ಸಾಗರ(ಶಿವಮೊಗ್ಗ),ಮಾ.೨೮ :ಸಾಗರದ ಶಕ್ತಿ ದೇವತೆ ಶ್ರೀ ಮಹಾಗಣಪತಿ ದೇವರ ಜಾತ್ರೆ ರಥೋತ್ಸವ ಕಾರ್ಯಕ್ರಮ ಏಪ್ರಿಲ್ ೯ ರಂದು ಯುಗಾದಿ ಹಬ್ಬದ ನಂತರ ಧಾರ್ಮಿಕ ವಿಧಿವಿದಾನದಂತೆ ಆಚರಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಉಪವಿಭಾ ಗಾಧಿಕಾರಿ ಯತೀಶ್ ಹೇಳಿದರು.
ಅವರು ಉಪವಿಭಾಗಾಧಿ ಕಾರಿಗಳ ಸಬಾಂಗಣದಲ್ಲಿ ಗಣಪತಿ ಜಾತ್ರಾ ಪ್ರಯುಕ್ತ ಪೂರ್ವಸಭೆಯಲ್ಲಿ ಮಾತ ನಾಡಿ ಪ್ರಸ್ತುತ ಜಾತ್ರೆಯ ನಿರ್ವಹಣೆಗೆ ಮುಜರಾಯಿ ಇಲಾಖೆಯಿಂದ ೧೧ ಲಕ್ಷ ರೂಗಳ ಅನುದಾನ ಮಂಜೂ ರಾತಿಯಾಗಿದೆ,ಪ್ರಸ್ತುತ ಜಾತ್ರಾ ನಿರ್ವಹಣೆಗೆ ೧೭ ಲಕ್ಷ ರೂಗಳ ಅಂದಾಜು ಪಟ್ಟಿ ತೆಯಾರಿಸಿ ದ್ದೇವೆ ಎಂದು ಮಾಹಿತಿ ನೀಡಿದರು.
ಕಳೆದ ವರ್ಷದ ಜಾತ್ರೆಯ ಖರ್ಚು-ವೆಚ್ಚಗಳ ಮಾಹಿತಿ ನೀಡುವಂತೆ ಐವಿ ಹೆಗಡೆ ವಿಷಯ ಪ್ರಸ್ತಾಪಿಸಿರುವ ಕುರಿತು ಪ್ರತಿಕ್ರಿಯಿಸಿದ ಉಪ ವಿಭಾಗಾಧಿಕಾರಿಗಳು ಕಳೆದ ವರ್ಷ ಮಳಿಗೆಗಳ ಹರಾಜ್ ನಿಂದ ೯ ಲಕ್ಷ ರೂಗಳ ಆಧಾಯ ಬಂದಿದೆ.ಜಾತ್ರಾ ಖರ್ಚಿಗೆ ೯ ಲಕ್ಷ ರುಗಳ ಮಂಜೂರಾತಿಯಾಗಿತ್ತು ಎಂದು ಮಾಹಿತಿ ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ೧ ಲಕ್ಷ ರೂಗಳ ಅನುದಾನ ನೀಡಲಾಗಿದೆ.ರಥೋತ್ಸವ ಹಾಗೂ ಅನ್ನಸಂತರ್ಪಣೆ, ದೇವರ ಮತ್ತು ದೇವಸ್ಥಾನದ ಅಲಂಕಾರಕ್ಕೆ ಅಗತ್ಯ ಹೂವು ಮತ್ತು ಪೂಜಾ ಪರಿಕರಗಳ ಖರೀದಿಗೆ ಹಣ ನೀಡಲಾ ಗಿದೆ. ಅರ್ಚಕರು ಗಳಿಗೆ ಹಾಗೂ ದೇವಸ್ಥಾನ ದಲ್ಲಿ ಜಾತ್ರಾ ಕೆಲಸ ನಿರ್ವಹಿಸುವ ಸಿಬ್ಬಂಧಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾ ಗಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ಲೋಕಸಭಾ ಚುನಾವಣೆಯಿರುವ ಕಾರಣ ಜಾತ್ರಾ ಸಮಿತಿ ರಚನೆ ಮಾಡುವುದಿಲ್ಲ.ಸಮಿತಿಯಲ್ಲಿ ಸಾರ್ವಜನಿಕರನ್ನು ಸೇರಿಸಲು ಅವಕಾಶವಿಲ್ಲ.ಆದ್ದರಿಂದ ಅಧಿಕಾರಿಗಳ ನೇಮಿಸುವ ಮೂಲಕ ಜಾತ್ರೆ ನಿರ್ವಹಣೆ ಮಾಡಲಾಗುವುದು ಎಂದರು.
