ಶಿವಮೊಗ್ಗ,ಏ.08:
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅತಿ ದೊಡ್ಡ ಪಕ್ಷದ ಕಚೇರಿಯನ್ನು ಹೊಂದಿದ್ದು, ಮೇಲಿನ ಸಭಾಂಗಣ ಧೂಳುಪೊರೆ ಕಸ ಮಿಶ್ರಿತ ವಾತಾವರಣದಲ್ಲಿದೆ.
ಅದನ್ನು ಗುಡಿಸಿ, ಕ್ಲೀನ್ ಮಾಡಿ ತಿಂಗಳೇ ಕಳೆದಿರಬೇಕು. ಅದೇ ಸಭಾಂಗಣದಲ್ಲಿ ಪತ್ರಕರ್ತರಿಗೆ ಎಂದು ಹಾಕಿರುವ ಬಾಗಿಲೊಂದರ ಒಳ ಹೋದರೆ ಅತ್ಯಂತ ಹೊಲಸಿನ ಲೋಕ ಕಂಡುಬರುತ್ತದೆ.
ಪತ್ರಕರ್ತರಿಗೆ ಎಂಬ ಹೆಸರು ಹಾಕಿರುವ ಈ ಬಾಗಿಲ ಪಕ್ಕದಲ್ಲಿ ಒಳಹೊದರೆ ಗಲೀಜಾದ ಕೈ ತೊಳೆಯುವ ಸ್ಥಳ, ಶೌಚಾಲಯವಿದೆ ಆ ಶೌಚಾಲಯವನ್ನು ಸುಮಾರು ಮೂರು ವರ್ಷಗಳ ಹಿಂದೆ ತೊಳೆದಿರಬೇಕು ಎನಿಸುತ್ತದೆ.
ಅಂತೆಯೇ ಎನ್ ಎಸ್ ಯು ಐ, ಯುವ ಕಾಂಗ್ರೆಸ್ ವಿಭಾಗದ ಕಚೇರಿಗೆ ಈಗ ಬಾಗಲೆಡೆ ಒಳಗೆ ನೋಡಿದರೆ ಕಾಂಗ್ರೆಸ್ ಬಾವುಟಗಳು ಕಾಂಗ್ರೆಸ್ ಬಂಟಿಂಗ್ಸ್ ಗಳು ನೆಲದ ಮೇಲೆ ಹೊರಳಾಡುತ್ತವೆ. ಪಕ್ಕದಲ್ಲಿ ಪಕ್ಕದಲ್ಲಿರುವ ಇಂದಿರಾಗಾಂಧಿ ಸನ್ನಿವೇಶವನ್ನು ನೋಡಿ ಬಿಚ್ಚಿಬಿಚ್ಚಿ ಅಳುತ್ತಿದ್ದಾರೆ.
ಅಂತೇ ಸಭಾಂಗಣದ ಮುಂದಿನ ಹೊರಾಂಗಣ ಜಾಗದಲ್ಲಿ ಖಾಲಿ ನೀರಿನ ಬಾಟಲ್, ಪೇಪರ್ ಮಾಮೂಲಿಯಾಗಿದೆ. ನಿತ್ಯ ಕಸ ಹೊಡೆಯುವ ಪರಿಪಾಠ ಇಲ್ಲಿ ಇದ್ದಂತಿಲ್ಲ. ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದರೂ ಒಮ್ಮೆ ಇತ್ತ ಗಮನಹರಿಸುವುದು ಒಳ್ಳೆಯದು. ಚುನಾವಣೆಯ ಈ ಹೊತ್ತಿನಲ್ಲಿ ಕಾರ್ಯಕರ್ತರು, ಮುಖಂಡರು ಹಾಗೂ ಪತ್ರಕರ್ತರು ಆಗಮಿಸುತ್ತಾರೆ ಎಂಬ ಜ್ಞಾನ ಕಾಂಗ್ರೆಸ್ ಪಕ್ಷದ ಪ್ರಮುಖರಲ್ಲಿ ಬೆಳೆಯಬೇಕಿರುವುದು ದುರಂತವೆ ಹೌದು.