ಶಿವಮೊಗ್ಗ,ಫೆ.೨೩: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಎಸ್.ಸಿ.ಪಿ. ಹಾಗೂ ಎಸ್.ಟಿ.ಪಿ. ಅನುದಾನವನ್ನು ವಂಚಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಬಿಜೆಪಿ ಎಸ್.ಸಿ., ಎಸ್.ಟಿ. ಮೋರ್ಚಾದ ವತಿಯಿಂದ ಸೀನಪ್ಪಶೆಟ್ಟಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಳೆದ ೯ತಿಂಗಳುಗಳಲ್ಲಿ ಕಾಂಗ್ರೆಸ್ ಆಡಳಿತದ ಸರ್ಕಾರವು ದಲಿತ ಸಮುದಾಯವನ್ನು ವಂಚಿಸುತ್ತ ಬಂದಿದೆ. ಚುನಾವಣೆಯಲ್ಲಿ ದಲಿತರಿಗೆ ಮೀಸಲಾಗಿಟ್ಟಿದ್ದ ೧೧,೧೪೪ ಕೋಟಿ ಎಸ್‌ಸಿಎಸ್‌ಪಿ, ಟಿ.ಎಸ್.ಪಿ. ಹಣವನ್ನು ಗ್ಯಾರಂಟಿ ಯೋಜನೆಗಳಲ್ಲಿ ಬಳಕೆ ಮಾಡಲು ವರ್ಗಾಯಿಸಿ ದಲಿತರ ಹಣವನ್ನು ಗ್ಯಾರಂಟಿಗಳಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ದಲಿತರ ಹಿತರಕ್ಷಣೆ ಮಾಡಬೇಕಾಗಿದ್ದ ಸಮಾಜ ಕಲ್ಯಾಣ ಸಚಿವ ಎಸ್.ಸಿ. ಮಹಾದೇವಪ್ಪನವರು ಈ ಅನ್ಯಾಯದ ವಿರುದ್ಧ ಸೊಲ್ಲೆತ್ತದೆ ಕಾಂಗ್ರೆಸ್ ಪಾರ್ಟಿಯ ಹಿತಕ್ಕೆ ದಲಿತ ಸಮುದಾಯವನ್ನು ಬಲಿಕೊಟ್ಟು ರಾಜೀಯಾಗಿದ್ದಾರೆ ಹಾಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅಲ್ಪ ಸಂಖ್ಯಾತರಿಗೆ ೧೦ ಸಾವಿರ ಕೋಟಿ ಹಣವನ್ನು ವೆಚ್ಚ ಮಾಡಲು ಮಾತ್ರ ಯಾವ ಗ್ಯಾರಂಟಿಯೂ ಅಡ್ಡಿ ಬರುವುದಿಲ್ಲ. ಆದರೆ, ದಲಿತರ ಹಣವನ್ನು ಬಳಸಲು ಇವರಿಗೆ ಬರುತ್ತದೆ. ಇದು ಓಟು ಬ್ಯಾಂಕ್ ರಾಜಕಾರಣ ಎಂದು ದೂರಿದರು.
ಮೋರಾರ್ಜಿ ಶಾಲೆಯ ಅಭಿವೃದ್ಧಿ ಮತ್ತು ಹೊಸ ಶಾಲೆಗಳ ಆರಂಭಕ್ಕೆ ಇಟ್ಟ ಹಣವು ಕೂಡ ಇತರೆ ಯೋಜನೆ ಬಳಕೆಯಾಗಿದೆ ಮತ್ತು ದಲಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಮೀಸಲಿಟ್ಟ ಹಣವು ಕೂಡ ದುರ್ಬಳಕೆಯಾಗಿದೆ. ಪರಿಶಿಷ್ಟರ ಗೃಹನಿರ್ಮಾಣ ಯೋಜನೆಗೆ ಸ್ಥಗಿತಗೊಂಡಿದೆ. ಪ್ರಧಾನಮಂತ್ರಿ ಅವಾಜ್ ಯೋಜನೆ ಕೋಮ ಸ್ಥಿತಿಗೆ ತಲುಪಿದೆ. ವಿದ್ಯಾರ್ಥಿ ವೇತನ ಸ್ಥಗತಗೊಂಡಿದೆ. ಕೀಸಾನ್ ಸಮ್ಮಾನ್ ಯೋಜನೆಗೆ ಹೆಚ್ಚುವರಿಯಾಗಿ ನೀಡುತ್ತಿದ್ದ ೪ ಸಾವಿರ ರೂ.ಗಳಿಗೂ ಕತ್ತರಿಯಾಕಲಾಗಿದೆ ಎಂದು ದೂರಿದರು.
ರಾಜ್ಯ ಸರ್ಕಾರ ದಲಿತ ಉದ್ಯಮದಾರರನ್ನು ಪ್ರೋತ್ಸಾಹಿಸುತ್ತಿಲ್ಲ. ಬಜೆಟ್‌ನಲ್ಲಿ ಯಾವ ಹಣವನ್ನು ಘೋಷಿಸಿಲ್ಲ. ಕೇಂದ್ರ ಸರ್ಕಾರ ಮುದ್ರಾ ಯೋಜನೆಯಲ್ಲಿ ಸ್ವಯಂ ಉದ್ಯೋಗ ನೀಡಲು ಉತ್ತೇಜನ ಕೊಡುತ್ತಿದ್ದರೆ ರಾಜ್ಯ ಸರ್ಕಾರ ಅದನ್ನು ಕಸಿದುಕೊಳ್ಳುತ್ತಿದೆ. ಗ್ಯಾರಂಟಿಗಳಿಗೆ ನೀಡಬೇಕಾದ ಕಾರಣದಿಂದ ಈ ಬಾರಿಯ ಮುಂಗಡ ಪತ್ರದಲ್ಲಿ ೧೧ ಸಾವಿರ ಕೋಟಿ ಅನುದಾನ ಕಡಿತವಾಗಿದೆ. ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಕೂಡಲೇ ಈ ಹಣವನ್ನು ವಾಪಾಸ್ಸು ಕೊಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಎಸ್.ದತ್ತಾತ್ರಿ, ಮಾಲತೇಶ್, ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ರಾಮನಾಯ್ಕ ಕೋಹಳ್ಳಿ, ಲಿಂಗರಾಜ್, ಎಂ.ರಾಜು, ಹೆಚ್.ಶಿವಾಜಿ, ನಗರಾಧ್ಯಕ್ಷ ಎಂ.ವಿಜಯೇಂದ್ರ, ಹೆಚ್.ಎನ್. ಮಂಜುನಾಥ್, ಎಸ್.ಟಿ. ಮೋರ್ಚಾ ನಗರಾಧ್ಯಕ್ಷ ಹರೀಶ್, ಅಯ್ಯಪ್ಪ, ಗ್ರಾಮಾಂತರ ಕಾರ್ಯದರ್ಶಿ ಧನಂಜಯ್ಯ ಗುಡ್ಡಪ್ಪ, ಸಿ.ಮೂರ್ತಿ, ಜಯ್ಯಪ್ಪ, ಗ್ರಾಮಾಂತರ ಅಧ್ಯಕ್ಷ ಪ್ರಕಾಶ್ ಸೂಗೂರು ಸೇರಿದಂತೆ ಮೊದಲಾದವರಿದ್ದರು.