ರಥೋತ್ಸವದ ಜವಾಬ್ದಾರಿ ಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ವಹಿಸಬೇಕು.ಅನ್ನಸಂತರ್ಪಣೆ ಹೊಣೆಗಾರಿಕೆಯನ್ನು ಆಹಾರ ಇಲಾಖೆಯಿಂದ ನಿರ್ವಹಿಸ ಬೇಕು.ಸ್ವಚ್ಚತೆ ಜವಾಬ್ದಾರಿ ಯನ್ನು ನಗರಸಭೆ ನಿರ್ವಹಿ ಸಬೇಕು.ಪೂಜಾ ಜವಾಬ್ದಾರಿ ಯನ್ನು ದೇವಸ್ಥಾನ ನಿರ್ವಹಣೆಯ ಕಾರ್ಯನಿರ್ವ ಹಣಾಧಿಕಾರಿಗಳು ನಿರ್ವಹಿ ಬೇಕು,ಪ್ರಚಾರದ ಹೊಣೆಗಾರಿಕೆ ಯನ್ನು ವಾರ್ತಾ ಇಲಾಖೆಗೆ ವಹಿಸುವುದಾಗಿ ಉಪವಿಭಾ ಗಾಧಿಕಾರಿಗಳು ಸ್ಪ ಪಡಿಸಿದರು.
ಸಾರ್ವಜನಿಕರ ಜಾತ್ರಾ ಸಮಿತಿ ರಚಿಸದ ಉಪವಿಭಾ ಗಾಧಿಕಾರಿಗಳ ಕ್ರಮದ ವಿರುದ್ಧ ಆಕ್ಷೇಪ ವ್ಯಕ್ತವಾಯಿತು. ಗಣಪತಿ ಜಾತ್ರೆ ಈ ಹಿಂದೆಯೂ ನೀತಿಸಂಹಿತೆ ಯಿದ್ದಾಗ ನಡೆದಿರುವ ನಿದರ್ಶನಗಳಿವೆ.ರಾಜಕೀಯ ವ್ಯಕ್ತಿಗಳನ್ನು ಹೊರತುಪಡಿಸಿ ಭಕ್ತರ ಸಮಿತಿ ರಚಿಸುವ ಮೂಲಕ ಜಾತ್ರೆ ನಡೆಸಲಾ ಗಿದೆ.ಈಗ ಮಾತ್ರ ನೀತಿ ಸಂಹಿತೆ ನೆಪದಲ್ಲಿ ಜಾತ್ರಾ ಸಮಿತಿ ರಚಿಸುವುದಿಲ್ಲ ಎಂದ ಮೇಲೆ ಸಾರ್ವಜನಿಕರನ್ನು ಜಾತ್ರಾಪೂರ್ವಸಿದ್ದತಾ ಸಬೆಗೆ ಕರೆದಿರುವುದು ನೀತಿ ಸಂಹಿತೆಯ ಉಲ್ಲಂಘನೆಯ ಲ್ಲವೇ?ಎಂದು ಸಭೆಯಲ್ಲಿ ಪ್ರಶ್ನಿಸಿದರು.
ಸಾರ್ವಜನಿಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಪವಿಭಾ ಗಾಧಿಕಾರಿಗಳು ತಕ್ಷಣ ಜಿಲ್ಲಾಧಿ ಕಾರಿಗಳನ್ನು ಸಂಪರ್ಕಿಸಿ ಜಾತ್ರಾ ಸಮಿತಿ ರಚನೆಯ ಕುರಿತು ನಿರ್ದೇಶನ ಪಡೆದು ಅವಕಾಶವಿದ್ದರೇ ಮತ್ತೆ ಪೂರ್ವಬಾವಿ ಸಭೆ ಕರೆದು ಅಗತ್ಯ ಕ್ರಮವಹಿಸುತ್ತೇವೆ ಎಂದರು.
ಸಭೆಯಲ್ಲಿ ಸಾಗರ ತಹಶೀಲ್ದಾರ್ ಸೈಯದ್ ಕಲೀಮುಲ್ಲಾ,ಲೋಕೋಪಯೋಗಿ ಕಾರ್ಯಪಲಕ ಅಬಿಯಂತರ ಮಂಜುನಾಥ್,ಗಣಪತಿ ದೇವಸ್ಥಾನದ ಕಾರ್ಯನಿರ್ವ ಹಣಾಧಿಕಾರಿ ಪ್ರಮಿಳಾ ಕುಮಾರಿ,ಸಾಗರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ನಾಗೇಶ್ ಬ್ಯಾಲಾಳ್, ನಗರಸಭೆಯ ನಾಗಪ್ಪ ಹೆಚ್.ಕೆ ಮೊದಲಾ ದವರು ಉಪಸ್ಥಿತರಿದ್ದರು.