ಬರೊಬ್ಬರಿ ಎರಡು ತಿಂಗಳಿನಿಂದ ಶಿವಮೊಗ್ಗ ನೆಹರೂ ರಸ್ತೆಯ ಜೆ ಹೆಚ್ ಪಟೇಲ್ ವಾಣಿಜ್ಯ ಸಂಕೀರ್ಣದ ಎದುರಿನ ಓಣಿಯಲ್ಲಿ ಸುಲಭ ಶೌಚಾಲಯಕ್ಕೆ ಬಾಗಿಲು ಹಾಕಲಾಗಿದೆ.
ನಗರಪಾಲಿಕೆಯ ಸಂಬಂಧಪಟ್ಟ ಅಭಿಯಂತರರು ನೆಪ ಮಾತ್ರಕ್ಕೆ ಬಂದು ಹೋಗಿದ್ದಾರೆ. ಅಲ್ಲಿ ನೀರಿನ ಪೂರೈಕೆ ಆಗುತ್ತಿಲ್ಲ. ಸ್ಮಾರ್ಟ್ ಸಿಟಿ ಹೆಸರಲ್ಲಿ ಆದ ಟೈಲ್ಸ್ ರಸ್ತೆ ಹಾಳಾಗಿ ಹೋಗಿದೆ.
ಕನಿಷ್ಠ ಪಕ್ಷ ಆದಷ್ಟು ಬೇಗನೆ ನೀರು ಕೊಟ್ಟು ಸಾರ್ವಜನಿಕ ಶೌಚಾಲಯಕ್ಕೆ ಅವಕಾಶ ಮಾಡಿಕೊಡಬೇಕೆಂಬ ಕಿಂಚಿತ್ತು ಯೋಚನೆ ಪಾಲಿಕೆಯ ಅಧಿಕಾರಿಗಳಿಗೆ ಇಲ್ಲ.
ಹಾಗಾಗಿ ಪಾಲಿಕೆಯ ಆಯುಕ್ತರೇ ನೀವೇ ಒಮ್ಮೆ ಇತ್ತ ಗಮನಿಸಿ ಸಂಬಂಧಿಸಿದವರಿಗೆ ಜಾಡಿಸಿ