ವಿಧಾನ ಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ಘೋಷಣೆಯ ವಿರುದ್ಧ ವಿಪಕ್ಷಗಳ ಮುಗಿಬಿದ್ದಿವೆ. ಎಲ್ಲೋ ಹೊರಗಡೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಲಾಗುತ್ತಿದ್ದ ಘೋಷಣೆಗಳು ವಿಧಾನ ಸಭೆಯ ಒಳಗೆ ಮೊಳಗಿಸಿರುವುದು ವಿಪಕ್ಷಗಳಿಗೆ ದೊಡ್ಡ ಆಹಾರವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ
ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದು, ರಾಷ್ಟ್ರದ ವಿಭಜನೆ ಮಾಡುವ ದಿಕ್ಕಿನಲ್ಲಿ ಡಿ.ಕೆ.ಸುರೇಶ್ ಹೇಳಿಕೆ ಕೊಟ್ಟಿದ್ದರು. ಖರ್ಗೆ ಅವರು ಅವರ ಹೇಳಿಕೆ ಖಂಡಿಸಿದ್ದರು. ಆದರೆ ಡಿಕೆಶಿ ತಮ್ಮನ ಪರವಾಗಿ ನಿಂತರು. ಭಾರತ ಮಾತಾಕೀ ಜೈ ಅಂತಾ ಘೋಷಣೆ ಕೂಗಬೇಕಿತ್ತು. ಆದರೆ ರಾಜ್ಯ ಸರಕಾರ ಪಾಕಿಸ್ತಾನದ ಪರವಾಗಿ ನಿಂತಿದೆಯಾ ಅಥವಾ ಭಾರತ ದೇಶದ ಪರವಾಗಿ ಇದೆಯಾ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಪಾಕಿಸ್ತಾನದ ಪರ ಘೋಷಣೆ ಕೂಗಿದ ರಾಷ್ಟ್ರದ್ರೋಹಿಗಳನ್ನ ಬಂಧಿಸಬೇಕು. ಖರ್ಗೆ ಅವರೇ ನಿಮ್ಮ ರಿಯಾಕ್ಷನ್ ಏನು? ನಾಸೀರ್ ಹುಸೇನ್ ಬೇಜವಾಬ್ದಾರಿಯಿಂದ ಓಡಿ ಹೋಗ್ತಾನೆ. ಕಾಂಗ್ರೆಸ್ ಶಾಸಕರು ತಲೆ ತಗ್ಗಿಸುವಂತಾಗಿದೆ. ಕಾಂಗ್ರೆಸ್ ಶಾಸಕರು ಖಂಡಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಶಾಸಕರ ಜಿನ್ನಾ ಸಂಸ್ಕೃತಿ ಮುಂದುವರಿದಂತಾಗುತ್ತದೆ ಎಂದು ಗುಡುಗಿದ್ದಾರೆ.
ನಾಸೀರ್ ಹುಸೇನ್ ಕ್ಷಮೆ ಕೇಳಲಿ
ನಾಸೀರ್ ಹುಸೇನ್ ರಾಜ್ಯದ ಜನರ ಕ್ಷಮೆ ಕೇಳಬೇಕು. ಪಾಕಿಸ್ತಾನದ ಪರವಾಗಿ ನಾವಿದ್ದರೆ ಹೆಚ್ಚಿನ ಬಲ ಸಿಗುತ್ತದೆ ಎಂಬ ಭ್ರಮೆ ಕಾಂಗ್ರೆಸ್ ನಾಯಕರದ್ದಾಗಿದೆ. ಕಾಂಗ್ರೆಸ್ ಪಾಕಿಸ್ತಾನ ಪರ ಇದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ. ರಾಜ್ಯಸಭೆ ಚುನಾವಣೆ ಗೆದ್ದ ಜೋಷ್ ಭಾರತದ ಪರವಾಗಿ ಇರಬೇಕಿತ್ತು. ಕಾಂಗ್ರೆಸ್ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಮುಸ್ಲಿಂರ ಸಂತೃಪ್ತಿಪಡಿಸೋದು ನಮ್ಮ ಹಕ್ಕು ಎಂಬುದು ಕಾಂಗ್ರೆಸ್ ನದ್ದಾಗಿದೆ.ರಾಜ್ಯ ರಾಷ್ಟ್ರದ ನಾಯಕರು ಏನು ಕ್ರಮ ಕೈಗೊಳ್ಳಬೇಕು ಅಂತಾ ಚರ್ಚೆ ಮಾಡ್ತಾರೆ ಕಾದು ನೋಡೋಣ ಎಂದರು.
