ಶಿವಮೊಗ್ಗ,ಮಾ.೮:
ಎಪ್ರಿಲ್ ೬ ರಂದು ಜಿಲ್ಲಾ ಕೇಂದ್ರೀಯ ಸಹಕಾರ ಬ್ಯಾಂಕಿಗೆ (ಡಿಸಿಸಿ) ಚುನಾವಣೆ ನಡೆಯಲಿದ್ದು, ಶಿವಮೊಗ್ಗ ತಾಲ್ಲೂಕಿನಲ್ಲಿ ಸುಮಾರು ೨೫ ವಿ.ಎಸ್.ಎಸ್.ಎನ್ (ವ್ಯವಸಾಯ ಸಹಕಾರ ಸಂಘ ನಿಯಮಿತ) ಗಳು ಮತ ಹಾಕಲು ಅರ್ಹತೆ ಪಡೆದಿವೆ. ಪ್ರತಿ ವಿ.ಎಸ್.ಎಸ್.ಎನ್ ನಿಂದ ಡೆಲಿಗೇಷನ್ ತರಬೇಕಾಗಿದ್ದು
, ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಅಧಿಕಾರಿಗಳು ಅನಗತ್ಯ ಹಸ್ತಕ್ಷೇಪ ಮಾಡಿ, ಪ್ರಭಾವ ಬೀರಿ ಅಧಿಕಾರಿಗಳಿಂದ ವಿ.ಎಸ್.ಎಸ್.ಎನ್ ಸೊಸೈಟಿಯ ಮೇಲೆ ಒತ್ತಡ ಹೇರಿ ನಾವು ಹೇಳಿದವರನ್ನೇ ನೀವು ಡೆಲಿಗೇಷನ್ ಕಳುಹಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ ಸೊಸೈಟಿಗೆ ಯಾವುದೇ
ಅನುದಾನ ಹಾಗೂ ಆರ್ಥಿಕ ಸಹಾಯ ನೀಡುವುದಿಲ್ಲ ಎಂದು ಬೆದರಿಸುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಆರೋಪಿಸಿದೆ.
ಮೇಲಿನ ಹನಸವಾಡಿ, ಸೂಗೂರು, ಹರಮಘಟ್ಟ, ಮಂಡಗಟ್ಟ ಮುಂತಾದ ಸೊಸೈಟಿಗಳಲ್ಲಿ ಹಸ್ತಕ್ಷೇಪ ಮಾಡಿರುವ ಬಗ್ಗೆ ಮಾಹಿತಿ ಇದೆ. ಸಮಿತಿ ತೀರ್ಮಾನ ಮಾಡಿದ್ದರೂ ಅಧ್ಯಕ್ಷರಿಗೆ ಸಹಿ ಹಾಕದಂತೆ ತಾಕೀತು ಮಾಡುತ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿಯವರು ಜಿಲ್ಲಾ ಸಹಕಾರಿ ಇಲಾಖೆಯ ಉಪನಿಬಂಧಕ ಮತ್ತು
ಸಹಾಯಕ ನಿಬಂಧಕರಿಗೆ ಸೂಚನೆ ಕೊಟ್ಟು. ಈ ರೀತಿ ಆಗದಂತೆ ಎಚ್ಚರ ವಹಿಸಬೇಕೆಂದು ಬಿಜೆಪಿ ಕೋರಿದೆ.
ಈ ಬಗ್ಗೆ ಗುರುವಾರ ಜಿಲ್ಲಾಧಿಕಾರಿ ಅವರಿಗೆ ಬಿಜೆಪಿ ಅಧ್ಯಕ್ಷ ಮೇಘರಾಜ್ ನೇತೃತ್ವದಲ್ಲಿ ಮನವಿ ಸಲ್ಲಿಸಿದೆ.