
ಶಿವಮೊಗ್ಗ, ಏ.6:
ಶಿವಮೊಗ್ಗ ನೆಹರೂ ರಸ್ತೆಯ ವಾಹನಗಳ ಪಾರ್ಕಿಂಗ್ ಗೆ ಅತ್ಯಂತ ವ್ಯವಸ್ಥಿತವಾಗಿ ಜಾಗವನ್ನು ಪೊಲೀಅ್ ಇಲಾಖೆ ರೂಪಿಸಿದೆ.
ಹಾಗೆಯೇ ದ್ವಿಚಕ್ತ ಹಾಗೂ ನಾಲ್ಕುಚಕ್ರ ವಾಹನಗಳಿಗೆ ಅವಕಾಶವನ್ನು ನೀಡಿದೆ.

ಆದರೆ ಅಲ್ಲಿರುವ ಜೆಹೆಚ್ ಪಟೇಲ್ ವಾಣಿಜ್ಯ ಸಂಕೀರ್ಣಕ್ಕೆ ಹೋಗುವ ರಸ್ತೆಯಲ್ಲಿ ನಿರಂತರವಾಗಿ ವಾಹನಗಳು ನಿಂತುಕೊಂಡಿರುತ್ತವೆ ಎಂಬ ಸತ್ಯ ಪೋಲಿಸ್ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಗೊತ್ತಿದ್ದರೂ ಸಹ ಮೌನವಾಗಿರುವುದು ಯಾರ ಉದ್ದೇಶಕ್ಕೆ ಎಂಬುದು ಅರ್ಥವಾಗುತ್ತಿಲ್ಲ.

ಕನಿಷ್ಟ ಈ ಜಾಗದಲ್ಲಿ ಸಂವಾರಿ ಪೊಲೀಸರುಎರಡು ಬ್ಯಾರಿಕೇಡ್ ಇಡಬಹುದಿತ್ತು. ಹಿಂದಿ ಇಟ್ಟಿದ್ದವನ್ನು ತಗೆದುಕೊಂಡು ಹೋಗಿದ್ದಾರೆ. ಪೊಲೀಸರಿಗೆ ಇತ್ತ ಗಮನಿಸಲು ಎಸ್ಪಿ ಸೂಚಿಸಲು ಸಾರ್ವಜನಿಕರು ವಿನಂತಿಸಿದ್ದಾರೆ.

ಈ ರಸ್ತೆಯಲ್ಲಿನ ಟು ವೀಲರ್ ವಾಹನಗಳಿಗೆ ಮಾತ್ರ ಪಾರ್ಕಿಂಗ್ ನಲ್ಲಿ ಕೇಸು ಹಾಕಲಾಗುತ್ತಿದೆ ಎಂಬ ಮಾತು ಕೇಳಿಬಂದಿದೆ. ನಾಲ್ಕು ಚಕ್ರ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ಒಮ್ಮೆ ಇತ್ತ ಗಮನಿಸಿ.
ಇಲ್ಲಿನ ಫುಟ್ಬಾತ್ ಹಾಗೂ ಪಾರ್ಕಿಂಗ್ ವ್ಯವಸ್ಥೆಯ ಸದ್ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ. ಜಿಲ್ಲಾ ರಕ್ಷಣಾಧಿಕಾರಿಗಳೇ, ಇತ್ತ ಗಮನಿಸಿ ಸಾರ್ವಜನಿಕರಿಗೆ ಕಿರಿಕಿರಿಯಾಗಿರುವ ಈ ಸಮಸ್ಯೆಯನ್ನು ಬಗೆಹರಿಸಲು ಸೂಚಿಸಿ.