ಶಿವಮೊಗ್ಗ,ಜ.05:
ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾರೆ ಎಂದು ಹೆತ್ತ ತಾಯಿಯೇ ಮಕ್ಕಳಿಗೆ ವಿಷವುಣಿಸಿ ಕೊಂದಳೆಂಬ ಆರೋಪ ಕೇಳಿಬಂದಿದೆ.

ಈಗಷ್ಟೆ ಪತ್ರಿಕಾ ಮೂಲಗಳಿಗೆ ಲಭಿಸಿದ ಮಾಹಿತಿಯಂತೆ ಭದ್ರಾವತಿಯ ಮಹಿಳೆಯೊಬ್ಬರು ತನ್ನ ಇಬ್ಬರು ಕರುಳ ಕುಡಿಗಳಿಗೆ ವಿಷ ಉಣಿಸಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ.
ಈಕೆ ನಿನ್ನೆ ತನ್ನ ಇಬ್ಬರು ಮಕ್ಕಳನ್ನು ಭದ್ರಾವತಿಯಿಂದ ಶಿವಮೊಗ್ಗದ ಗಾಂಧಿ ಪಾರ್ಕ್​ಗೆ ಕರೆ ತಂದು ಜ್ಯೂಸ್​ನಲ್ಲಿ ವಿಷದ ಮಾತ್ರೆ ಹಾಕಿ ಮಕ್ಕಳಿಗೆ ಕುಡಿಸಿದ್ದಳು ಎಂದು ಹೇಳಲಾಗುತ್ತಿದೆ.
ಜ್ಯೂಸ್ ಕುಡಿದ ಬಳಿಕ ಬಸ್ ನಿಲ್ದಾಣಕ್ಕೆ ಹೋದಾಗ ಇಬ್ಬರು ಮಕ್ಕಳ ಬಾಯಿಯಲ್ಲಿ ನೊರೆ ಬರಲಾಂಭಿಸಿದೆ. ಈ ವೇಳೆ ಆಟೋ‌ ಚಾಲಕರೊಬ್ಬರು ಮಕ್ಕಳ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಅಲ್ಲಿಂದ ಮಕ್ಕಳನ್ನು ಸರ್ಜಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೆ ಇಬ್ಬರೂ ಮಕ್ಕಳು ಮೃತಪಟ್ಟಿದ್ದಾರೆ.

ಮಕ್ಕಳ ಸಾವಿನ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೃತ ಮಕ್ಕಳ ತಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಬಳಿಕ ಮಕ್ಕಳ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದೆ. ಹೆತ್ತಮ್ಮನೇ ಕರುಳ ಬಳ್ಳಿ ಕೊಂದಳಾ…? ಇದರೊಳಗೆ ಅನ್ಯರ ಕೈವಾಡವಿದೆಯಾ? ಯಾಕೆ, ಏನಾಯ್ತು ಎಂಬೆಲ್ಲಾ ಪ್ರಶ್ಬೆಗೆ ಪೊಲೀಸರು ಉತ್ತರ ಹುಡುಕಬೇಕಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!