ಕಾಶ್ಮೀರದಲ್ಲಿ ಈ ರೀತಿ ನಡೆಯುತಿತ್ತು. ಅದರ ಛಾಯೆ ಕರ್ನಾಟಕದ ಮೇಲೆ ಬೀಳುತ್ತಿದೆ. ಅಂತಹ ವ್ಯಕ್ತಿ ರಾಜ್ಯ ಸಭೆಗೆ ಆಯ್ಕೆ ಮಾಡಿರೋದು ತುಂಬ ನೋವಾಗಿದೆ ಎಂದರು
ಆರಗ ಗುಡುಗು
ನಾಸೀರ್ ಹುಸೇನ್ ರಾಜ್ಯಸಭೆಗೆ ಆಯ್ಕೆಯಾದ ನಂತರ ಅವರ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ಏನು ತಿಳಿದುಕೊಂಡಿದ್ದಾರೆ ಅವರು. ಇದನ್ನು ಕೇಳಿ ಬಹಳ ನೋವಾಯ್ತು. ನಾವೆಲ್ಲಾ ತಲೆ ತಗ್ಗಿಸುವಂತಹ ಸ್ಥಿತಿ ಇದು. ಶಕ್ತಿಕೇಂದ್ರವಾದ ವಿಧಾನಸೌಧದಲ್ಲಿ ಈ ರೀತಿ ಘೋಷಣೆ ಕೂಗ್ತಾನೆ ಅಂದ್ರೆ ಕಾಂಗ್ರೆಸ್ ನವರು ನಾಚಿಕೆಯಿಂದ ತಲೆತಗ್ಗಿಸಬೇಕು. ಆ ಘೋಷಣೆ ಕೂಗಿದವನನ್ನು ಪೊಲೀಸರಿಗೆ ಹಿಡಿದುಕೊಡಬೇಕು. ಒಬ್ಬ ಕೂಗಿದ್ದಲ್ಲ ಅಲ್ಲಿ ತುಂಬಾ ಧ್ವನಿ ಕೇಳ್ತಿದೆ. ಈ ರೀತಿಯಾದರೆ ದೇಶ ಎಲ್ಲಿಗೆ ಹೋಗ್ತದೆ ಎಂದು ತೀರ್ಥಹಳ್ಳಿಯಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆತಂಕ ವ್ಯಕ್ತಪಡಿಸಿದರು.
ಇತ್ತೀಚೆಗೆ ಸಿದ್ದರಾಮಯ್ಯ ಸರಕಾರ ಮುಸ್ಲಿಂ ಸಮುದಾಯ ತುಷ್ಟೀಕರಣ ಮಾಡಿ ಹಿಂದು ಮುಸ್ಲಿಂ ಒಟ್ಟಾಗಲು ಬಿಡ್ತಿಲ್ಲ. ಧರ್ಮದ ಆಧಾರದ ಮೇಲೆ ಸೌಲಭ್ಯ ಕೊಡ್ತೀವಿ ನೀವು ಹಾಗೆಯೇ ಇರಿ ಅಂತಿದ್ದಾರೆ ಸಿದ್ದರಾಮಯ್ಯ. ಇದರ ಪರಿಣಾಮ ಕರ್ನಾಟಕದಲ್ಲಿ ಈ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಈ ದೇಶವನ್ನು ಪ್ರೀತಿಸುವವರಿಗೆ ಬಹಳ ನೋವಾಗಿದೆದೇಶವನ್ನು ಹೊಡೆಯುವ ಶಕ್ತಿಗಳಿಗೆ ಬೆಂಬಲ ಕೊಟ್ಟಿದ್ದೆ ಕಾಂಗ್ರೆಸ್ ಎಂದು ದೂರಿದರು.
ನಾಸೀರ್ ಹುಸೇನ್ ಅವರನ್ನೂ ವಿಚಾರಣೆಗೆ ಒಳಪಡಿಸಲಿ
ಓಟಿನ ಆಸೆಗಾಗಿ ತುಷ್ಟೀಕರಣ ಮಾಡ್ತಾ ಮಾಡ್ತಾ ಮುಸ್ಲಿಮರಲ್ಲಿನ ಯುವಕರು ದೇಶದ್ರೋಹಿ ಆಗಲು ಹೇಸುವುದಿಲ್ಲ. ಈ ರೀತಿಯ ಘೋಷಣೆಯನ್ನು ಕಿವಿಯಾರೆ ಕೇಳುವ ಸಂದರ್ಭ ಬಂದಿದೆ. ಈ ಘೋಷಣೆಯನ್ನು ನಾನು ಖಂಡಿಸುತ್ತೇನೆ. ತಕ್ಷಣ ದೇಶದ್ರೋಹಿ ಆಪಾದನೆ ಮೇಲೆ ಬಂಧಿಸಬೇಕು. ನಾಸೀರ್ ಹುಸೇನ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು. ಇದೇನು ಪಾಕಿಸ್ತಾನ ಚುನಾವಣೆನಾ, ಹಿಂದುಸ್ತಾನ ಚುನಾವಣೆನಾ ಎಂದು ದೂರಿದರು