾರೆ.
ಪ್ರಸಕ್ತ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಲ್ಲಿ ಕನ್ನಡ-1 ರಾಸಾಯನಶಾಸ್ತ್ರ-1, ಗಣಿತ-6, ಹಾಗೂ ಜೀವಶಾಸ್ತ್ರ-1 ವಿದ್ಯಾರ್ಥಿ ಶೇಕಡ 100 ಫಲಿತಾಂಶವನ್ನು ಪಡೆದಿರುವುದು ವಿಶೇಷ.
:
ತಾಯಿಯ ಸೇವೆಗೆ ಪ್ರತಿಫಲ ನೀಡಿದ ಮಗಳುಗುರುಪುರದ ಬಿಜಿಎಸ್ ಗುರುಕುಲ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದಿರುವ ರೋಜಾ ಎಂ ಪಟೇಲ್ ಅವರ ತಾಯಿ ಇದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಭದ್ರಾವತಿ ತಾಲೂಕು ಕೂಡ್ಲಿ ಭಾಗದ ನೇತ್ರಾವತಿ ಪಟೇಲ್ ಅವರು ಪತಿಯ ನಿಧನ ನಂತರ ಈ ಶಾಲೆಗೆ ಬಂದು ಕೆಲಸಕ್ಕೆ ಸೇರಿದ್ದರು. ಇಬ್ಬರು ಹೆಣ್ಣು ಮಕ್ಕಳಲ್ಲಿ ಮೊದಲನೇಯವಳಾದ ರೋಜಾ ಎಂ ಪಟೇಲ್ ಅವರು ವಿಜ್ಞಾನ ವಿಭಾಗದ ದ್ವಿತೀಯ ಪಿಯುನಲ್ಲಿ 588 ಅಂಕ ಪಡೆಯುವ ಮೂಲಕ ಇಡೀ ಕಾಲೇಜಿಗೆ ಪ್ರಥಮ, ಹಾಗೂ ಜಿಲ್ಲೆಗೆ ಎಂಟನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ.
ಈ ವಿದ್ಯಾರ್ಥಿನಿ ರಾಸಾಯನಿಕ ಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರದಲ್ಲಿ ಶೇ. 100 ಫಲಿತಾಂಶ ಪಡೆದಿರುವುದು ಹಿರಿಮೆಯ ಸಂಗತಿ.
ವಿದ್ಯಾರ್ಥಿಗಳ ಸಾಧನೆಯನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದ ಸುರೇಶ್ ಎಸ್. ಹೆಚ್., ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.