![Prasanna-Kumar-MLC](https://tungataranga.com/wp-content/uploads/2022/04/Prasanna-Kumar-MLC.jpg)
ಶಿವಮೊಗ್ಗ,ಫೆ.೨೨: ದಿನನಿತ್ಯ ಸಾಮಾನ್ಯ ಜನ ಅನುಭವಿಸುತ್ತಿರುವ ಕಷ್ಟ ನೋವುಗಳಿಗೆ ನಗರ ಜೆಡಿಎಸ್ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದು ಮಾಜಿ ಶಾಸಕ ರಾಜ್ಯ ಹಾಗೂ ಜೆಡಿಎಸ್ ರಾಜ್ಯಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಹೇಳಿದರು.
![](http://tungataranga.com/wp-content/uploads/2023/04/Screenshot_2023_0226_070755-1.jpg)
ನಗರ ಜೆಡಿಎಸ್ ವತಿಯಿಂದ ರಂಗನಾಥ ಬಡಾವಣೆಯ ಶನೇಶ್ವರ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ನೆನ್ನೆ ಸಂಜೆ ಹಮ್ಮಿಕೊಂಡಿದ್ದ ವಾರ್ಡ್ ನಂ. ೧೭, ೨೪ ಹಾಗೂ ೨೫ ರಲ್ಲಿ ಜೆಡಿಎಸ್ ಪ್ರಮುಖರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ,ಸಮಾಜದ ಎಲ್ಲಾ ವರ್ಗದ ಜನರ ಪರವಾಗಿ ನಿಲ್ಲುವ ಪಣವನ್ನು ಜೆಡಿಎಸ್ ತೊಟ್ಟಿದೆ ಎಂದರು.
![](http://tungataranga.com/wp-content/uploads/2024/02/a72ad88a-1466-4741-a6de-daae533cf86e.jpeg)
![](http://tungataranga.com/wp-content/uploads/2024/02/5923f46a-41b4-487b-96e1-7af893686bd8.jpeg)
ನಗರಾಧ್ಯಕ್ಷ ದೀಪಕ್ ಸಿಂಗ್ ಮಾತನಾಡಿ, ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ೩೫ ವಾರ್ಡ್ಗಳಲ್ಲಿ ಸಾಮಾನ್ಯ ಜನ ನಿತ್ಯ ಅನುಭವಿಸುತ್ತಿರುವ ಕಷ್ಟ ಕಾರ್ಪಣ್ಯಗಳ ಮಾಹಿತಿ ಇದೆ. ಅವುಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ನಗರ ಜೆಡಿಎಸ್ ಈಗಾಗಲೇ ಕಾರ್ಯಪ್ರವೃತವಾಗಿದೆ, ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ನಗರ ಜೆಡಿಎಸ್ ಎಂದಿಗೂ ಹಿಂದೇಟು ಹಾಕುವುದಿಲ್ಲ ಎಂದರು.
ಮುಂಬರುವ ದಿನಗಳಲ್ಲಿ ವಾರ್ಡ್ ನಂ. ೧೭, ೨೪ ಮತ್ತು ೨೫ ರಲ್ಲ ಜೆಡಿಎಸ್ ಬಾವುಟ ಹಾರಾಡಲಿದೆ. ಶಿವಮೊಗ್ಗ ನಗರಪಾಲಿಕೆಯಲ್ಲಿ ಜೆಡಿಎಸ್ ಧ್ವಜ ಹಾರಾಡಲು ಪಕ್ಷದ ನಗರ ಕಾರ್ಯಕರ್ತರು, ಮುಖಂಡರು ಇದಕ್ಕಾಗಿ ವಿಶೇಷವಾಗಿ ಶ್ರಮಿಸಬೇಕಾಗಿದೆ ಎಂದರು.
![](http://tungataranga.com/wp-content/uploads/2023/11/Screenshot_2023_1106_140821.jpg)
ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದ ಜಿಲ್ಲಾಧ್ಯಕ್ಷ ಡಾ ಕಡಿದಾಳು ಗೋಪಾಲ್ ರವರು ಪ್ರತಿ ಬಡಾವಣೆಯ ಬೂತ್ ಸಮಿತಿಗಳೇ ಸುಪ್ರೀಂ ಆಗಬೇಕು, ಪ್ರತಿ ಬೂತ್ ಮಟ್ಟದ ಸಮಸ್ಯೆಗಳನ್ನು ಸ್ಥಳೀಯ ಮುಖಂಡರ ಮೂಲಕ ಅಥವಾ ನಗರ ಸಮಿತಿ ಅಧ್ಯಕ್ಷರ ಗಮನಕ್ಕೆ ತಂದರೆ ಸಮಸ್ಯ ನಿವಾರಣೆ ಖಂಡಿತ ಹಾಗೂ ನಗರ ಜೆಡಿಎಸ್ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ತ್ಯಾಗರಾಜ್, ನಗರ ಪಾಲಿಕೆ ಮಾಜಿ ಸದಸ್ಯ ಮಹೇಶ್, ಮುಖಂಡರಾದ ರಮೇಶ್ ನಾಯಕ್, ಜಯಣ್ಣ, ಸುನಿಲ್ ಗೌಡ, ಲೋಹಿತ್, ವಿನಯ್, ಮನೋಹರ್, ದಯಾನಂದ್, ಶಂಕರ್ ರವಿ, ಪುಷ್ಪ, ಜ್ಯೋತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.